ಹತ್ತು ವರ್ಷದ ಸಂಭ್ರಮಕ್ಕೆ ಭರ್ಜರಿ ಕೊಡುಗೆ ನೀಡಿದ ಆಡಿ ಇಂಡಿಯಾ

Written By:

ಆಡಿ ಇಂಡಿಯಾ ಕಂಪನಿ 'ಅನ್‌ಬಿಟೇಬಲ್' ಕೊಡುಗೆಗಳನ್ನು ಘೋಷಿಸಿದ್ದು, ಸೀಮಿತ ಅವಧಿಯ ರಿಯಾಯಿತಿಗಳನ್ನು ಮತ್ತು ಇತರ ಆಸಕ್ತಿದಾಯಕ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ಹತ್ತು ವರ್ಷದ ಸಂಭ್ರಮಕ್ಕೆ ಭರ್ಜರಿ ಕೊಡುಗೆ ನೀಡಿದ ಆಡಿ ಇಂಡಿಯಾ

ಆಡಿ ಸಂಸ್ಥೆ ಭಾರತದಲ್ಲಿ ತನ್ನ ಪ್ರಸಿದ್ಧ ಉತ್ತಮ ಮಾರಾಟ ಮಾದರಿಗಳಾದ ಎ3, ಎ4 ಆಡಿ ಮತ್ತು ಕ್ಯೂ3 ಕಾರುಗಳ ಮೇಲೆ ಕೊಡುಗೆಗಳನ್ನು ಘೋಷಣೆ ಮಾಡಿದೆ. ಈ ಕೊಡುಗೆಯಲ್ಲಿ ಇಎಂಐ ಆಯ್ಕೆ, ಇನ್ಶೂರೆನ್ಸ್, ಸಾಲ ಮತ್ತು ಕಾರುಗಳ ಸರ್ವಿಸ್ ಒಳಗೊಂಡಿರಲಿದೆ ಎಂದು ಕಂಪನಿ ತಿಳಿಸಿದೆ.

ಹತ್ತು ವರ್ಷದ ಸಂಭ್ರಮಕ್ಕೆ ಭರ್ಜರಿ ಕೊಡುಗೆ ನೀಡಿದ ಆಡಿ ಇಂಡಿಯಾ

ಇನ್ನು ಕೇವಲ ರೂ. 24,999 ಗಳನ್ನು ಪ್ರತಿ ತಿಂಗಳು ಇಎಂಐ ರೂಪದಲ್ಲಿ ಪಾವತಿ ಮಾಡುವ ಸೌಲಭ್ಯ, ಮೊದಲ ವರ್ಷದ ಪೂರಕ ವಿಮಾ ಸೌಕರ್ಯ ಹಾಗು ಹೆಚ್ಚುವರಿ ಎರಡು-ಮೂರು ವರ್ಷಗಳ ಸೇವಾ ಯೋಜನೆ ಪಡೆದುಕೊಳ್ಳಬಹುದು.

ಹತ್ತು ವರ್ಷದ ಸಂಭ್ರಮಕ್ಕೆ ಭರ್ಜರಿ ಕೊಡುಗೆ ನೀಡಿದ ಆಡಿ ಇಂಡಿಯಾ

ಉನ್ನತ ಮಟ್ಟದ ಉತ್ಪನ್ನಗಳ ತಯಾರಿಕೆಯಲ್ಲಿ ಹೆಚ್ಚು ಖ್ಯಾತಿಗಳಿಸಿರುವ ಆಡಿ ಸಂಸ್ಥೆ ಆಸಕ್ತಿ ಇರುವಂತಹ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಾಲ ಹಾಗು ರೂ 1 ಲಕ್ಷದವರೆಗೆ ಹಳೆ ಕಾರುಗಳ ವಿನಿಮಯ ಮಾಡಿಕೊಳ್ಳುವ ಆಯ್ಕೆ ನೀಡಿದೆ.

ಹತ್ತು ವರ್ಷದ ಸಂಭ್ರಮಕ್ಕೆ ಭರ್ಜರಿ ಕೊಡುಗೆ ನೀಡಿದ ಆಡಿ ಇಂಡಿಯಾ

ಕೊಡುಗೆಗಳ ಬಗ್ಗೆ ಮಾತನಾಡಿದ ಆಡಿ ಇಂಡಿಯಾ ಮುಖ್ಯಸ್ಥ ರಾಹಿಲ್ ಅನ್ಸಾರಿ," 'ಅನ್‌ಬಿಟೇಬಲ್' ಕೊಡುಗೆಗಳನ್ನು ಪಡೆಯಲು ಇದು ಉತ್ತಮ ಸಮಯವಾಗಿದ್ದು, ಅನ್‌ಬಿಟೇಬಲ್ ಕೊಡುಗೆಗಳನ್ನು ನೀಡುವ ಮೂಲಕ ಭಾರತದಲ್ಲಿ ಆಡಿ ಸಂಸ್ಥೆ ತನ್ನ ಹತ್ತು ವರ್ಷದ ಸಂಭ್ರಮವನ್ನು ಆಚರಿಸಲು ಇಚ್ಚಿಸುತ್ತದೆ" ಎಂದು ತಿಳಿಸಿದರು.

ಹತ್ತು ವರ್ಷದ ಸಂಭ್ರಮಕ್ಕೆ ಭರ್ಜರಿ ಕೊಡುಗೆ ನೀಡಿದ ಆಡಿ ಇಂಡಿಯಾ

ಆಡಿ ಎ3, ಎ4, ಮತ್ತು ಕ್ಯೂ3 ಕಾರುಗಳು ಹಬ್ಬದ ಋತುವಿನಲ್ಲಿ ಒಳ್ಳೆಯ ಪ್ರವೇಶ ನೀಡಿರುವುದು ಆಡಿ ಪ್ರಿಯರಿಗೆ ಹಬ್ಬದ ವಾತಾವರಣವನ್ನು ತಂದಿರುವುದಂತೂ ಸುಳ್ಳಲ್ಲ.

ಹತ್ತು ವರ್ಷದ ಸಂಭ್ರಮಕ್ಕೆ ಭರ್ಜರಿ ಕೊಡುಗೆ ನೀಡಿದ ಆಡಿ ಇಂಡಿಯಾ

ಇತ್ತೀಚಿಗೆ ಆಡಿ ತನ್ನ ಪ್ರಸಿದ್ಧ ಕಾರುಗಳಾದ ಎ3, ಎ4 ಆಡಿ ಮತ್ತು ಕ್ಯೂ3 ಕಾರುಗಳನ್ನು ಉನ್ನತೀಕರಿಸಿ ಮಾರಾಟ ಮಾಡುತ್ತಿದ್ದು, ಈ ಕಾರುಗಳ ಮಾರಾಟವನ್ನು ಬೆಂಬಲಿಸುವ ನಿಟ್ಟಿನಲ್ಲಿ ಆಡಿ ತನ್ನ ಈ ಯೋಜನೆಯನ್ನು ಬಿಡುಗಡೆಗೊಳಿಸಿದೆ.

Read more on ಆಡಿ audi
English summary
Audi India has announced 'Unbeatable' offers and is offering an array of discounts and other interesting choices for customers for a limited time.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark