ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾದ ಹ್ಯುಂಡೈ

Written By:

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪೆನಿಯಾದ ಹ್ಯುಂಡೈ ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾಗಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ.

To Follow DriveSpark On Facebook, Click The Like Button
ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾದ ಹ್ಯುಂಡೈ

ಭಾರತ ದೇಶದಲ್ಲಿ ಕಂಪನಿಯು ಸಣ್ಣ ಮತ್ತು ಭಾರೀ ವಾಣಿಜ್ಯ ವಾಹನಗಳ ಮಾರುಕಟ್ಟೆಯ ಕಡೆ ಹೆಚ್ಚು ಗಮನ ಹರಿಸಿದ್ದು, ಈ ಬಗ್ಗೆ ಈಗಾಗಲೇ ತಮ್ಮ ನಡೆಯನ್ನು ದೃಡೀಕರಿಸಿದೆ. ಬಹಳಷ್ಟು ಸಂಖ್ಯೆಯಲ್ಲಿ ಅಭಿಮಾನಿ ಬಳಗ ಹೊಂದಿರುವ ಹ್ಯುಂಡೈ ಕಂಪನಿಯ ಈ ನಿರ್ಧಾರ ಹೆಚ್ಚು ಜನಕ್ಕೆ ಅಚ್ಚರಿ ಹಾಗು ಸಂತೋಷ ಮೂಡಿಸಿದೆ.

ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾದ ಹ್ಯುಂಡೈ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಕಂಪನಿಯ ಎಂಡಿ ಹಾಗು ಹಾಗು ಸಿಇಓ(ಹುಂಡೈ) ಆಗಿರುವಂತಹ ವೈ.ಕೆ ಕೂ ಅವರು ಈ ಅಭಿವೃದ್ಧಿಯನ್ನು ದೃಢಪಡಿಸಿದ್ದು, ವಾಹನೋದ್ಯಮದಲ್ಲಿ ಸಂಚಲ ಉಂಟು ಮಾಡಿದೆ.

ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾದ ಹ್ಯುಂಡೈ

ಹ್ಯುಂಡೈ ಸಂಸ್ಥೆಯ ಸಿ.ವಿ. ವಿಭಾಗದಿಂದ ತಂಡವೊಂದು ಈ ಬಗ್ಗೆ ಪರಿಶೀಲನೆ ನೆಡೆಸಲು ಮುಂದಾಗಿದ್ದು, ಭಾರತದ ಮಾರುಕಟ್ಟೆ ಅಧ್ಯಯನ ಮತ್ತು ಸಂಭಾವ್ಯ ಉದ್ಯಮಿಗಳ ಭೇಟಿ ಜೂನ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಿತ್ತು.

ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾದ ಹ್ಯುಂಡೈ

2016ರ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಸಂಸ್ಥೆ ತನ್ನ ವಾಣಿಜ್ಯ ವಾಹನ ವ್ಯಾಪಾರ ವಿಸ್ತರಿಸುವ ಬಗ್ಗೆ ಕಾತುರವಾಗಿದೆ ಎಂಬ ವಿಚಾರ ವರದಿಯಾಗಿದ್ದನ್ನು ನಾವು ಸ್ಮರಿಸಬಹುದಾಗಿದೆ.

ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾದ ಹ್ಯುಂಡೈ

ಸಂಸ್ಥೆಯು ಈಗಾಗಲೇ ದೇಶದಲ್ಲಿ ತಯಾರಿಕೆಗೆ ಅವಶ್ಯಕತೆ ಇರುವಂತಹ ಸೌಲಭ್ಯಗಳನ್ನು ಪಡೆದುಕೊಂಡಿದೆ ಹಾಗು ವಾಣಿಜ್ಯ ವಾಹನಗಳ ಉತ್ಪತ್ತಿ ಮತ್ತು ರಫ್ತು ಯೋಜನೆಗಳನ್ನು ಸಹ ಹೊಂದಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಲಿದೆ.

ಭಾರತದಲ್ಲಿ ವಾಣಿಜ್ಯ ವಾಹನಗಳ ತಯಾರಿಕೆಗೆ ಮುಂದಾದ ಹ್ಯುಂಡೈ

ಜಾಗತಿಕ ವಾಣಿಜ್ಯ ವಾಹನ ತಯಾರಕರು ಸಂಸ್ಥೆಗಳಾದ ವೋಲ್ವೊ, ಸ್ಕ್ಯಾನಿಯಾ, ಡೈಮ್ಲರ್ ಮತ್ತು ಎಂ.ಎ.ಏನ್ ಈಗಾಗಲೇ ಭಾರತದಲ್ಲಿ ತಮ್ಮ ಬೃಹತ್ ಗಾತ್ರದ ಟ್ರಕ್ ಮತ್ತು ಬಸ್ಸುಗಳನ್ನು ಬಿಡುಗಡೆಗೊಳಿಸಿ ವ್ಯವಹರಿಸುತ್ತಿವೆ, ಅವುಗಳ ಸಾಲಿಗೆ ಹ್ಯುಂಡೈ ಸಂಸ್ಥೆ ಸೇರಲಿದೆ.

English summary
Read in kannada about South Korean automaker Hyundai is looking to enter the commercial vehicle space in India
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark