ತನ್ನ ಕಾರುಗಳಲ್ಲಿ 'ಮೈಕ್ರೋ-ಹೈಬ್ರಿಡ್' ತಂತ್ರಜ್ಞಾನ ಅಳವಡಿಕೆಗೆ ಮುಂದಾದ ಆಡಿ

Written By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪೆನಿಯಾದಂತಹ ಆಡಿ ತನ್ನ ಆರ್‌ಎಸ್5 ಕ್ರೀಡಾ ಕೂಪ್‌ನಲ್ಲಿ ಮೈಕ್ರೋ-ಹೈಬ್ರಿಡ್ (ಪ್ರಾರಂಭ ಮತ್ತು ನಿಲುಗಡೆ) ತಂತ್ರಜ್ಞಾನವನ್ನು ಬಳಸಲಿದೆ.

ಪ್ರೀಮಿಯಂ ವಿಭಾಗದಲ್ಲಿ ಇಂಧನ ಉಳಿತಾಯ ತಂತ್ರಜ್ಞಾನ ಅಳವಡಿಸಲು ಮುಂದಾಗಿರುವ ಆಡಿ ಸಂಸ್ಥೆ, ವ್ಯಾಲಿ ಸಂಸ್ಥೆಯ ಹೊಸ ತಂತ್ರಜ್ಞಾನವನ್ನು ತನ್ನ ಕಾರಿನಲ್ಲಿ ಅಳವಡಿಕೆಗೆ ಮುಂದಾಗಿದ್ದು, ಈ ಮೂಲಕ ಇಂಧನ ಉಳಿತಾಯ ಮಾಡಲಿದೆ.

ಈ ತಂತ್ರಜ್ಞಾನವು ಹೆಚ್ಚು ಕಡಿಮೆ ಶೇಕಡಾ 15%ರಷ್ಟು ಇಂದನವನ್ನು ಉಳಿತಾಯಮಾಡಲಿದೆ ಎಂದು ಕಂಪನಿ ಮಾಹಿತಿ ನೀಡಿದ್ದು, ವ್ಯಾಲಿ ಜೊತೆ ತನ್ನ ಒಪ್ಪಂದ ಮಾಡಿಕೊಂಡಿದೆ.

ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು 2004ರಲ್ಲಿ ಆವಿಷ್ಕರಿಸಿದ ವ್ಯಾಲಿ ನಂತರ ತನ್ನ ಪ್ರಮುಖ ಉತ್ಪನ್ನವನ್ನು 'ಐ-ಸ್ಟಾರ್ಸ್' ಎಂದು ನಾಮಕರಣ ಮಾಡಿತು.

ಆದರೆ ಹಲವಾರು ವಾಹನ ತಯಾರಕರು ತಮ್ಮ ಆಧುನಿಕ ವಾಹನಗಳಿಂದ ಈ ತಂತ್ರಜ್ಞಾನವನ್ನು ಕೈಬಿಟ್ಟು, ಇದರ ಬದಲಾಗಿ ಇದೇ ಸಮನಾದ ಮತ್ತೊಂದು ತಂತ್ರಜ್ಞಾನವಾದ 'ಬೀಫ್ಡ್ ಅಪ್ ಸ್ಟಾರ್ಟರ್' ಮೋಟಾರ್ಸ್ ಅನ್ನು ಬಳಸುತ್ತಿದ್ದಾರೆ.

ಪ್ರಸ್ತುತ, ಈ ತಂತ್ರಜ್ಞಾನವನ್ನು ಹೊಸ ಮಾರುಕಟ್ಟೆಯಲ್ಲಿ ಬಳಸಲು ಮುಂದಾಗಿದ್ದು, ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎನ್ನಬಹುದು.

ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಆಡಿ ಸಂಸ್ಥೆ ತನ್ನ ಆರ್‌ಎಸ್5 ಸ್ಪೋರ್ಟ್ಸ್ ಕೂಪ್ ಕಾರಿನಲ್ಲಿ ಬಳಸುವ ಮೂಲಕ ತನ್ನ ಮಾದರಿಯ ಮೊದಲ ಪ್ರೀಮಿಯಂ ಬ್ರ್ಯಾಂಡ್ ಆಗಿ ಹೆಸರು ಪಡೆದುಕೊಂಡಿದೆ.

ಕಟ್ಟುನಿಟ್ಟಾದ ಹೊರಸೂಸುವಿಕೆ ನಿಯಮಗಳನ್ನು ಅನುಸರಿಸುವ ಮೂಲಕ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡಲು ಪ್ರಪಂಚದಾದ್ಯಂತ ತಯಾರಕರು ಪ್ರಯತ್ನಿಸುತ್ತಿದ್ದಾರೆ.

ಹಾಗು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಆಡಿ ಮೊದಲ ಹೆಜ್ಜೆ‌ಯನ್ನು ಇಡುತ್ತಿದ್ದು, ಇದೇ ರೀತಿಯ ಪರಿಸರಸ್ನೇಹಿ ಕ್ರಮಗಳನ್ನು ಇತರ ಉತ್ಪಾದಕರು ತೆಗೆದುಕೊಳ್ಳಲಿ ಎಂದು ಡ್ರೈವ್ ಸ್ಪಾರ್ಕ್ ಕನ್ನಡ ಆಶಿಸುತ್ತದೆ.

Read more on ಆಡಿ audi
English summary
German luxury carmaker Audi will use Valeo's micro-hybrid (start-and-stop) technology in its RS5 sports coupe.
Story first published: Friday, June 30, 2017, 16:42 [IST]
Please Wait while comments are loading...

Latest Photos