ಹ್ಯುಂಡೈ ಕ್ರೇಟಾ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು

Written By:

ಕಡೆದ 2015 ರಲ್ಲಿ ಹ್ಯುಂಡೈ ಕ್ರೇಟಾ ಕಾರನ್ನು ಬಿಡುಗಡೆಗೊಳಿಸಿದ್ದ ಕಂಪನಿ ಅತಿ ವೇಗವಾಗಿ ಅಂದರೆ ಕೇವಲ 8 ತಿಂಗಳ ಒಳಗಾಗಿ ಒಂದು ಲಕ್ಷ ಕಾರು ಬುಕ್ ಆಗುವ ಮೂಲಕ ಹೆಚ್ಚು ಜನಪ್ರಿಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

ಸೌತ್ ಕೊರಿಯಾದ ಕಾರು ಮಾರಾಟ ಸಂಸ್ಥೆಯಾದ ಹ್ಯುಂಡೈ ಈಗಾಗಲೇ 1.5 ಲಕ್ಷ ಕ್ರೇಟಾ ಕಾರನ್ನು ಮಾರಾಟ ಮಾಡಿದ್ದು, 2015 ಇಂಡಿಯನ್ ಕಾರ್ ಆಫ್ ದಿ ಇಯರ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು, ಈ ಪ್ರಖ್ಯಾತ ಕಾರು ಹ್ಯುಂಡೈ ಕಂಪನಿಗೆ ಈ ವರ್ಷ ಈ ಪ್ರಶಸ್ತಿ ತಂದುಕೊಟ್ಟಿದೆ.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

ಈ ವರ್ಷವೂ ಸೇರಿ ಕಳೆದ ಮೂರು ವರ್ಷಗಳಿಂದ ಹ್ಯುಂಡೈ ಕಂಪನಿ ಈ ಗೌರವ ಪಡೆದುಕೊಳ್ಳುತ್ತಿದ್ದು,2014 ಮತ್ತು 2015ನಲ್ಲಿ ಕ್ರಮವಾಗಿ ಗ್ರಾಂಡ್ ಐ10 ಮತ್ತು ಎಲೈಟ್ i20 ಕಾರುಗಳು ಈ ಪ್ರಶಸ್ತಿ ಪಡೆದುಕೊಂಡಿದ್ದವು.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

ನಿಮಗೆ ತಿಳಿದಿರಲಿ, ಬಿಡುಗಡೆಯಾದ ದಿನಾಂಕದಿಂದ ಇಲ್ಲಿಯವರೆಗೂ ಕಳೆದ ತಿಂಗಳೊಂದರಲ್ಲಿಯೇ ಅತಿ ಹೆಚ್ಚು ಕ್ರೇಟಾ ಕಾರುಗಳನ್ನು(9,002) ಹ್ಯುಂಡೈ ಕಂಪನಿ ಮಾರಾಟ ಮಾಡಿ ದಾಖಲೆ ನಿರ್ಮಿಸಿತ್ತು.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

ನೀವೇನಾದರು ಕ್ರೇಟಾ ಕಾರು ಬುಕ್ ಮಾಡಬೇಕೆಂದರೆ ಒಮ್ಮೆ ಯೋಚಿಸುವುದು ಒಳಿತು, ಏಕೆ ಗೊತ್ತೇ ? ಕ್ರೇಟಾ ಕಾರು ಈಗ ಬುಕ್ ಮಾಡಿದರೆ ನಿಮ್ಮ ಮನೆ ಗ್ಯಾರೇಜು ಸೇರಲು ಸರಿ ಸುಮಾರು 10 ತಿಂಗಳು ಬೇಕಾಗುತ್ತದೆ.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

ಹ್ಯುಂಡೈನ ಸಮೀಪ ಪ್ರತಿಸ್ಪರ್ಧಿ ಮಾರುತಿ ಸುಜುಕಿ ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ತನ್ನ ಕ್ರೀಡಾ ಬಳಕೆಯ ಕಾಂಪ್ಯಾಕ್ಟ್ ಮಾದರಿ ವಿಟಾರಾ ಬ್ರಿಝಾ ಕಾರುಗಳನ್ನು ಮಾರಾಟ ಮಾಡಿದ್ದಾಗಿ ಕಳೆದ ತಿಂಗಳು ಅಂಕಿ ಅಂಶ ಬಿಡುಗಡೆ ಮಾಡಿತ್ತು.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

ಈಗಾಗಲೇ 1 ಲಕ್ಷ ಮಂದಿ ಈ ಕಾರನ್ನು ಕಾಯ್ದಿರಿಸಿದ್ದು, ಕಂಪನಿ ಈಗಾಗಲೇ ತನ್ನ ಗ್ರಾಹಕರಿಗೆ ಈ ಬಗ್ಗೆ ಸೂಚನೆ ನೀಡುವ ಪ್ರಕ್ರಿಯೆ ಆರಂಭಿಸಿದ್ದು, ಬೇಡಿಕೆಯನ್ನು ತಲುಪುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

ಇತ್ತೀಚಿಗಷ್ಟೇ ಮೊದಲ ವರ್ಷದ ಸಂಭ್ರಮವನ್ನು ಆಚರಣೆಯ ಪ್ರಯುಕ್ತ ಹೊಸ ರೂಪದಲ್ಲಿ ನಿಮ್ಮ ಮುಂದೆ ಬಂದಿದ್ದ ಕ್ರೇಟಾ, ಈಗ ಮಾತ್ತೊಂದು ಖುಷಿ ಸಮಾಚಾರ ಹಂಚಿಕೊಂಡಿದೆ.

 ಈಗ ಬುಕ್ ಮಾಡುದ್ರೆ ಹತ್ತು ತಿಂಗಳು ಅದ್ಮೇಲ್ ಸಿಗತ್ತೆ: ಯಾಕೆ ಗೊತ್ತಾ ?

2015-2016 ಅವಧಿಯಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಕ್ರೇಟಾ ಭಾಜನವಾಗಿದ್ದು, ಮೊದಲ ಸ್ಥಾನವನ್ನು ಮಹೀಂದ್ರಾ ಬೊಲೆರೊ ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿಯೇ 5 ಲಕ್ಷ ಕ್ರೇಟಾ ಕಾರುಗಳ ಮೈಲಿಗಲ್ಲು ಮುಟ್ಟುವ ಯೋಜನೆ ಹಾಕಿಕೊಂಡಿರುವ ಹ್ಯುಂಡೈ ಆದಷ್ಟು ಬೇಗೆ ಈ ಗುರಿಯನ್ನು ಮುಟ್ಟಲಿ ಎಂದು ಆಶಿಸೋಣ.

ಹ್ಯುಂಡೈ ಕ್ರೇಟಾ ಕಾರಿನ ಚಿತ್ರಗಳನ್ನು ಈ ಕೆಳಗೆ ವೀಕ್ಷಿಸಿ...

English summary
The Hyundai Creta was introduced in 2015, and it recorded 1 lakh bookings within eight months, and waiting period rose up to 10 months at one point.
Please Wait while comments are loading...

Latest Photos