ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೊಸ ಯೋಜನೆ ರೂಪಿಸಲು ಮುಂದಾದ ಹ್ಯುಂಡೈ

2030ರ ವೇಳೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಸದ್ದು ಸಂಪೂರ್ಣವಾಗಿ ತಗ್ಗಲಿದ್ದು, ಈ ಹಿನ್ನೆಲೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೊಸ ಆಯಾಮ ನೀಡಲು ಮುಂದಾಗಿರುವ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆ ರೂಪಿಸಿದೆ.

By Praveen

2030ರ ವೇಳೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಸದ್ದು ಸಂಪೂರ್ಣವಾಗಿ ತಗ್ಗಲಿದ್ದು, ಈ ಹಿನ್ನೆಲೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೊಸ ಆಯಾಮ ನೀಡಲು ಮುಂದಾಗಿರುವ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೊಸ ಯೋಜನೆ ರೂಪಿಸಲು ಮುಂದಾದ ಹ್ಯುಂಡೈ

ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಯೋಜನೆ ರೂಪಿಸಲು ಮುಂದಾಗಿರುವ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಇಂಡಿಯಾ, 2019ರ ವೇಳೆಗೆ ಎಲೆಕ್ಟ್ರಿಕ್ ಮಿನಿ ಎಸ್‌ಯುವಿ ಕಾರುಗಳ ಉತ್ಪಾದನೆಯ ಗುರಿ ಹೊಂದಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೊಸ ಯೋಜನೆ ರೂಪಿಸಲು ಮುಂದಾದ ಹ್ಯುಂಡೈ

ಇದಕ್ಕಾಗಿಯೇ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಬಗ್ಗೆ ಅಧ್ಯಯನವೊಂದನ್ನು ಕೈಗೊಂಡಿರುವ ಹ್ಯುಂಡೈ ಇಂಡಿಯಾ, ಎಲೆಕ್ಟ್ರಿಕ್ ಕಾರುಗಳ ಬಗೆಗೆ ಭಾರತೀಯ ಮಾರುಕಟ್ಟೆಯಲ್ಲಿನ ಭವಿಷ್ಯದ ಕುರಿತು ಹೊಸ ಸಂಶೋಧನೆ ನಡೆಸುತ್ತಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೊಸ ಯೋಜನೆ ರೂಪಿಸಲು ಮುಂದಾದ ಹ್ಯುಂಡೈ

ಈ ಬಗ್ಗೆ ಮಾತನಾಡಿರುವ ಹ್ಯುಂಡೈ ಇಂಡಿಯಾ ವೈ.ಕೆ.ಕೂ, "ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಭಾರತೀಯ ಮಾರುಕಟ್ಟೆಯಲ್ಲಿ ಭವಿಷ್ಯವಿದ್ದು, ಸದ್ಯದಲ್ಲೇ ಬೃಹತ್ ಯೋಜನೆಯೊಂದನ್ನು ಪ್ರಕಟಿಸುವ ತವಕದಲ್ಲಿದ್ದೇವೆ" ಎಂದಿದ್ದಾರೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೊಸ ಯೋಜನೆ ರೂಪಿಸಲು ಮುಂದಾದ ಹ್ಯುಂಡೈ

ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ವಿಶೇಷ ಆಸಕ್ತಿ ತೊರಿರುವ ಹ್ಯುಂಡೈ ಸಂಸ್ಥೆಯು, ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಉತ್ಪಾದನೆಗಿಂತ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೊಸ ಯೋಜನೆ ರೂಪಿಸಲು ಮುಂದಾದ ಹ್ಯುಂಡೈ

ಹ್ಯುಂಡೈ ಜನಪ್ರಿಯ ಕಾರು ಮಾದರಿಗಳಾದ ಐ10 ಮತ್ತು ಐ20 ಜೊತೆ ಮಿನಿ ಎಸ್‌ಯುವಿ ಮಾದರಿಗಳನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಪರಿಚಯಿಸುವ ಸಾಧ್ಯತೆಗಳಿದ್ದು, ಸಂಶೋಧನಾ ವರದಿ ಬಂದ ನಂತರವಷ್ಟೇ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೊಸ ಯೋಜನೆ ರೂಪಿಸಲು ಮುಂದಾದ ಹ್ಯುಂಡೈ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ವಿಶೇಷ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ಕೈಗೊಳ್ಳಲು ಮುಂದಾಗಿರುವ ಹ್ಯುಂಡೈ ನಡೆ ಗಮರ್ನಾಹವಾಗಿದೆ.

Most Read Articles

Kannada
English summary
Read in Kannada about Hyundai To Conduct Feasibility Study To Introduce Mini Electric SUV In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X