2020ರ ಒಳಗಾಗಿ ಬಿಎಸ್ 6 ಡೀಸೆಲ್ ಎಂಜಿನ್ ಪರಿಚಯಿಸಲಿದೆ ಹೋಂಡಾ

ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳ ಉತ್ಪಾದನೆ ಮತ್ತು ಮಾರಾಟ ಕಡ್ಡಾಯವಾಗಿರಲಿದ್ದು, ಈ ಸಂಬಂಧ ಹೊಸ ಯೋಜನೆಯೊಂದನ್ನು ರೂಪಿಸಿರುವ ಹೋಂಡಾ ಇಂಡಿಯಾ ಸಂಸ್ಥೆಯು 2020ರ ಒಳಗಾಗಿಯೇ ಬಿಎಸ್ 6 ಕಾರುಗಳನ್ನು ಪರಿಚಯಿಸುವ ತವಕದಲ್ಲಿದೆ.

By Praveen

2020ರ ವೇಳೆಗೆ ಭಾರತೀಯ ಆಟೋ ಉದ್ಯಮದಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳ ಉತ್ಪಾದನೆ ಮತ್ತು ಮಾರಾಟ ಕಡ್ಡಾಯವಾಗಿರಲಿದ್ದು, ಈ ಸಂಬಂಧ ಹೊಸ ಯೋಜನೆಯೊಂದನ್ನು ರೂಪಿಸಿರುವ ಹೋಂಡಾ ಇಂಡಿಯಾ ಸಂಸ್ಥೆಯು 2020ರ ಒಳಗಾಗಿಯೇ ಬಿಎಸ್ 6 ಎಂಜಿನ್ ಕಾರುಗಳನ್ನು ಪರಿಚಯಿಸುವ ತವಕದಲ್ಲಿದೆ.

2020ರ ಒಳಗಾಗಿ ಬಿಎಸ್ 6 ಡಿಸೇಲ್ ಎಂಜಿನ್ ಪರಿಚಯಿಸಲಿದೆ ಹೋಂಡಾ

ಕಳೆದ ಏಪ್ರಿಲ್ 1ರಿಂದ ಬಿಎಸ್ 3 ವಾಹನಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು ಬಿಎಸ್ 4 ಮೇಲ್ಪಟ್ಟ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಆದೇಶಿಸಿದ್ದು, 2020ರ ವೇಳೆಗೆ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಲಿದೆ.

2020ರ ಒಳಗಾಗಿ ಬಿಎಸ್ 6 ಡಿಸೇಲ್ ಎಂಜಿನ್ ಪರಿಚಯಿಸಲಿದೆ ಹೋಂಡಾ

ಹೀಗಾಗಿ ಡೆಡ್‌ ಲೈನ್‌ಗೂ ಮುನ್ನವೇ ಹೊಸ ಮಾದರಿಯ ವಾಹನಗಳನ್ನು ಪರಿಚಯಿಸಲು ಮುಂದಾಗಿರುವ ಹೋಂಡಾ ಇಂಡಿಯಾ ಸಂಸ್ಥೆಯು ಮೊದಲ ಹಂತವಾಗಿ ಡೀಸೆಲ್ ಕಾರುಗಳನ್ನು ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಉನ್ನತಿಕರಿಸಲಿದೆ.

2020ರ ಒಳಗಾಗಿ ಬಿಎಸ್ 6 ಡಿಸೇಲ್ ಎಂಜಿನ್ ಪರಿಚಯಿಸಲಿದೆ ಹೋಂಡಾ

ಏನಿದು ಬಿಎಸ್ 6?

ಹೌದು... ಇದು ಪ್ರತಿಯೊಬ್ಬರಿಗೂ ಮನಸ್ಸಿನಲ್ಲೂ ಮೂಡಬಹುದಾದ ಸಾಮಾನ್ಯ ಪ್ರಶ್ನೆ. ಯಾಕಂದ್ರೆ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳು ಪರಿಸರಕ್ಕೆ ಪೂರಕವಾದ ವೈಶಿಷ್ಟ್ಯತೆಗಳನ್ನು ಹೊಂದಿರುವುದಲ್ಲದೇ ಮಾಲಿನ್ಯ ನಿಯಂತ್ರಣಕ್ಕಾಗಿ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತವೆ. ಈ ಹಿನ್ನೆಲೆ ಇಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ.

2020ರ ಒಳಗಾಗಿ ಬಿಎಸ್ 6 ಡಿಸೇಲ್ ಎಂಜಿನ್ ಪರಿಚಯಿಸಲಿದೆ ಹೋಂಡಾ

ಇನ್ನು ಯುರೋಪ ರಾಷ್ಟ್ರಗಳಲ್ಲಿ ಯುರೋ 6 ಎಂಜಿನ್ ಪ್ರೇರಿತ ವಾಹನಗಳು ಈಗಾಗಲೇ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 2020ರ ವೇಳೆಗೆ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಿವೆ.

2020ರ ಒಳಗಾಗಿ ಬಿಎಸ್ 6 ಡಿಸೇಲ್ ಎಂಜಿನ್ ಪರಿಚಯಿಸಲಿದೆ ಹೋಂಡಾ

ಈ ಹಿನ್ನೆಲೆ ಬಿಎಸ್ 6 ವಾಹನಗಳ ಉತ್ಪಾದನೆ ಮೇಲೆ ಆಸಕ್ತಿ ತೋರಿಸಿರುವ ಹೋಂಡಾ ಸಂಸ್ಥೆಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಡೀಸೆಲ್ ಎಂಜಿನ್ ಕಾರುಗಳನ್ನು ಬಿಎಸ್ 6 ಗೆ ಉನ್ನತಿಕರಿಸುವ ಮಹತ್ಪದ ಯೋಜನೆಗೆ ಚಾಲನೆ ನೀಡುತ್ತಿದೆ.

2020ರ ಒಳಗಾಗಿ ಬಿಎಸ್ 6 ಡಿಸೇಲ್ ಎಂಜಿನ್ ಪರಿಚಯಿಸಲಿದೆ ಹೋಂಡಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2020ರ ವೇಳೆಗೆ ಭಾರತೀಯ ಆಟೋ ಉದ್ಯಮ ವಲಯದಲ್ಲಿ ಹೊಸದೊಂದು ನಿಯಮವು ಜಾರಿಯಾಗಲಿದ್ದು, ಬಿಎಸ್ 6 ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಬರಲಿದೆ. ಹೀಗಾಗಿ ಭವಿಷ್ಯ ವಾಹನಗಳ ಉತ್ಪಾದನೆ ಮೇಲೆ ಹೋಂಡಾ ಇಂಡಿಯಾ ಸಂಸ್ಥೆಯು ಹೆಚ್ಚು ಉತ್ಸುಕವಾಗಿದೆ ಎನ್ನಬಹುದು.

Article Published On: Wednesday, November 29, 2017, 15:00 [IST]
English summary
Read in Kannada about Honda To Introduce BS-VI Diesel Engine In India.
Read more on honda ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+