ಟಾಟಾ, ಟೊಯೊಟಾ ಮತ್ತು ಹೋಂಡಾ ನಂತರ ಕಾರುಗಳ ಬೆಲೆ ಹೆಚ್ಚಿಸಿದ ಫೋರ್ಡ್
ಕಾರುಗಳ ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಬೆಲೆಯನ್ನು ಏರಿಕೆ ಮಾಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡಿರುವ ಫೋರ್ಡ್ ಇಂಡಿಯಾ ಸಂಸ್ಥೆಯು 2018ರ ಜನವರಿ 1ರಿಂದಲೇ ಹೊಸ ಬೆಲೆಗಳನ್ನು ಪರಿಷ್ಕಣೆ ಮಾಡುವ ಸುಳಿವು ನೀಡಿದೆ.
ಕಾರುಗಳ ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಬೆಲೆಯನ್ನು ಏರಿಕೆ ಮಾಡುವ ಕುರಿತು ಮಹತ್ವದ ನಿರ್ಧಾರ ಕೈಗೊಂಡಿರುವ ಫೋರ್ಡ್ ಇಂಡಿಯಾ ಸಂಸ್ಥೆಯು 2018ರ ಜನವರಿ 1ರಿಂದಲೇ ಹೊಸ ಬೆಲೆಗಳನ್ನು ಪರಿಷ್ಕಣೆ ಮಾಡುವ ಸುಳಿವು ನೀಡಿದೆ.

ಸುದ್ದಿ ಮೂಲಗಳ ಪ್ರಕಾರ ಜನವರಿ 1ರಿಂದಲೇ ಫೋರ್ಡ್ ನಿರ್ಮಾಣದ ಎಲ್ಲ ಕಾರುಗಳ ಬೆಲೆಗಳು ಪರಿಷ್ಕರಣೆಗೊಳ್ಳಲಿದ್ದು, ಪ್ರವೇಶ ಮಟ್ಟದ ಕಾರುಗಳಿಂದ ಉನ್ನತ ಮಾದರಿಯ ಕಾರುಗಳು ಶೇ. 4ರಷ್ಟು ಹೆಚ್ಚುವರಿ ಬೆಲೆಯನ್ನು ಪಡೆದುಕೊಳ್ಳಲಿವೆ ಎನ್ನಲಾಗಿದೆ.

ಹೀಗಾಗಿ ಫೋರ್ಡ್ ಇಂಡಿಯಾ ಉತ್ಪಾದಿತ ಫಿಗೊ, ಆಸ್ಪೈರ್, ಇಕೋ ಸ್ಪೋರ್ಟ್ ಮತ್ತು ಉನ್ನತ ಮಾದರಿಯಾದ ಎಂಡೀವರ್ ಕಾರುಗಳ ಬೆಲೆಗಳು ದುಬಾರಿಯಾಗಲಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಫೋರ್ಡ್ ಹೇಳಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಫೋರ್ಡ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ "ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ" ಎಂದಿದ್ದಾರೆ.

ಇದರಿಂದಾಗಿ ಜನಪ್ರಿಯ ಫಿಗೊ ಕಾರಿನ ಬೆಲೆಯು ಹೆಚ್ಚುವರಿಯಾಗಿ 20 ಸಾವಿರ ಬೆಲೆ ಹೆಚ್ಚಳ ಸಾಧ್ಯತೆಗಳಿದ್ದು, ಉನ್ನತ ಶ್ರೇಣಿಯ ಕಾರು ಮಾದರಿಯಾದ ಎಂಡೀವರ್ ಬೆಲೆಯು ರೂ.1.20 ಲಕ್ಷಕ್ಕೆ ಹೆಚ್ಚಳವಾಗಲಿದೆ.

ಇನ್ನು ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿಯು ಪ್ರಸ್ತುತ ದರಗಳಿಂತ ರೂ.30 ಸಾವಿರ ಹೆಚ್ಚಳವಾಗಲಿದ್ದು, ಜನವರಿ 1 ರಿಂದಲೇ ಹೊಸ ದರಗಳು ಅನ್ವಯವಾಗಲಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬಿಡಿಭಾಗಗಳ ಬಳಕೆ ಹೆಚ್ಚಳ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಟಾಟಾ, ಸ್ಕೋಡಾ, ಹೋಂಡಾ, ಇಸುಝು ಮತ್ತು ಟೊಯೊಟೊ ಸಂಸ್ಥೆಗಳು ಈಗಾಗಲೇ ಬೆಲೆ ಹೆಚ್ಚಳ ಮಾಡುವ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೀಗ ಫೋರ್ಡ್ ಇಂಡಿಯಾ ಸಂಸ್ಥೆಯು ಕೂಡಾ ಇದೇ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಬಹುದು.


Click it and Unblock the Notifications