"ಎಲೆಕ್ಟ್ರಿಕ್ ಕಾರು ಉತ್ಪಾದನೆಯ ಕಡೆ ಹೆಚ್ಚು ಗಮನ ಕೊಡಿ" ಎಂದ ನಿತಿನ್ ಗಡ್ಕರಿ

Written By:

ಭಾರತದಲ್ಲಿ ಕಾರು ಮಾರಾಟದ ವೇಗವನ್ನು ಕಡಿಮೆ ಮಾಡಲು ನಾವು ಬಯಸುತ್ತೇವೆ ಅದರಲ್ಲಿಯೂ ಹೆಚ್ಚು ಮಾಲಿನ್ಯ ಮಾಡುವ ಡೀಸೆಲ್ ಚಲಿತ ಕಾರುಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

To Follow DriveSpark On Facebook, Click The Like Button

ಭಾರತದಲ್ಲಿ ಮಾಲಿನ್ಯ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿ ಇದ್ದು, ಇದರಿಂದಾಗಿ ಪರಿಸರಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಸರ್ಕಾರವು ಕಾರು ಉತ್ಪಾದಕ ಕಂಪನಿಗಳಿಗೆ ಸಲಹೆ ರೂಪದಲ್ಲಿ ಕೆಲವು ಅಂಶಗಳನ್ನು ನಿನ್ನೆಯ ಸಭೆಯಲ್ಲಿ ತಿಳಿಸಿದೆ.

ಕಾರು ತಯಾರಕ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ವಿದ್ಯುತ್ ಕಾರುಗಳನ್ನು ತಯಾರಿಸಲು ಪ್ರಾರಂಭಿಸಬೇಕು ಎಂದು ಸರಕಾರವು ಬಯಸುತ್ತದೆ ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಗಡ್ಕರಿ ಪ್ರಕಾರ, ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಮಾರಾಟವಾಗುತ್ತಿದ್ದು, ಈ ಕಾರುಗಳು ಪರಿಸರದಲ್ಲಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದಲ್ಲದೆ, ನಗರಗಳಲ್ಲಿ ಟ್ರಾಫಿಕ್ ಹೆಚ್ಚಿಸುತ್ತಿವೆ.

ಅದನ್ನು ಕಡಿಮೆ ಮಾಡಲು, ರಸ್ತೆ ನಿರ್ಮಾಣ ಕೆಲಸಗಳ ಮೇಲೆ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡುವ ಅವಶ್ಯಕತೆ ಇದ್ದು, ದೇಶಾದ್ಯಂತ, ಅದರಲ್ಲೂ ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಕಾರು ಬಳಕೆಗೆ ಕಡಿತಗೊಳಿಸುವುದು ಉತ್ತಮ ಎಂದು ಅವರು ಸೂಚಿಸಿದರು.

ಇತ್ತೀಚಿಗೆ, ಭಾರತೀಯ ಕಾರು ಉದ್ಯಮವು ಕಠಿಣ ಸಮಯವನ್ನು ಎದುರಿಸುತ್ತಿದ್ದು, ಒಂದು ಬದಿಯಲ್ಲಿ, ಕಂಪನಿಗಳು ತಯಾರಿಸುತ್ತಿರುವ ಹೊಸ ಕಾರುಗಳ ಬೇಡಿಕೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಮತ್ತೊಂದೆಡೆ, ಸರ್ಕಾರದ ಹೊಸ ನೀತಿಗಳು ಕಾರು ತಯಾರಕರಿಗೆ ಇಕ್ಕಟ್ಟಿಯಲ್ಲಿ ಸಿಲುಕಿಸಿರುವುದಂತೂ ನಿಜ

English summary
Road Transport Minister, Nitin Gadkari said that he wants the pace of car sales in India to slow down, especially those running on diesel as that is creating a lot of pollution. He wants car makers to simply start making electric cars, and dump petrols and diesels.
Story first published: Friday, September 8, 2017, 12:21 [IST]
Please Wait while comments are loading...

Latest Photos