ಭಾರತ್‌ಮಾಲಾ ಯೋಜನೆಗೆ ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ- ಆರ್ಥಿಕ ಅಭಿವೃದ್ಧಿಗೆ ಹೊಸ ಹೆಜ್ಜೆ
ದೇಶದ ಮಹತ್ವಾಕಾಂಕ್ಷೆಯ ಭಾರತ್‌ಮಾಲಾ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಬೃಹತ್ ಪ್ರಮಾಣದ ಆರ್ಥಿಕ ಸುಧಾರಣೆಯತ್ತ ದಾಪುಗಾಲು ಇಟ್ಟಿದೆ.
ದೇಶದ ಮಹತ್ವಾಕಾಂಕ್ಷೆಯ ಭಾರತ್‌ಮಾಲಾ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಬೃಹತ್ ಪ್ರಮಾಣದ ಆರ್ಥಿಕ ಸುಧಾರಣೆಯತ್ತ ದಾಪುಗಾಲು ಇಟ್ಟಿದೆ.

ಹೀಗಾಗಿ ಈ ಯೋಜನೆಯು ದೇಶದಲ್ಲೇ ಮಹತ್ವದ ಆರ್ಥಿಕ ಸುಧಾರಣಾ ಹೆಜ್ಜೆ ಎಂದೇ ಬಿಂಬಿಸಲಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ 50,000 ಕಿ. ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದ ಬಳಿಕ ಬೃಹತ್ ಪ್ರಮಾಣದ ರಸ್ತೆ ನಿರ್ಮಾಣವಾಗಲಿರುವುದು ಇದೇ ಮೊದಲು ಎನ್ನಬಹುದು.

ಗಡಿ ರಸ್ತೆಗಳು, ಅಂತಾರಾಷ್ಟ್ರೀಯ ಸಂಪರ್ಕ ರಸ್ತೆಗಳು, ಕರಾವಳಿ ಮತ್ತು ಬಂದರು ಸಂಪರ್ಕ ರಸ್ತೆಗಳ ನಿರ್ಮಾಣ, ರಾಷ್ಟ್ರೀಯ ಕಾರಿಡಾರ್‌ಗಳ ಅಭಿವೃದ್ಧಿ ಈ ಮುಂತಾದ ಅಂಶಗಳನ್ನು ಒಳಗೊಂಡಿರುವ ಭಾರತ್‌ಮಾಲಾ ಯೋಜನೆಯು ಮೊದಲ ಹಂತದಲ್ಲಿ 20,000 ಕಿ. ಮೀ. ಹೆದ್ದಾರಿ ನಿರ್ಮಾಣವಾಗಲಿದೆ.

ಪಶ್ಚಿಮ ಭಾಗವನ್ನು ಪೂರ್ವ ಭಾಗಕ್ಕೆ ಸಂಪರ್ಕಿಸುವ ಕನಸಿನ ಯೋಜನೆ ಇದಾಗಿದ್ದು, ಮೊದಲ ಹಂತದ ಯೋಜನೆ ಜಾರಿಗೆ 3ರಿಂದ 5 ವರ್ಷದ ಕಾಲಮಿತಿ ಹಾಕಿಕೊಳ್ಳಲಾಗಿದೆ ಜೊತೆಗೆ 5.5 ಲಕ್ಷ ಕೋ. ರೂ. ಖರ್ಚು ಅಂದಾಜಿಸಲಾಗಿದೆ.
Recommended Video


ಇನ್ನು ಬೃಹತ್ ಯೋಜನೆಗಾಗಿ ಮಾರುಕಟ್ಟೆಯಿಂದ 2.09 ಲಕ್ಷ ಕೋಟಿ ಮತ್ತು ಖಾಸಗಿ ಹೂಡಿಕೆಯ ಮೂಲಕ 1.06 ಲಕ್ಷ ಕೋಟಿ, ಕೇಂದ್ರೀಯ ರಸ್ತೆ ನಿಧಿ ಅಥವಾ ಟೋಲ್ ಶುಲ್ಕದ ಮೂಲಕ 2.19 ಲಕ್ಷ ಕೋಟಿ ಸೇರಿದಂತೆ ವಿವಿಧ ಮೂಲಗಳಿಂದ ಸರಕಾರ ಈ ಯೋಜನೆಗೆ ಹಣಕಾಸು ಸಂಗ್ರಹಿಸಲಿದೆ.

ಭಾರತ್‌ಮಾಲಾ ಯೋಜನೆಯಡಿ ನಿರ್ಮಾಣವಾಗುವ ರಸ್ತೆ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುತ್ತದೆ. ಹೀಗಾಗಿ ಪ್ರತಿ ಕಿಮೀಗೆ 13 ಕೋ. ರೂ.ಗಳಂತೆ ಖರ್ಚಾಗಲಿದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಅಂತರ್‌ರಾಜ್ಯ ರಸ್ತೆ, ರಾಜ್ಯ ರಸ್ತೆಗಳು ಭಾರತ್‌ಮಾಲಾದಡಿ ಬರಲಿವೆ.
ಓದಿರಿ-

ಯೋಜನೆಯ ಉದ್ದೇಶ?
ವಿಶೇಷವೆಂದರೆ ಭಾರತ್‌ಮಾಲಾದಡಿ ನಿರ್ಮಾಣವಾಗಲಿರುವ ಎಲ್ಲ ರಸ್ತೆಗಳು ಬಹುತೇಕ ಒಂದೇ ರೀತಿ ಇರುತ್ತವೆ. ವರ್ಷಕ್ಕೆ 10,000 ಕಿ. ಮೀ. ರಸ್ತೆ ನಿರ್ಮಿಸುವ ಗುರಿಯಿರಿಸಿಕೊಳ್ಳಲಾಗಿದ್ದು, ಸರಕು ಸಾಗಣೆಯನ್ನು ತ್ವರಿತಗೊಳಿಸುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಬೃಹತ್ ಪ್ರಮಾಣದ ಉದ್ಯೋಗ ಸೃಷ್ಠಿ
ಭಾರತ್‌ಮಾಲಾ ಯೋಜನೆಯಿಂದ 14.2 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಿದ್ದರೆ ಪರೋಕ್ಷವಾಗಿ ಇದಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ಉಕ್ಕು, ಸಿಮೆಂಟ್, ಪೈಂಟ್ ಮತ್ತಿತರ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಉದ್ದಿಮೆಗಳಲ್ಲಿ ಹೆಚ್ಚಿನ ಚಟುವಟಿಕೆ ನಡೆಯಲಿದೆ ಎನ್ನುವುದು ಉದ್ಯಮಿಗಳ ಅಭಿಮತವಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಭಾರತ್‌ಮಾಲಾ ಯೋಜನೆ ಘೋಷಣೆಯಾಗುತ್ತಿದ್ದಂತೆ ಕೈಗಾರಿಕೋದ್ಯಮ ವಲಯದಿಂದ ಸಕಾರಾತ್ಮಕ ಪ್ರತಿಸ್ಪಂದನ ವ್ಯಕ್ತವಾಗಿದ್ದು, ಈ ಯೋಜನೆಯಿಂದ ದೇಶದ ಆರ್ಥಿಕ ಬೆಳವಣಿಗೆಯು ಇನ್ನೊಂದು ಮಜಲು ತಲುಪುವ ಎಲ್ಲ ಲಕ್ಷಣಗಳು ಇವೆ ಎಂಬುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
Trending On DriveSpark Kannada:
ರಸ್ತೆ ಮೈಲುಗಲ್ಲುಗಳ ಬಗ್ಗೆ ಖಂಡಿತ ಈ ವಿಚಾರಗಳು ನಿಮಗೆ ಗೊತ್ತಿರೋದಿಲ್ಲ !!


Click it and Unblock the Notifications








