ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

Written By:

ಜುಲೈ 1 ರಿಂದ ದೇಶಾದ್ಯಂತ ಏಕರೂಪದ ತೆರಿಗೆ ನೀತಿ(ಜಿಎಸ್‌ಟಿ) ಜಾರಿಗೆ ಬರುತ್ತಿದ್ದು, ಆಡಿ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಐಷಾರಾಮಿ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ ಸಂಸ್ಥೆಯು ಜಿಎಸ್‌ಟಿ ಜಾರಿ ಬರುತ್ತಿರುವ ಹಿನ್ನೆಲೆ ವಿವಿಧ ಕಾರು ಮಾದರಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಯಾವ ಕಾರಿನ ಖರೀದಿ ಮೇಲೆ ಎಷ್ಟು ಡಿಸ್ಕೌಂಟ್ ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಆಡಿ ಎ3, ಎ4, ಎ6 ಮತ್ತು ಕ್ಯೂ3 ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಖರೀದಿ ಮೇಲೆ ಶೇ.3 ರಷ್ಟು ರಿಯಾಯ್ತಿ ದೊರೆಯಲಿದೆ.

ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಜಿಎಸ್‌ಟಿ ಜಾರಿಗೆ ಬರುವುದರಿಂದ ಕಾರು ಉತ್ಪಾದಕರಿಗೆ ಇದುವರೆಗೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಸೆನ್ಸ್‌ಗಳು ಕಡಿತವಾಗಲಿದ್ದು, ಏಕರೂಪದ ತೆರಿಗೆಗಳು ಮಾತ್ರ ಅನ್ವಯವಾಗಲಿವೆ.

ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಈ ಹಿನ್ನಲೆ ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡುತ್ತಿರುವ ಕಾರು ಉತ್ಪಾದಕರು, ಸೆಸ್ ಉಳಿತಾಯವನ್ನು ಗ್ರಾಹಕರಿಗೆ ಡಿಸ್ಕೌಂಟ್ ರೂಪದಲ್ಲಿ ನೀಡುವ ಮೂಲಕ ಕಾರು ಮಾರಾಟ ಹೆಚ್ಚಿಸುವ ನೀರಿಕ್ಷೆಯಲ್ಲಿದ್ದಾರೆ.

ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಇನ್ನು ಆಡಿ ಸಂಸ್ಥೆಯು ಎ3 ಪ್ರಿಮಿಯಂ ಕಾರು ಖರೀದಿ ಮೇಲೆ ಸುಮಾರು 2.30 ಲಕ್ಷ ಘೋಷಣೆ ಮಾಡಿದ್ದು, ರೂ.32.30 ಲಕ್ಷ ಬೆಲೆಯ ಕಾರು ರೂ.29.99 ಲಕ್ಷಕ್ಕೆ ದೊರೆಯಲಿದೆ.

ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಇದಲ್ಲದೇ ಎ4, ಎ6 ಮತ್ತು ಕ್ಯೂ3 ಖರೀದಿ ಮೇಲೆ ರೂ.6 ಲಕ್ಷದವರೆಗೆ ಡಿಸ್ಕೌಂಟ್ ದೊರೆಯಲಿದ್ದು, ಕಾರು ಖರೀದಿದಾರರಿಗೆ ಹಬ್ಬವೇ ಸರಿ.

ಜಿಎಸ್‌ಟಿ ಎಫೆಕ್ಟ್- ಆಡಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!!

ಆಡಿ ಘೋಷಣೆ ಮಾಡಿರುವ ಡಿಸ್ಕೌಂಟ್ ಬೆಲೆಗಳು ಜುಲೈ 1ರ ನಂತರ ಅನ್ವಯವಾಗಲಿದ್ದು, ಐಷಾರಾಮಿ ಕಾರು ಉತ್ಪಾದಕರಿಗೆ ಕೇಂದ್ರದ ಜಿಎಸ್‌ಟಿ ವರವಾಗಿ ಪರಿಣಮಿಸಿದೆ.

Read more on ಆಡಿ audi
English summary
Read in Kannada about audi offer GST discounts
Story first published: Monday, June 12, 2017, 10:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark