ಟಾಟಾ ನೆಕ್ಸನ್ ಬಿಡುಗಡೆಗೆ ದಿನಗಣನೆ- ಹಲವು ವಿಶೇಷತೆಗಳಿಗೆ ಕಾರಣವಾದ ಹೊಸ ಕಾರು..!

Written By:

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ನೆಕ್ಸನ್ ಆವೃತ್ತಿಯು ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಉತ್ಪಾದನೆಯ ಹಂತದಲ್ಲಿದ್ದ ನೆಕ್ಸನ್ ಕಾರುಗಳ ಮೊದಲ ಬ್ಯಾಚ್ ರಂಜನ್‌ಗಾಂವ್ ಉತ್ಪಾದನಾ ಘಟಕದಲ್ಲಿ ಪೂರ್ಣಪ್ರಮಾಣದಲ್ಲಿ ಸಿದ್ಧಗೊಂಡಿವೆ.

ಬಿಡುಗಡೆಗೆ ದಿನಗಣನೆ- ಹಲವು ವಿಶೇಷತೆಗಳಿಗೆ ಕಾರಣವಾದ ಟಾಟಾ ನೆಕ್ಸನ್

ಸ್ಪೋರ್ಟ್ ಎಸ್‌ಯುವಿ ಆವೃತ್ತಿಗಳಲ್ಲಿ ಸಿದ್ಧಗೊಂಡಿರುವ ಟಾಟಾ ನೆಕ್ಸಾನ್ ಮಾದರಿಯೂ ನ್ಯೂ ಜನರೇಷನ್ ಬೇಡಿಕೆಗೆ ಅನುಗುಣವಾಗಿ ಸಿದ್ದಗೊಂಡಿದ್ದು, ನೆಕ್ಸನ್ ಸಮಕಾಲೀನ ಇಂಪ್ಯಾಕ್ಟ್ ಶೈಲಿಯನ್ನು ಹೊಂದಿರುವುದು ಮತ್ತೊಂದು ವಿಶೇಷ.

ಬಿಡುಗಡೆಗೆ ದಿನಗಣನೆ- ಹಲವು ವಿಶೇಷತೆಗಳಿಗೆ ಕಾರಣವಾದ ಟಾಟಾ ನೆಕ್ಸನ್

ಇನ್ನು ಈ ಹಿಂದೆ 2016ರ ಆಟೋ ಎಕ್ಸ್‌ ಪೋದಲ್ಲಿ ಪ್ರದರ್ಶನಗೊಂಡಿದ್ದ ಟಾಟಾ ನೆಕ್ಸನ್, ಅತ್ಯುತ್ತಮ ಕಾರ್ಯಕ್ಷಮತೆ ಎಂಜಿನ್ ಮಾದರಿಯ ಉತ್ಪಾದನೆಗಾಗಿ ಬಾಷ್, ಎವಿಎಲ್ ಮತ್ತು ಮಹೇಲ್ ಹನಿವೆಲ್ ಸಂಸ್ಥೆಗಳ ಸಹಯೋಗದಲ್ಲಿ ನೆಕ್ಸನ್ ಅಭಿವೃದ್ಧಿಪಡಿಸಲಾಗಿದೆ.

ಬಿಡುಗಡೆಗೆ ದಿನಗಣನೆ- ಹಲವು ವಿಶೇಷತೆಗಳಿಗೆ ಕಾರಣವಾದ ಟಾಟಾ ನೆಕ್ಸನ್

ಬಿಡುಗಡೆ ಯಾವಾಗ?

ನೆಕ್ಸನ್ ಕಾರು ಖರೀದಿಗೆ ಲಕ್ಷಾಂತರ ಗ್ರಾಹಕರು ಎದುರು ನೋಡುತ್ತಿದ್ದು, ಈ ಹಿನ್ನೆಲೆ ಉತ್ಪಾದನೆಯನ್ನು ತ್ವರಿತಗೊಳಿಸಿರುವ ಟಾಟಾ ಸಂಸ್ಥೆಯು ಮುಂಬರುವ ಹಬ್ಬದ ದಿನಗಳಲ್ಲಿ ಬಿಡುಗಡೆ ಮಾಡಲಿದೆ.

ಬಿಡುಗಡೆಗೆ ದಿನಗಣನೆ- ಹಲವು ವಿಶೇಷತೆಗಳಿಗೆ ಕಾರಣವಾದ ಟಾಟಾ ನೆಕ್ಸನ್

ಎಂಜಿನ್ ಸಾಮರ್ಥ್ಯ

ನೂತನ ನೆಕ್ಸನ್ ಆವೃತ್ತಿಯು 1.2-ಲೀಟರ್ ಟರ್ಬೋಚಾಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್‌ಗಳನ್ನು ಅಳವಡಿಸಲಾಗಿದೆ. ಹಾಗಿಯೇ ಗರಿಷ್ಠ ಇಂಧನ ಕಾರ್ಯಕ್ಷಮತೆಯನ್ನು ಕೂಡಾ ಕಾಯ್ದುಕೊಳ್ಳಲಾಗಿದೆ.

ಬಿಡುಗಡೆಗೆ ದಿನಗಣನೆ- ಹಲವು ವಿಶೇಷತೆಗಳಿಗೆ ಕಾರಣವಾದ ಟಾಟಾ ನೆಕ್ಸನ್

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಕೂಡಾ ಹೊಂದಿರುವ ನೆಕ್ಸನ್ ಮಾದರಿಗಳಲ್ಲಿ ಪೆಟ್ರೋಲ್ ಆವೃತ್ತಿಯು 108ಬಿಎಚ್‌ಪಿ ಮತ್ತು 170ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಕೂಡಾ ಪಡೆದುಕೊಂಡಿದೆ.

ಬಿಡುಗಡೆಗೆ ದಿನಗಣನೆ- ಹಲವು ವಿಶೇಷತೆಗಳಿಗೆ ಕಾರಣವಾದ ಟಾಟಾ ನೆಕ್ಸನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೋ ಸ್ಪೋರ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಅಭಿವೃದ್ಧಿಗೊಂಡಿರುವ ನೆಕ್ಸನ್ ಮಾದರಿಯೂ ವಿಶೇಷ ಹೊರ ವಿನ್ಯಾಸಗಳಿಂದ ಗಮನಸೆಳೆಯುತ್ತಿದ್ದು, ಸ್ಪೋರ್ಟ್ ಎಸ್‌ಯುವಿ ವಿಭಾಗದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ನಿರೀಕ್ಷೆಯಿದೆ.

Read more on ಟಾಟಾ tata
English summary
Read in Kannada about First Batch Of Tata Nexon Rolls Out Of Tata’s Ranjangaon Plant.
Story first published: Friday, July 21, 2017, 11:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark