ನಿಸ್ಸಾನ್ ದಟ್ಸನ್ ರೆಡಿ ಗೊ ಕಾರು ಉಡುಗೊರೆಯಾಗಿ ಪಡೆದ ಹರ್ಮನ್‌ಪ್ರೀತ್ ಕೌರ್
ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ 171 ರನ್ ಹೊಡೆದ ಹರ್ಮನ್‌ಪ್ರೀತ್ ಕೌರ್ ಅವರಿಗೆ ನಿಸ್ಸಾನ್ ಕಂಪನಿ ಬಹು ದೊಡ್ಡ ಕೊಡುಗೆ ನೀಡಿ ಸನ್ಮಾನಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ 171 ರನ್ ಹೊಡೆದ ಹರ್ಮನ್‌ಪ್ರೀತ್ ಕೌರ್ ಅವರಿಗೆ ನಿಸ್ಸಾನ್ ಕಂಪನಿ ಬಹು ದೊಡ್ಡ ಕೊಡುಗೆ ನೀಡಿ ಸನ್ಮಾನಿಸಿದೆ.

2017ರ ಐಸಿಸಿ ಮಹಿಳೆಯರ ವಿಶ್ವಕಪ್ ಸೆಮಿ ಫೈನಲ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ 171 ರನ್ ಭಾರಿಸುವ ಮೂಲಕ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದ ಹರ್ಮನ್‌ಪ್ರೀತ್ ಅವರಿಗೆ ದಟ್ಸನ್ ರೆಡಿ ಗೊ ಕಾರು ಉಡುಗೊರೆಯಾಗಿ ಲಭಿಸಿದೆ.

2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯೊಂದಿಗೆ ಎಂಟು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವ ನಿಸ್ಸಾನ್ ಸಂಸ್ಥೆ, ಮುಂಬರುವ ದಿನಗಳಲ್ಲಿ ತನ್ನ ಅಂತರ್ರಾಷ್ಟ್ರೀಯ ಮೊಲ್ಯವನ್ನು ವೃದ್ಧಿಸಿಕೊಳ್ಳವು ಮುಂದಾಗಿದೆ.

2023ರವರೆಗೆ ಮಾತ್ರ ನಿಸ್ಸಾನ್ ಈ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಪ್ರಾಯೋಜಕತ್ವದ ವಿಚಾರಗಳ ಬಗ್ಗೆ ಈಗಾಗಲೇ ಸ್ಪಷ್ಟತೆ ಹೊಂದಿದೆ.

ಮುಂಬರುವ ಐಸಿಸಿ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಸಿಸಿ ವಿಶ್ವ ಟ್ವೆಂಟಿ 20, ಅಂಡರ್ 19 ಮತ್ತು ಮಹಿಳೆಯರ ಅರ್ಹತಾ ಕಾರ್ಯಕ್ರಮಗಳೂ ಸೇರಿದಂತೆ ಐಸಿಸಿಯ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಜಾಗತಿಕ ಪ್ರಾಯೋಜಕತ್ವವನ್ನು ನಿಸ್ಸಾನ್ ವಹಿಸಲಿದೆ.


Click it and Unblock the Notifications