ಜಿಎಸ್‌ಟಿ ಎಫೆಕ್ಟ್- ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಇಳಿಕೆ..!
ಕೇಂದ್ರ ಸರ್ಕಾರದ ಬಹುನೀರಿಕ್ಷಿತ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಇಂದಿನಿಂದ ಜಾರಿಗೊಂಡಿದ್ದು, ಪ್ರತಿಷ್ಠಿತ ಕಾರು ಉತ್ಪಾದನೆ ಸಂಸ್ಥೆ ಮಾರುತಿ ಸುಜುಕಿ ತನ್ನ ಪ್ರಮುಖ ಕಾರು ಮಾದರಿಗಳ ಮೇಲಿನ ದರಗಳನ್ನು ಕಡಿತಗೊಳಿಸಿದೆ.
ಕೇಂದ್ರ ಸರ್ಕಾರದ ಬಹುನೀರಿಕ್ಷಿತ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಇಂದಿನಿಂದ ಜಾರಿಗೊಂಡಿದ್ದು, ಪ್ರತಿಷ್ಠಿತ ಕಾರು ಉತ್ಪಾದನೆ ಸಂಸ್ಥೆ ಮಾರುತಿ ಸುಜುಕಿ ತನ್ನ ಪ್ರಮುಖ ಕಾರು ಮಾದರಿಗಳ ಮೇಲಿನ ದರಗಳನ್ನು ಕಡಿತಗೊಳಿಸಿದೆ.

ಉತ್ತಮ ಕಾರ್ಯಕ್ಷಮತೆ ಹಿನ್ನೆಲೆ ಭಾರತೀಯ ಆಟೋ ವಲಯದಲ್ಲಿ ತನ್ನದೇ ಛಾಪು ಮೂಡಿಸಿರುವ ಮಾರುತಿ ಸುಜುಕಿ ಸಂಸ್ಥೆಯು, ಜಿಎಸ್‌ಟಿ ಜಾರಿ ಹಿನ್ನೆಲೆ ತನ್ನ ಉತ್ಪನ್ನಗಳ ಮೇಲಿನ ದರಗಳನ್ನು ಇಳಿಕೆ ಮಾಡಿದೆ.

ಶೇ.3ರಷ್ಟು ಬೆಲೆ ಕಡಿತಗೊಳಿಸಿರುವ ಮಾರುತಿ ಸುಜುಕಿ, ಆಲ್ಟೋ ಬ್ರೆಝಾ, ಸಿಯಾಜ್ ಆವೃತ್ತಿಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ.

ದರ ಇಳಿಕೆ ಕುರಿತಾದ ಹೊಸ ಆದೇಶ ಇಂದಿನಿಂದಲೇ ಅನ್ವಯವಾಗಲಿದ್ದು, ದೇಶದ ವಿವಿಧ ನಗರಗಳಲ್ಲಿನ ಶೋರಂ ಬೆಲೆಗೆ ಅನುಗುಣವಾಗಿ ಡಿಸ್ಕೌಂಟ್ ದೊರೆಯಲಿದೆ.

ಇನ್ನು ಜಿಎಸ್‌ಟಿ ಜಾರಿಯಿಂದಾಗಿ ದೇಶಿಯವಾಗಿ ಉತ್ಪಾದನೆಗೊಳ್ಳುವ ಕಾರು ಮಾದರಿಗಳ ಮೇಲೆ ಸೆಸ್ ಕೈಬಿಡಲಾಗುತ್ತಿದ್ದು, ಅದೇ ಲಾಭವನ್ನು ಗ್ರಾಹಕರಿಗೆ ನೀಡಲು ಮುಂದಾಗಿರುವ ಕಾರು ಉತ್ಪಾದಕರು ಭರ್ಜರಿ ಕಾರು ಮಾರಾಟ ನೀರಿಕ್ಷೆಯಲ್ಲಿದ್ದಾರೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕೇಂದ್ರ ಸರ್ಕಾರ ಇಂದಿನಿಂದ ಜಾರಿ ತಂದಿರುವ ಜಿಎಸ್‌ಟಿ ಆಟೋ ಉದ್ಯಮಕ್ಕೆ ವರವಾಗಿ ಪರಿಣಮಿಸಿದ್ದು, ದೇಶಿವಾಗಿ ಉತ್ಪಾದನೆಗೊಳ್ಳುವ ಕಾರು ಆವೃತ್ತಿಗಳ ಮೇಲೆ ಸೆಸ್ ಕೈಬಿಟ್ಟಿರುವುದು ಗಮನಾರ್ಹ.


Click it and Unblock the Notifications








