ಇ-ಟ್ರಾನ್ ಎಫ್ಇ 04 ಫಾರ್ಮುಲಾ ಎಲೆಕ್ಟ್ರಿಕ್ ರೇಸ್ ಕಾರನ್ನು ಅನಾವರಣಗೊಳಿಸಿದ ಆಡಿ

ಜರ್ಮನಿಯ ವಾಹನ ತಯಾರಕ ಕಂಪೆನಿಯಾದ ಆಡಿ ತನ್ನ ಫಾರ್ಮುಲಾ ಇ ಚಾಂಪಿಯನ್‌ಷಿಪ್‌ಗಾಗಿ ಇ-ಟ್ರಾನ್ ಎಫ್ಇ 04 ಎಂದು ಹೆಸರಿಸಲಾದ ತನ್ನ ಮೊದಲ ಎಲ್ಲಾ ಎಲೆಕ್ಟ್ರಿಕ್ ರೇಸ್ ಕಾರನ್ನು ಬಹಿರಂಗಪಡಿಸಿದೆ.

By Girish

ಎಬಿಟಿ ಸ್ಪೋರ್ಟ್‌ಲೈನ್ ತಂಡವನ್ನು ಕೊಂಡುಕೊಂಡ ನಂತರ, ಆಲ್-ಎಲೆಕ್ಟ್ರಿಕ್ ರೇಸಿಂಗ್ ಸರಣಿಯನ್ನು ಪ್ರವೇಶಿಸುತ್ತಿರುವ ಮೊದಲ ಜರ್ಮನ್ ತಯಾರಕ ಎಂಬ ಖ್ಯಾತಿಗೆ ಆಡಿ ಪಾತ್ರವಾಗಿದೆ ಹಾಗು ಈ ಹೊಸ ತಂಡದ ಹೆಸರನ್ನು ಆಡಿ ಸ್ಪೋರ್ಟ್ ಎಬಿಟಿ ಸ್ಚಾಫ್ಲರ್ ಎಂದು ಹೆಸರಿಸಲಾಗಿದೆ.

ಇ-ಟ್ರಾನ್ ಎಫ್ಇ 04 ಫಾರ್ಮುಲಾ ಎಲೆಕ್ಟ್ರಿಕ್ ರೇಸ್ ಕಾರನ್ನು ಅನಾವರಣಗೊಳಿಸಿದ ಆಡಿ

ಇ-ಟ್ರಾನ್ ಎಫ್ಇ 04 ಎಲೆಕ್ಟ್ರಿಕ್ ರೇಸ್ ಕಾರು, ಸ್ಚಾಫ್ಲರ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಪವರ್‌ಟ್ರಾನ್ ಒಳಗೊಂಡಿದ್ದು, ಇದರಲ್ಲಿ ವಿದ್ಯುತ್ ಮೋಟರ್, ಟ್ರಾನ್ಸ್‌ಮಿಷನ್, ಸಸ್ಪೆನ್‌ಷನ್ ಭಾಗಗಳು ಮತ್ತು ಅಗತ್ಯ ಸಾಫ್ಟ್‌ವರ್‌ಗಳು ಸೇರಿವೆ.

ಇ-ಟ್ರಾನ್ ಎಫ್ಇ 04 ಫಾರ್ಮುಲಾ ಎಲೆಕ್ಟ್ರಿಕ್ ರೇಸ್ ಕಾರನ್ನು ಅನಾವರಣಗೊಳಿಸಿದ ಆಡಿ

ಹೆಚ್ಚಿನ ಸಾಮರ್ಥ್ಯಕ್ಕಾಗಿ ಅಭಿವೃದ್ಧಿಪಡಿಸಿದ ಏಕ-ವೇಗದ ಟ್ರಾನ್ಸ್‌ಮಿಷನ್ ಈ ಎಲೆಕ್ಟ್ರಿಕ್ ರೇಸ್ ಕಾರು ಒಳಗೊಂಡಿರಲಿದ್ದು, ಅಸಾಧಾರಣ ಪ್ರದರ್ಶನವನ್ನು ನೀಡುವಂತೆ ಮಾಡಲು ಎಂಜಿನಿಯರ್‌ಗಳು ಮೋಟರ್-ಜನರೇಟರ್ ವಿನ್ಯಾಸದ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ.

ಇ-ಟ್ರಾನ್ ಎಫ್ಇ 04 ಫಾರ್ಮುಲಾ ಎಲೆಕ್ಟ್ರಿಕ್ ರೇಸ್ ಕಾರನ್ನು ಅನಾವರಣಗೊಳಿಸಿದ ಆಡಿ

ಇದಲ್ಲದೆ ಆಡಿ ಕಂಪನಿಯು, ಮೂರು ಬಾರಿ ಲೆ-ಮಾನ್ಸ್ ಪ್ರಶಸ್ತಿ ವಿಜೇತ ಅಲನ್ ಮೆಕ್ನೀಶ್ ಅವರನ್ನು ತನ್ನ ಹೊಸ ತಂಡದ ಪ್ರಧಾನ ವ್ಯಕ್ತಿಯನ್ನಾಗಿ ನೇಮಕ ಮಾಡಿದೆ.

ಇ-ಟ್ರಾನ್ ಎಫ್ಇ 04 ಫಾರ್ಮುಲಾ ಎಲೆಕ್ಟ್ರಿಕ್ ರೇಸ್ ಕಾರನ್ನು ಅನಾವರಣಗೊಳಿಸಿದ ಆಡಿ

ಈ ಇ-ಟ್ರಾನ್ ಎಫ್ಇ 04 ಎಲೆಕ್ಟ್ರಿಕ್ ರೇಸ್ ಕಾರು ಹೊಸ ಸ್ಪೋರ್ಟ್ಸ್ ಬಿಳಿ, ಕಪ್ಪು ಮತ್ತು ಹಸಿರು ಬಣ್ಣ ಮಿಶ್ರಣದೊಂದಿಗೆ ಅನಾವರಣಗೊಂಡಿದ್ದು, ಮುಂಬರುವ 2017ರ ಡಿಸೆಂಬರ್ 2 ರಂದು ನೆಡೆಯಲಿರುವ ರೇಸ್‌ನಲ್ಲಿ ಮೊದಲ ಬಾರಿಗೆ ಪ್ರವೇಶ ಮಾಡಲಿದೆ.

ಇ-ಟ್ರಾನ್ ಎಫ್ಇ 04 ಫಾರ್ಮುಲಾ ಎಲೆಕ್ಟ್ರಿಕ್ ರೇಸ್ ಕಾರನ್ನು ಅನಾವರಣಗೊಳಿಸಿದ ಆಡಿ

ಫಾರ್ಮುಲಾ ಇ ನಲ್ಲಿ ಮೊದಲ ಬಾರಿಗೆ ಜರ್ಮನ್ ವಾಹನ ತಯಾರಕ ಕಂಪನಿಯು 2019ರಲ್ಲಿ BMW ಜೊತೆ ಒಗ್ಗೂಡಲಿದ್ದು, ಫಾರ್ಮುಲಾ ಇ ಕಾರು ಆಡಿ ಕಂಪನಿಯ ಹೊಸ ತಂತ್ರಜ್ಞಾನವನ್ನು ಪಡೆದುಕೊಂಡಿದೆ.

Most Read Articles

Kannada
Read more on ಆಡಿ audi
English summary
German automaker Audi has revealed its first all-electric race car for the Formula E championship, named as e-tron FE04.
Story first published: Thursday, September 28, 2017, 16:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X