ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ..!!

Written By:

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹೋಂಡಾ ತನ್ನ ಕ್ರಾಸ್ ಓವರ್ ಆವೃತ್ತಿ WR-V ಬಿಡುಗಡೆಗೆ ವೇದಿಕೆ ಸಿದ್ಧಗೊಳಿಸಿದ್ದು, ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.

ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ

ಇದೇ ತಿಂಗಳು ಮಾರ್ಚ್ 16ಕ್ಕೆ ಬಿಡುಗಡೆಗೊಳ್ಳಲಿರುವ ಹೋಂಡಾ WR-V ಮಾದರಿಯೂ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಜೊತೆಗೆ ಹೊಸ ವೈಶಿಷ್ಟ್ಯತೆಗಳು ಗಮನಸೆಳೆಯುತ್ತಿದ್ದು, ಹೊಸ ಕಾರಿನ ಬಗ್ಗೆ ನೀವು ಕೂಡಾ ಖುದ್ದು ವಿಚಾರಣೆ ಮಾಡಬಹುದಾಗಿದೆ.

ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ

ಹೊಸ ಮಾದರಿಯ ಬಗ್ಗೆ ಗ್ರಾಹಕರಿಗೆ ಹೆಚ್ಚಿನ ಮಾಹಿತಿ ನೀಡಲು ಮುಂದಾಗಿರುವ ಹೋಂಡಾ , ಇದಕ್ಕಾಗಿ ವೇದಿಕೆ ಸಿದ್ದಗೊಳಿಸಿದೆ. ಈ ಹಿನ್ನೆಲೆ ನೀವು ಹೊಸ ಮಾದರಿ ಬಗ್ಗೆ ತನ್ನ microsite ನಲ್ಲಿ ಬುಕ್ಕಿಂಗ್ ಆರಂಭಿಸಿದೆ.

ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ

ಹ್ಯಾಚ್‌ಬ್ಯಾಕ್ ಆವೃತ್ತಿಯಲ್ಲಿ ಸಿದ್ಧಗೊಂಡಿರುವ ಹೋಂಡಾ ಕ್ರಾಸ್ ಓವರ್ WR-V ಮಾದರಿಯೂ ಹೊರ ಭಾಗದ ವಿನ್ಯಾಸ ಅದ್ಭುತವಾಗಿದೆ. ಹೀಗಾಗಿ ಬೆಲೆಗಳ ವಿಚಾರದಲ್ಲೂ ಭಾರೀ ಎಚ್ಚರಿಕೆ ವಹಿಸಿರುವ ಹೋಂಡಾ, ಮಾಧ್ಯಮ ವರ್ಗಗಳನ್ನು ಸೆಳೆಯುವ ನಿಟ್ಟಿನಲ್ಲಿ ಮಹತ್ವದ ಯೋಜನೆ ರೂಪಿಸಿದೆ.

ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ

ವಿನೂತನ ಹೋಂಡಾ ಕ್ರಾಸ್ ಓವರ್ WR-V ಆವೃತ್ತಿಯಲ್ಲಿ ಎರಡು ಮಾದರಿಗಳಲ್ಲಿ ಲಭ್ಯವಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಡಿಸೇಲ್ ಎಂಜಿನ್ ಲಭ್ಯವಿದ್ದು, ಪ್ರಸ್ತುತ ಕಾರ್ ಮಾದರಿಗಳ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ.

ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ

ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯಿದ್ದು, ಇದರ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ವ್ಯವಸ್ಥೆ ಕೂಡಾ ಹೊಂದಿದೆ. ಆದ್ರೆ ಬೆಲೆಗಳ ಬಗ್ಗೆ ಹೋಂಡಾ ಇದುವರೆಗೆ ಯಾವುದೇ ನಿಖರ ಮಾಹಿತಿ ಬಹಿರಂಗಪಡಿಸಿಲ್ಲ.

ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ

ಕೆಲವು ಮೂಲಗಳ ಪ್ರಕಾರ ಹೊಚ್ಚ ಹೊಸ ಹೋಂಡಾ ಕ್ರಾಸ್ ಓವರ್ WR-V ಆವೃತ್ತಿಯ ಬೆಲೆಯು, 7 ರಿಂದ 10 ಲಕ್ಷ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.

ವಿನೂತನ ಹೋಂಡಾ WR-V ಕಾರು ಬಿಡುಗಡೆಗೆ ಕ್ಷಣಗಣನೆ

ಒಂದು ವೇಳೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ WR-V ಆವೃತ್ತಿಯ ಬಿಡುಗಡೆಗೊಂಡಿದ್ದೇ ಆದಲ್ಲಿ ಪ್ರತಿಸ್ಪರ್ಧಿಗಳಾದ ಸುಜುಕಿ ವಿತ್ರಾ ಬ್ರೇಜ್, ಫೋರ್ಡ್ ಇಕೋಸ್ಪೋಟ್ಸ್, ಹುಂಡೈ i20 ಆಕ್ಟೀವ್, ಟೊಯೊಟಾ ಇಷನ್ ಕ್ರಾಸ್ ಮತ್ತು ಫೋಕ್ಸ್‌ವ್ಯಾಗನ್ ಕ್ರಾಸ್ ಪೋಲೋ ಆವೃತ್ತಿಗಳಿಗೆ ಭಾರೀ ಪೈಪೋಟಿ ನೀಡಲಿದೆ.

ಬಿಡುಗಡೆಗೊಂಡಿರುವ ಹೊಚ್ಚ ಹೊಸ ಹೋಂಡಾ ಸಿಟಿ ಕಾರುಗಳ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಹೋಂಡಾ honda
English summary
Honda has launched the microsite of the WR-V ahead of its India launch. Customers can submit their contact details on the microsite.
Please Wait while comments are loading...

Latest Photos