ಪೆಟ್ರೋಲ್ ಎಂಜಿನ್ ಪಡೆದ ಆಡಿ ಕ್ಯೂ6 ಕಾರು ಭಾರತದಲ್ಲಿ ಬಿಡುಗಡೆ

Written By:

ಜನಪ್ರಿಯ ಐಷಾರಾಮಿ ಕಾರು ತಯಾರಿಕ ಕಂಪನಿಯಾದ ಆಡಿ ತನ್ನ ಕ್ಯೂ ಸರಣಿಯ ಪೆಟ್ರೋಲ್ ಎಂಜಿನ್ ಹೊಂದಿರುವ ಕ್ಯೂ7 ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಕಾರು ರೂ. 74.43 ಲಕ್ಷ ಶೋರೂಂ(ಭಾರತ) ಬೆಲೆ ಪಡೆದುಕೊಂಡಿದೆ.

To Follow DriveSpark On Facebook, Click The Like Button
ಪೆಟ್ರೋಲ್ ಎಂಜಿನ್ ಪಡೆದ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ

ಈ ಹಿಂದಿನ ತಲೆಮಾರಿನ ಕ್ಯೂ7 ಕಾರಿನಲ್ಲಿ ಆಡಿ ಕಂಪನಿಯು ಪೆಟ್ರೋಲ್ ಆವೃತಿಯನ್ನು ಬಿಡುಗಡೆಗೊಳಿಸಿತ್ತು, ಆದರೆ ಪ್ರಸ್ತುತ ಪೀಳಿಗೆಯಲ್ಲಿ ಬಿಡುಗಡೆಯನ್ನು ನಿಲ್ಲಿಸಿತ್ತು. ಈಗ ಮತ್ತೆ ಆಡಿ ಕಂಪನಿಯು ದೇಶದಲ್ಲಿ ಕ್ಯೂ7 40 ಟಿಎಫ್‌ಎಸ್‌ಐ ಆವೃತಿಯನ್ನು ಪರಿಚಯಿಸಿದೆ.

ಪೆಟ್ರೋಲ್ ಎಂಜಿನ್ ಪಡೆದ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ

ಈ ಪೆಟ್ರೋಲ್ ವಾಹನವನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಪ್ರೀಮಿಯಂ ಪ್ಲಸ್ ಬೇಸ್ ಕಾರು ರೂ. 67.76 ಲಕ್ಷ ಬೆಲೆ ಹೊಂದಿದೆ ಹಾಗು ಉನ್ನತ ಸ್ಪೆಸಿಫಿಕೇಷನ್ ತಂತ್ರಜ್ಞಾನ ಪಡೆದ ರೂಪಾಂತರವು ರೂ. 74.43 ಲಕ್ಷ ಬೆಲೆ ಪಡೆದುಕೊಂಡಿದೆ.

ಪೆಟ್ರೋಲ್ ಎಂಜಿನ್ ಪಡೆದ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ

ಆಡಿ ತನ್ನ ಕ್ಯೂ ಸರಣಿಯ ಪೆಟ್ರೋಲ್ ಕ್ಯೂ7 ಕಾರು ಬಲಿಷ್ಠವಾದ 2.0-ಲೀಟರ್ಸ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 370ಎನ್ಎಂ ತಿರುಗುಬಲದಲ್ಲಿ 250ರಷ್ಟು ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪೆಟ್ರೋಲ್ ಎಂಜಿನ್ ಪಡೆದ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ

ಈ ಐಷಾರಾಮಿ ಕಾರು ಕೇವಲ 6.9 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗ ತಲುಪುವಷ್ಟು ಬಲಿಷ್ಠವಾಗಿದೆ ಹಾಗು ಕ್ಯೂ7 ಕಾರು 233 ಕಿ.ಮೀ ಗರಿಷ್ಠ ವೇಗ ಮಿತಿ ಹೊಂದಿದೆ.

ಪೆಟ್ರೋಲ್ ಎಂಜಿನ್ ಪಡೆದ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ

ಕ್ಯೂ7 ಕಾರು 19 ಇಂಚಿನ ಅಲಾಯ್ ವೀಲ್, ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಪನೋರಮಿಕ್ ಸನ್ ರೂಫ್, 4-ಸ್ಟ್ರೋಕ್ ಬಹು ಕಾರ್ಯ ಸ್ಟೀರಿಂಗ್ ಚಕ್ರ, ಪ್ಯಾಡಲ್ ಶಿಫ್ಟ್, 4-ಜೋನ್ ಹವಾಮಾನ ನಿಯಂತ್ರಣ, ಆಡಿ ಡ್ರೈವ್ ಆಯ್ಕೆ, 8 ಏರ್ ಬ್ಯಾಗ್‌ಗಳು, ಹಿಂಭಾಗದ ಕ್ಯಾಮೆರಾ, ಆಡಿ ಪಾರ್ಕಿಂಗ್ ಪ್ಲಸ್, ಆಡಿ ಫೋನ್‌ಬಾಕ್ಸ್, ಸೀಟ್ ಹಿಂಬದಿಯ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಮತ್ತು ಆಡಿ ಸೌಂಡ್ ಸಿಸ್ಟಮ್ ಸೌಲಭ್ಯ ಒಳಗೊಂಡಿರಲಿದೆ.

ಪೆಟ್ರೋಲ್ ಎಂಜಿನ್ ಪಡೆದ ಆಡಿ ಕ್ಯೂ7 ಕಾರು ಭಾರತದಲ್ಲಿ ಬಿಡುಗಡೆ

ಇತ್ತೀಚೆಗೆ ಬಿಡುಗಡೆಯಾಗಿರುವ ಕ್ಯೂ7 ಕಾರಿನಲ್ಲಿ ನೀಡಲಾಗಿರುವ ಹೊಸ ಡಿಸೈನ್ ಪಡೆದ ಬಣ್ಣದ ಆಯ್ಕೆಯಲ್ಲಿ ಈ ಕ್ಯೂ7 ಪೆಟ್ರೋಲ್ ಕಾರು ಅನಾವರಣಗೊಂಡಿದ್ದು, ಈ ಕಾರು ಸಂಪೂರ್ಣವಾಗಿ ಪೂರ್ಣಗೊಂಡ ಬಣ್ಣದ ಥೀಮ್ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ.

Read more on ಆಡಿ audi
English summary
Audi has launched a new petrol version of its popular full-sized SUV, the Q7. While Audi did offer a petrol on the last generation Q7, they stopped doing so on the current generation one, offering only the 3.0 liter diesel engine. The company has now introduced the Q7 40 TFSI in the country.
Story first published: Monday, September 4, 2017, 14:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark