ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

Written By:

ಜರ್ಮನ್ ಕಾರು ತಯಾರಿಕ ಕಂಪನಿಯಾದ ಆಡಿ ತನ್ನ ಕ್ಯೂ ಸರಣಿಯ ಕ್ಯೂ7 ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಕಾರು ರೂ. 81.99 ಲಕ್ಷ ಬೆಲೆ ಪಡೆದುಕೊಂಡಿದೆ.

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಆಡಿ ಕ್ಯೂ7 ಕಾರು ಸೀಮಿತ ಆವೃತ್ತಿಯ ವಾಹನವಾಗಿದ್ದು, ಆಯ್ದ ಪ್ರಮಾಣದಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಈ ಡಿಸೈನ್ ಆವೃತ್ತಿಯು ಹೆಚ್ಚು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಗೊಂಡಿದ್ದು, ಕಾರಿನ ಭಾಗಗಳು ಪ್ರತ್ಯೇಕ ವಾಹನದಂತೆ ಅನನ್ಯವಾಗಿದೆ ಎನ್ನಬಹುದು.

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಈ ನವೀನ ಮಾದರಿಯ ಡಿಸೈನ್ ಕ್ಯೂ7 ಆವೃತ್ತಿಯು ಸ್ಮಾರ್ಟ್‌ಫೋನ್ ಇಂಟರ್‌ಫೇಸ್ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಬಿಡುಗಡೆಗೊಂಡಿದ್ದು, ಸ್ಮೋಕ್ ಟೈಲ್ ಲ್ಯಾಂಪ್, ರನ್ನಿಂಗ್ ಬೋರ್ಡ್ ಹಾಗು 20 ಇಂಚಿನ ಅಲ್ಯೂಮಿನಿಯಂ ಚಕ್ರಗಳನ್ನು ಪಡೆದಿದೆ.

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಆಡಿ ತನ್ನ ಕ್ಯೂ ಸರಣಿಯ ಕ್ಯೂ7 ಕಾರಿನಲ್ಲಿ ಅತ್ಯುತ್ತಮವಾದ 3.0-ಲೀಟರ್ಸ್ ತಂತ್ರಜ್ಞಾನದ ಎಂಜಿನ್ ಇರಿಸಿದ್ದು, 600 ಎನ್ಎಂ ತಿರುಗುಬಲದಲ್ಲಿ 249 ರಷ್ಟು ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಪ್ಯಾಡಲ್ ಶಿಫ್ಟರ್ ಜೊತೆಗೆ ಬಂದಿರುವ ಸ್ವಯಂಚಾಲಿತ ಗೇರ್ ಬಾಕ್ಸ್ ಕಾರಿನ ಎಲ್ಲಾ ನಾಲ್ಕು ಚಕ್ರಗಳಿಗೂ ಕ್ವಾಟ್ರೊ ಪರ್ಮನೆಂಟ್ ಆಲ್-ವೀಲ್-ಡ್ರೈವ್ ಸಿಸ್ಟಮ್ ಮೂಲಕ ಶಕ್ತಿ ಪ್ರಸರಣೆ ಮಾಡಲಿದೆ.

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಸಾಮಾನ್ಯ ಮಾದರಿಯಲ್ಲಿ ಇಲ್ಲದೆ ಇರುವಂತಹ ಸೌಲಭ್ಯಗಳ ಪಟ್ಟಿಯು ಕೆಳಗೆ ವಿವರಿಸಲಾಗಿದೆ :

1 ಡೈನಾಮಿಕ್ ಇಂಡಿಕೇಟರ್ಸ್ ಜೊತೆ ಆಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪುಗಳು

2 ಕಾರಿನ ಬಣ್ಣದಲ್ಲಿ ಎಕ್ಸ್‌ಟೀರಿಯರ್ ಮಿರರ್ ಹೌಸಿಂಗ್

3 ಪನೋರಮಿಕ್ ಸನ್‌ರೂಫ್

4 ಹೈ ಗ್ಲೋಸ್ ಪ್ಯಾಕೇಜ್

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಇಂಟೀರಿಯರ್ :

ಆಂಬಿಯೆಂಟ್ ಲೈಟಿಂಗ್ ಪ್ಯಾಕೇಜ್

ಅಪ್‌ಹೋಲ್‌ಸ್ಟ್ರೇ ಇನ್ ಕ್ರಿಕೆಟ್ ಲೆದರ್

ಅಡಾಪ್ಟಿವ್ ಏರ್ ಸೂಸ್ಪೆನ್‌ಷನ್ ಜೊತೆ ಆಲ್-ರೋಡ್ ಮತ್ತು ಆಫ್-ರೋಡ್ ಮೋಡ್

ಆಡಿ ಡ್ರೈವ್ ಸೆಲೆಕ್ಟ್

4-ವೇ ಲುಮ್‌ಬರ್ ಸಪೋರ್ಟ್

ಎಲೆಕ್ಟ್ರಿಕ್ ಲಗೇಜ್ ಕಂಪಾರ್ಟ್ಮೆಂಟ್ ಮುಚ್ಚಳ

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಇನ್ಫೋಟೈನ್ಮೆಂಟ್

ಎಂಎಂಐ ನೇವಿಗೇಶನ್ ಪ್ಲಸ್ ಜೊತೆ ಎಂಎಂಐ ಟಚ್

ಬಾಸ್ ಸರೌಂಡ್ ಸೌಂಡ್ ಸಿಸ್ಟಮ್ ಜೊತೆ 3ಡಿ ಸೌಂಡ್

ಆಡಿ ವರ್ಚುಯಲ್ ಕಾಕ್‌ಪಿಟ್

ಬ್ಲೂಟೂತ್ ಇಂಟರ್ಫೇಸ್

ವಾಯ್ಸ್ ಡೈಲಾಗ್ ಸಿಸ್ಟಮ್ ಒಳಗೊಂಡಿರಲಿದೆ.

ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ. 81.99 ಲಕ್ಷ

ಭಾರತದಲ್ಲಿ 10 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯಲ್ಲಿರುವ ಆಡಿ, ಕ್ಯೂ7 ವಾಹನಗಳ ವಿನ್ಯಾಸ ಆವೃತ್ತಿಯನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Read more on ಆಡಿ audi
English summary
Read in Kannada about German carmaker Audi has introduced the Q7 Design Edition in India, priced at Rs 81.99 lakh.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark