ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

By Girish

ದಕ್ಷಿಣ ಕೊರಿಯಾದ ಪ್ರಸಿದ್ಧ ವಾಹನ ತಯಾರಕ ಕಂಪೆನಿಯಾದ ಹ್ಯುಂಡೈ ಇಂಡಿಯಾ, ಮುಂಬರುವ 2018ರ ಜನವರಿಯಿಂದ ಭಾರತದಲ್ಲಿ ತನ್ನ ಸಂಪೂರ್ಣ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

ಇನ್‌ಪುಟ್ ಮತ್ತು ಸರಕು ವೆಚ್ಚದ ಕಾರಣದಿಂದಾಗಿ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಹ್ಯುಂಡೈ ಇಂಡಿಯಾ ಸಂಸ್ಥೆಯು ನಿರ್ಧರಿಸಿದೆ. ಎಲ್ಲಾ ಮಾದರಿಗಳ ಬೆಲೆಗಳನ್ನು ಶೇಕಡಾ ಎರಡು ಪರ್ಸೆಂಟ್‌ನಷ್ಟು ಹೆಚ್ಚಿಸಲು ಹ್ಯುಂಡೈ ಇಂಡಿಯಾ ತೀರ್ಮಾನ ಕೈಗೊಂಡಿದೆ.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

2018ರ ಜನವರಿ 1ರಿಂದ ಬೆಲೆ ಹೆಚ್ಚಳದ ನಿರ್ಧಾರವು ಜಾರಿಗೆ ಬರಲಿದೆ. ವಾರ್ಷಿಕ ಬೆಲೆ ಪರಿಷ್ಕರಣೆಯ ಭಾಗವಾಗಿ ಮುಂದಿನ ವರ್ಷದ ಜನವರಿ 1ರಿಂದ ಅದರ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಿರುವುದಾಗಿ ಎಂದು ಹ್ಯುಂಡೈ ಹೇಳಿಕೆ ನೀಡಿದೆ.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

ಪ್ರಸ್ತುತ, ಹ್ಯುಂಡೈ ಸಂಸ್ಥೆಯು ಪ್ರವೇಶ ಮಟ್ಟದ ಇಯಾನ್ ಹ್ಯಾಚ್‌ಬ್ಯಾಕ್‌ನಿಂದ ಶುರುವಾಗಿ, ಭಾರತದ ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

ಭಾರತದಲ್ಲಿ ಇತ್ತೀಚೆಗೆ ಹ್ಯುಂಡೈ ಸಂಸ್ಥೆಯು, ತನ್ನ ಹೊಸ ವರ್ನಾ ಸೆಡಾನ್ ಮತ್ತು ಟಕ್ಸನ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಕಾರು ಪ್ರಿಯರಿಗೆ ಹತ್ತಿರವಾಗಿರುವುದನ್ನು ನಾವು ಸ್ಮರಿಸಬಹುದು.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

2% ಏರಿಕೆ ಅಂಶವನ್ನು ಪರಿಗಣಿಸಿದರೆ, ಟಕ್ಸನ್ ಎಸ್‌ಯುವಿ ಕಾರಿನ ಬೆಲೆಯೂ ಸುಮಾರು ರೂ.50000 ಸಾವಿರ ಹೆಚ್ಚಿಗೆಯಾಗುವ ಸಂಭವವಿದೆ. ಈ ಬಲಿಷ್ಠ ಕಾರು ಭಾರತದಲ್ಲಿ ರೂ.24.99 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಮಾರಾಟವಾಗುತ್ತಿದೆ.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

"ಕಾರಿಗೆ ಬಳಸಲಾಗುವ ಕಚ್ಚಾ ವಸ್ತು ಮತ್ತು ಇತರ ಕಾರಣಗಳಿಂದಾಗಿ ನಮ್ಮ ಕಾರುಗಳ ಬೆಲೆಗಳನ್ನು ಶೇಕಡಾ 2ರಷ್ಟು ಹೆಚ್ಚಿಸುತ್ತೇವೆ" ಎಂದು ಹುಂಡೈ ಇಂಡಿಯಾ ಕಂಪನಿಯ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ರಾಕೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

ಕಳೆದ ಕೆಲವು ವರ್ಷಗಳಿಂದ ಏರಿಕೆಯಾಗುತ್ತಿರುವ ತಯಾರಕ ವೆಚ್ಚ ಮತ್ತು ವಿದೇಶಿ ವಿನಿಮಯ ದರಗಳ ಏರಿಳಿತದ ಕಾರಣದಿಂದಾಗಿ ಬೆಲೆ ಪರಿಷ್ಕರಣೆಯು ವಾಹನೋದ್ಯಮದಲ್ಲಿ ಒಂದು ಸಾಮಾನ್ಯ ಪರಿಪಾಠವಾಗಿರುವುದನ್ನು ನಾವೆಲ್ಲರೂ ಗಮನಿಸಿರಬಹುದು.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

ನೀವೇನಾದರೂ ಹ್ಯುಂಡೈ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಡಿಸೆಂಬರ್ ತಿಂಗಳಿನಲ್ಲಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡುವುದು ಯೋಗ್ಯವಾಗಿದೆ.

ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ ಹ್ಯುಂಡೈ

ಹ್ಯುಂಡೈ ಸಂಸ್ಥೆಯ ಎಲ್ಲಾ ಮಾದರಿಗಳ ಮೇಲೆ ಡಿಸೆಂಬರ್ ತಿಂಗಳಿನಲ್ಲಿ ರಿಯಾಯಿತಿಯನ್ನು ನೀಡುತ್ತಿದ್ದು, ಕಾರಿನ ಮಾದರಿಯ ಆಧಾರದ ಮೇಲೆ ಗ್ರಾಹಕರು ರೂ.90,000 ರೂಪಾಯಿಗಳವರೆಗೆ ಡಿಸ್ಕೌಂಟ್ ಪಡೆಯಬಹುದು.

Kannada
English summary
Hyundai India has announced that it will increase the prices of its entire product portfolio in India, starting from January 2018.
Story first published: Thursday, December 21, 2017, 13:08 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more