ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ನೇಮಕ

ಒಲಿಂಪಿಕ್ ಪದಕ ವಿಜೇತ ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಅವರೊಂದಿಗೆ ಬ್ರಿಡ್ಜ್ ಸ್ಟೋನ್ ಸಂಸ್ಥೆಯು ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರಕಟಿಸಿದೆ.

By Girish

ಟೈಯರ್ ತಯಾರಿಕೆಯಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವ ಬ್ರಿಡ್ಜ್ ಸ್ಟೋನ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ಘೋಷಿಸಲ್ಪಟ್ಟಿದ್ದಾರೆ. ಕಳೆದ 2014ರಿಂದಲೂ ಸಹ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿಶ್ವದಾದ್ಯಂತ ಪಾಲುದಾರಿಕೆ ಹೊಂದಿರುವ ಬ್ರಿಡ್ಜ್ ಸ್ಟೋನ್ ಕಂಪನಿ 2024ರವರೆಗೂ ತನ್ನ ಒಪ್ಪಂದವನ್ನು ಮುಂದುವರೆಸಲು ಇಚ್ಛಿಸಿದೆ.

ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ನೇಮಕ

ಒಲಿಂಪಿಕ್ ಪದಕ ವಿಜೇತ ತಾರೆಯೊಂದಿಗೆ ಸಹಭಾಗಿತ್ವ ಹೊಂದುವುದರ ಮೂಲಕ ಮುಂಬರುವ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಮುಖ್ಯ ಪಾಲುದಾರರಾಗುವ ಕಡೆ ಬ್ರಿಡ್ಜ್ ಸ್ಟೋನ್ ಗಮನಹರಿಸಿದೆ ಎನ್ನಲಾಗಿದೆ.

ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ನೇಮಕ

ಈ ಘೋಷಣೆಯು ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಭಾರತದ ಚಟುವಟಿಕೆಗಳ ಶೀಘ್ರ ವಿಸ್ತರಣೆಗೆ ಸಹಕಾರಿಯಾಗಲಿದ್ದು, ಮುಂದಿನ ಐದು ವರ್ಷಗಳಲ್ಲಿ 1,936 ಕೋಟಿ ರೂ. ಹೂಡಿಕೆಯ ಮಾಡುವುದಾಗಿ ಇತ್ತೀಚೆಗೆ ಸಂಸ್ಥೆ ತಿಳಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ನೇಮಕ

ಇಂದೋರ್ ಮತ್ತು ಪುಣೆಯಲ್ಲಿಇರುವಂತಹ ಚಕನ್ ಮತ್ತು ಖೇಡಾ ಘಟಕಗಳಲ್ಲಿ, ಬ್ರಿಡ್ಜ್ ಸ್ಟೋನ್ ಸಂಸ್ಥೆಯು ತನ್ನ ಉತ್ಪನ್ನಗಳನ್ನು ಮತ್ತು ಉತ್ಪನ್ನ ಪಟ್ಟಿಯನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.

ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ನೇಮಕ

ವಿಶ್ವದ ಅತಿ ದೊಡ್ಡ ಟೈರ್ ಉತ್ಪಾದಕ ಕಂಪನಿಯಾಗಿ ಹೊರಹೊಮ್ಮಿರುವ ಬ್ರಿಡ್ಜ್ ಸ್ಟೋನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೈರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಇದರಿಂದಾಗಿ ಕಂಪನಿಯ ಟೈರುಗಳಿಗೆ ಹೆಚ್ಚು ಬೇಡಿಕೆ ಬಂದಿರುವುದು ಹೊಸ ವಾಹನಗಳ ಪರಿಚಯಕ್ಕೆ ಕಾರಣವಾಗಿದೆ.

ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಪಿ.ವಿ.ಸಿಂಧು ನೇಮಕ

ಪಿ.ವಿ. ಸಿಂಧು ಅವರೊಂದಿಗಿನ ಈ ಒಪ್ಪಂದವು ಮೂರು ವರ್ಷಗಳವರೆಗೆ ಇರಲಿದೆ. ಈ ಅವಧಿಯಲ್ಲಿ, ಬ್ರಿಡ್ಜ್ ಸ್ಟೋನ್ ಕಂಪನಿಯ ಕೆಲವು ಜಾಹೀರಾತುಗಳಲ್ಲಿ ಪಿ.ವಿ. ಸಿಂಧು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಕಂಪನಿಯ ಬ್ರ್ಯಾಂಡ್ ಮತ್ತು ಒಲಿಂಪಿಕ್ಸ್ ಉತ್ತೇಜಿಸುವ ಕಾರ್ಯವನ್ನು ಪಿವಿ ಸಿಂಧೂ ಮಾಡಲಿದ್ದಾರೆ.

More from DriveSpark

Article Published On: Wednesday, August 30, 2017, 17:50 [IST]
English summary
Read in kannada about Bridgestone has announced a strategic partnership with Olympic medal winning Indian badminton player, PV Sindhu.
Read more on ಕ್ರೀಡೆ sports
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+