ಎಕ್ಸೆಂಟ್ ಎಲೆಕ್ಟ್ರಿಕ್ ಸೆಡಾನ್ ಪರಿಚಯಿಸಲಿದೆ ಹ್ಯುಂಡೈ

Written By:

ಪರಿಸರಕ್ಕೆ ಪೂರಕವಾಗಿ ಎಲ್ಲ ಆಟೋ ಉತ್ಪಾದಕರು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆಗೆ ಹಸಿರು ನಿಶಾನೆ ತೋರಿದ್ದು, ಇದೀಗ ಹ್ಯುಂಡೈ ಸಂಸ್ಥೆಯು ಕೂಡಾ ತನ್ನ ಜನಪ್ರಿಯ ಸೆಡಾನ್ ಮಾದರಿಯಾದ ಎಕ್ಸೆಂಟ್ ಆವೃತ್ತಿಯನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಪರಿಚಯಿಸುವ ಸುಳಿವು ನೀಡಿದೆ.

ಎಕ್ಸೆಂಟ್ ಎಲೆಕ್ಟ್ರಿಕ್ ಸೆಡಾನ್ ಪರಿಚಯಿಸಲಿದೆ ಹ್ಯುಂಡೈ

ದೇಶಿಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾದರಿಯ ಕಾರುಗಳನ್ನು ಪರಿಚಯಿಸುವ ಮೂಲಕ ಕಾರು ಮಾರಾಟದಲ್ಲಿ 2ನೇ ಸ್ಥಾನದಲ್ಲಿರುವ ಹ್ಯುಂಡೈ ಸಂಸ್ಥೆಯು ಸದ್ಯದಲ್ಲೇ ಎಲೆಕ್ಟ್ರಿಕ್ ಕಾರು ವಿಭಾಗಕ್ಕೂ ಲಗ್ಗೆಯಿಡಲಿದ್ದು, ಜನಪ್ರಿಯ ಎಕ್ಸೆಂಟ್ ಕಾರು ಆವೃತ್ತಿಯನ್ನೇ ಎಲೆಕ್ಟ್ರಿಕ್ ಮಾದರಿಯಲ್ಲಿ ನಿರ್ಮಾಣ ಮಾಡಲಿದೆ.

ಎಕ್ಸೆಂಟ್ ಎಲೆಕ್ಟ್ರಿಕ್ ಸೆಡಾನ್ ಪರಿಚಯಿಸಲಿದೆ ಹ್ಯುಂಡೈ

ಈ ಬಗ್ಗೆ ಮುಂಬರುವ 2018ರ ದೆಹಲಿ ಆಟೋ ಮೇಳದಲ್ಲಿ ಅಧಿಕೃತವಾಗಿ ಮಾಹಿತಿ ಹೊರಹಾಕಲಿರುವ ಹ್ಯುಂಡೈ, ಹೊಸ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಮಾಹಿತಿಯನ್ನು ಬಿಡುಗಡೆ ಮಾಡಲಿದೆ.

Recommended Video - Watch Now!
2017 Hyundai Verna Launched In India - DriveSpark
ಎಕ್ಸೆಂಟ್ ಎಲೆಕ್ಟ್ರಿಕ್ ಸೆಡಾನ್ ಪರಿಚಯಿಸಲಿದೆ ಹ್ಯುಂಡೈ

ಇದಲ್ಲದೇ ಎಕ್ಸೆಂಟ್ ಮಾದರಿಯ ಜೊತೆ ಜೊತೆಗೆ ಐ20 ಮತ್ತು ಐಯಾನ್ ಆವೃತ್ತಿಗಳನ್ನು ಕೂಡಾ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸುವ ತವಕದಲ್ಲಿರುವ ಹ್ಯುಂಡೈ, ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಬಳಕೆ ಮಾಡುವ ಇರಾದೆಯಲ್ಲಿದೆ.

ಎಕ್ಸೆಂಟ್ ಎಲೆಕ್ಟ್ರಿಕ್ ಸೆಡಾನ್ ಪರಿಚಯಿಸಲಿದೆ ಹ್ಯುಂಡೈ

ಹೀಗಾಗಿ ಪ್ರತಿ ಚಾರ್ಜಿಂಗ್‌‌ನಿಂದ ಎಲೆಕ್ಟ್ರಿಕ್ ಕಾರುಗಳು 200 ರಿಂದ 250 ಕಿಮಿ ಮೈಲೇಜ್ ನೀಡುವ ನೀರಿಕ್ಷೆಯಿದ್ದು, ಅಧಿಕೃತ ಮಾಹಿತಿ ಬಿಡುಗಡೆಗೊಂಡ ನಂತರವಷ್ಟೇ ಹೊಸ ಕಾರಿನ ಕಾರ್ಯಕ್ಷಮತೆ ಹೇಗಿರಲಿದೆ ಎಂದು ತಿಳಿಯಲಿದೆ.

ಎಕ್ಸೆಂಟ್ ಎಲೆಕ್ಟ್ರಿಕ್ ಸೆಡಾನ್ ಪರಿಚಯಿಸಲಿದೆ ಹ್ಯುಂಡೈ

ಇನ್ನು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳು ಎಲ್‌ಇಡಿ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಹೊಂದಿರಲಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಆಟೋ ಸೌಲಭ್ಯಗಳನ್ನು ಹೊಂದಿರಲಿದೆ.

ಎಕ್ಸೆಂಟ್ ಎಲೆಕ್ಟ್ರಿಕ್ ಸೆಡಾನ್ ಪರಿಚಯಿಸಲಿದೆ ಹ್ಯುಂಡೈ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2030ರ ವೇಳೆಗೆ ಶೇ.99ರಷ್ಟು ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ರಸ್ತೆಗಿಳಿಸುವ ಬೃಹತ್ ಯೋಜನೆಗೆ ಎಲ್ಲಾ ಆಟೋ ಉತ್ಪಾದಕರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಹ್ಯುಂಡೈ ಕೈಗೊಂಡಿರುವ ಯೋಜನೆ ಕೂಡಾ ಮಹತ್ಪದಾಗಿದೆ.

English summary
Read in Kannada about Hyundai Electric Sedan Concept To Be Revealed Soon In India.
Story first published: Tuesday, November 28, 2017, 13:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark