ಟೊಯೊಟಾ ಇನೋವಾ ಹಿಂದಿಕ್ಕಲು ಬರುತ್ತಿದೆ ಮಹೀಂದ್ರಾ ಹೊಚ್ಚ ಹೊಸ ಎಂಪಿವಿ

Written By:

ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಟೊಯೊಟಾ ಇನೋವಾ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯು ಹೊಚ್ಚ ಹೊಸ ಎಂಪಿವಿ ಮಾದರಿಯನ್ನು ಪರಿಚಯಿಸುತ್ತಿದ್ದು, ಈ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ಕೈಗೊಂಡಿದೆ.

ಟೊಯೊಟಾ ಇನೋವಾ ಹಿಂದಿಕ್ಕಲು ಬರುತ್ತಿದೆ ಮಹೀಂದ್ರಾ ಹೊಚ್ಚ ಹೊಸ ಎಂಪಿವಿ

ಮಹೀಂದ್ರಾ ಸಂಸ್ಥೆಯು ಟೊಯೊಟಾ ಇನೋವಾ ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡುವ ಉದ್ದೇಶದೊಂದಿಗೆ ಹೊಚ್ಚ ಹೊಸ ಎಂಪಿವಿ ಮಾದರಿಯನ್ನು ಪರಿಚಯಿಸುತ್ತಿದ್ದು, ಯು321 ಸಂಕೇತದ ಕಾರೊಂದನ್ನು ಇಂದು ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದೆ.

ಟೊಯೊಟಾ ಇನೋವಾ ಹಿಂದಿಕ್ಕಲು ಬರುತ್ತಿದೆ ಮಹೀಂದ್ರಾ ಹೊಚ್ಚ ಹೊಸ ಎಂಪಿವಿ

ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಸಂದರ್ಭದಲ್ಲಿ ಡ್ರೈವ್ ಸ್ಪಾರ್ಕ್ ತಂಡಕ್ಕೆ ಮಹೀಂದ್ರಾ ಸಂಸ್ಥೆ ಇನ್ನು ಹೆಸರಿಡದ ಎಂಪಿವಿ ಕಾರಿನ ರಹಸ್ಯ ಚಿತ್ರಗಳು ಲಭ್ಯವಾಗಿದ್ದು, ಭಾರೀ ಬದಲಾವಣೆಯೊಂದಿಗೆ ಹೊಸ ಕಾರು ರಸ್ತೆಗಿಳಿಯುವ ಬಗ್ಗೆ ಮಹತ್ವದ ಸುಳಿವು ನೀಡಿದೆ.

Recommended Video
Tata Tiago XTA AMT Launched In India | In Kannada - DriveSpark ಕನ್ನಡ
ಟೊಯೊಟಾ ಇನೋವಾ ಹಿಂದಿಕ್ಕಲು ಬರುತ್ತಿದೆ ಮಹೀಂದ್ರಾ ಹೊಚ್ಚ ಹೊಸ ಎಂಪಿವಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸದ್ಯ ಮಾರುಕಟ್ಟೆಯಲ್ಲಿರುವ ಜೈಲೊ ಉತ್ಪಾದನೆ ಮತ್ತು ಮಾರಾಟವನ್ನು ಕೈಬಿಡಲು ಉದ್ದೇಶಿರುವ ಮಹೀಂದ್ರಾ ಸಂಸ್ಥೆಯು ಹೊಸ ಮಾದರಿಯ ಎಂಪಿವಿ ಆವೃತ್ತಿಯನ್ನು ಹೊರ ತರುವ ಯೋಜನೆ ಹೊಂದಿದೆ ಎನ್ನಲಾಗಿದೆ.

ಟೊಯೊಟಾ ಇನೋವಾ ಹಿಂದಿಕ್ಕಲು ಬರುತ್ತಿದೆ ಮಹೀಂದ್ರಾ ಹೊಚ್ಚ ಹೊಸ ಎಂಪಿವಿ

ಹೀಗಾಗಿ ಜೈಲೊ ಮಾದರಿಗಿಂತಲೂ ಹೆಚ್ಚು ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಕಾರು ಮಾದರಿ ಇದಾಗಿದ್ದು, ಮಹೀಂದ್ರಾ ಸಂಸ್ಥೆಯ ಉತ್ತರ ಅಮೆರಿಕ ತಾಂತ್ರಿಕ ಅಭಿವೃದ್ಧಿ ತಂಡದಿಂದ ಸಿದ್ಧಗೊಂಡಿದೆ.

ಟೊಯೊಟಾ ಇನೋವಾ ಹಿಂದಿಕ್ಕಲು ಬರುತ್ತಿದೆ ಮಹೀಂದ್ರಾ ಹೊಚ್ಚ ಹೊಸ ಎಂಪಿವಿ

ಇನ್ನು 5-ಸ್ಪೋಕ್ ಅಲಾಯ್ ಚಕ್ರಗಳನ್ನು ಹೊಸ ಕಾರಿನ ಅಳವಡಿಸಲಾಗಿದ್ದು, ಸುರಕ್ಷಾ ಕ್ರಮಗಳನ್ನು ಹೆಚ್ಚಿಸುವ ಉದ್ದೇಶದಿಂದ ನಾಲ್ಕು ಚಕ್ರದಲ್ಲೂ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಜೊತೆಗೆ 2.0-ಲೀಟರ್ ಡಿಸೇಲ್ ಎಂಜಿನ್ ಹಾಗೂ 1.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಟೊಯೊಟಾ ಇನೋವಾ ಹಿಂದಿಕ್ಕಲು ಬರುತ್ತಿದೆ ಮಹೀಂದ್ರಾ ಹೊಚ್ಚ ಹೊಸ ಎಂಪಿವಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಯು321 ಸಂಕೇತದ ಕಾರೊಂದನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿರೋ ಮಹೀಂದ್ರಾ ಸಂಸ್ಥೆಯು, ಟೊಯೊಟಾ ಇನೋವಾ ಹಿಂದಿಕ್ಕುವ ಉದ್ದೇಶ ಹೊಂದಿದೆ. ಹೀಗಾಗಿ ಹೊಸ ಕಾರನ್ನು ಅಭಿವೃದ್ಧಿ ಕೈಗೊಂಡಿರುವ ಮಹೀಂದ್ರಾ, 2018ರ 2ನೇ ತ್ರೈಮಾಸಿಕ ವೇಳೆ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳಿವೆ.

English summary
Read in Kannada about Toyota Innova Rival From Mahindra Spotted Testing In Bangalore.
Please Wait while comments are loading...

Latest Photos