ಇಂದಿನಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ ಕೇಂದ್ರ ಸರ್ಕಾರ

Written By:

ಇಂದಿನಿಂದ ಭಾರತದಾದ್ಯಂತ ಜಿಎಸ್‌ಟಿ ಜಾರಿಗೆ ಬಂದಿದ್ದು, ವಿಲಾಸಿ, ಮಧ್ಯಮ ಗಾತ್ರ ಮತ್ತು ಸ್ಪೋಟ್ಸರ್ ಯುಟಿಲಿಟಿ ವಾಹನಗಳ (ಎಸ್‌ಯುವಿ) ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಸೆಸ್ ಹೆಚ್ಚಳವಾಗಲಿದೆ.

To Follow DriveSpark On Facebook, Click The Like Button
ಇಂದಿನಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ ಕೇಂದ್ರ ಸರ್ಕಾರ

ಜಿಎಸ್‌ಟಿ ಜಾರಿಗೆ ಬಂದ ನಂತರದಿಂದ ವಾಹನೋದ್ಯಮದಲ್ಲಿ ಹೆಚ್ಚು ಸಂಚಲನ ಉಂಟು ಮಾಡಿದ್ದು, ಕಳೆದ ಶನಿವಾರ ನಡೆದ ಮಂಡಳಿ ಸಭೆಯಲ್ಲಿ ಮಧ್ಯಮ ಗಾತ್ರದ ಕಾರಿನ ಮೇಲೆ ಶೇ. 2%, ದೊಡ್ಡ ಕಾರುಗಳ ಮೇಲೆ ಶೇ. 5% ಮತ್ತು ಎಸ್‌ಯುವಿ ಕಾರುಗಳ ಮೇಲೆ ಶೇ 7ರಷ್ಟು ಸೆಸ್ ವಿಧಿಸಲು ನಿರ್ಧರಿಸಲಾಗಿತ್ತು.

ಇಂದಿನಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ ಕೇಂದ್ರ ಸರ್ಕಾರ

ಈ ನಿರ್ಧಾರದಂತೆ ಇಂದಿನಿಂದ ವಿಲಾಸಿ, ಮಧ್ಯಮ ಗಾತ್ರ ಮತ್ತು ಸ್ಪೋಟ್ಸರ್ ಯುಟಿಲಿಟಿ ವಾಹನಗಳ (ಎಸ್‌ಯುವಿ) ವಾಹನಗಳ ಮೇಲಿನ ಜಿಎಸ್‌ಟಿ ದರವು ಕ್ರಮವಾಗಿ ಶೇ 45, 48 ಮತ್ತು 50ಕ್ಕೆ ಏರಿಕೆಯಾಗಿದೆ.

ಇಂದಿನಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ ಕೇಂದ್ರ ಸರ್ಕಾರ

ಕಾರುಗಳ ಮೇಲಿನ ದರಗಳ ಬದಲಾವಣೆಯು ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಉಂಟು ಮಾಡಲಿದೆ ಹಾಗು ಬೇಡಿಕೆಯ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಾಹನ ತಯಾರಕ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿದ್ದವು.

ಇಂದಿನಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ ಕೇಂದ್ರ ಸರ್ಕಾರ

ಸೆಸ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸೋಮವಾರದಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಅಬಕಾರಿ ಮತ್ತು ಸೀಮಾ ಸುಂಕಗಳ ಕೇಂದ್ರೀಯ ಮಂಡಳಿ ಟ್ವೀಟ್ ಮಾಡಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಇಂದಿನಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ ಕೇಂದ್ರ ಸರ್ಕಾರ

ಜುಲೈ 1ರ ನಂತರದಿಂದ ಹೊಸ ಸರಕಾರ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಭಾರತ ದೇಶದಲ್ಲಿ ನರೆಂದ್ರ ಮೋದಿ ಸರ್ಕಾರ ಜಾರಿಗೆ ತಂದಿತ್ತು. ಆದರೆ ಜಿಎಸ್‌ಟಿ ಜಾರಿಗೆ ಬಂದ ನಂತರ ಕೆಲವೊಂದು ಕಾರುಗಳ ಬೆಲೆ ರೂ.3 ಲಕ್ಷದವರೆಗೆ ಕಡಿಮೆಯಾಗಿತ್ತು. ಈ ಗೊಂದಲ ನಿವಾರಣೆಗೆ ಮುಂದಾಗಿರುವ ಮಂಡಳಿ ಸೆಸ್ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಇಂದಿನಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲಿದೆ ಕೇಂದ್ರ ಸರ್ಕಾರ

ಹೆಚ್ಚಿಸಿದ ಸೆಸ್ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ವಾಹನ ತಯಾರಿಕಾ ಸಂಸ್ಥೆಗಳಾದ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟೊಯೊಟೊ ಕಿರ್ಲೊಸ್ಕರ್‌, ಔಡಿ, ಮರ್ಸಿಡಿಸ್‌ ಬೆಂಜ್‌ ಮತ್ತು ಜೆಎಲ್‌ಆರ್‌ ಇಂಡಿಯಾ ಪ್ರಕಟಿಸಿವೆ.

English summary
Read in kannada about The increased GST cess on mid-sized, luxury and SUV cars will come into effect from Monday (11 September).
Story first published: Monday, September 11, 2017, 11:43 [IST]
Please Wait while comments are loading...

Latest Photos