ಹ್ಯುಂಡೈ ಎಲೈಟ್ ಐ20 ಫೇಸ್‌ಲಿಫ್ಟ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆ
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಎಚ್ಎಂಐಎಲ್) ಕಂಪನಿಯು ಭಾರತದಲ್ಲಿ ಫೇಸ್‌ಲಿಫ್ಟ್ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರಾರಂಭಿಸಲು ಸಜ್ಜಾಗುತ್ತಿದೆ.
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಎಚ್ಎಂಐಎಲ್) ಕಂಪನಿಯು ಭಾರತದಲ್ಲಿ ಫೇಸ್‌ಲಿಫ್ಟ್ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರಾರಂಭಿಸಲು ಸಜ್ಜಾಗುತ್ತಿದೆ.

ಮುಂಬರುವ 2018ರ ದೆಹಲಿಯಲ್ಲಿ ಆಟೋ ಎಕ್ಸ್‌ಪೋದಲ್ಲಿ ಐ20 ಫೇಸ್‌ಲಿಫ್ಟ್ ಮಾದರಿಯನ್ನು ಬಹಿರಂಗಗೊಳ್ಳಲಿದೆ. ಈ ವಾಹನ ಅಧಿಕೃತವಾಗಿ ಬಹಿರಂಗವಾಗುವ ಮುನ್ನವೇ ತಮಿಳುನಾಡಿನಲ್ಲಿ ಚೆನ್ನೈ ನಗರದಲ್ಲಿ ಪರೀಕ್ಷೆಯ ವೇಳೆ ಕಾಣಿಸಿಕೊಂಡಿದ್ದು, ಸಾಕಷ್ಟು ನವೀಕರಣ ಮತ್ತು ಹೊಸ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆ ಇದೆ.

ಈಗಾಗಲೇ ಕಂಪನಿಯು ಗ್ರ್ಯಾಂಡ್ ಐ10 ಮತ್ತು ಎಕ್ಸ್‌ಸೆಂಟ್ ಸಬ್-ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ನವೀಕರಿಸಿದೆ ಮತ್ತು ಮುಂದಿನ ತಲೆಮಾರಿನ ವರ್ನಾ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಎಲ್ಲಾ ಮಾದರಿಗಳೂ ಕೂಡ ಅಪ್‌ಡೇಟ್ ಆಗಿದ್ದು, ಐ20 ವಾಹನದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದ್ರೆ, ಸದ್ಯ ಬಿಡುಗಡೆಗೊಂಡಿರುವ ಐ20 ರಹಸ್ಯ ಚಿತ್ರಗಳು ಈ ಕಾರಿನ ನವೀಕರಣದ ವಿಚಾರವನ್ನು ದೃಢಪಡಿಸಿವೆ.

ತನ್ನ ಸಹೋದರ ಮಾದರಿಯ ವಿನ್ಯಾಸ ಭಾಷೆಯನ್ನು ಪಡೆದಿರುವ ಐ20 ಫೇಸ್‌ಲಿಫ್ಟ್ ಕಾರು, ಕ್ಯಾಸ್ಕೇಡಿಂಗ್ ಸ್ಪೋರ್ಟ್ ಮುಂಭಾಗದ ಗ್ರಿಲ್ ಪಡೆಯುತ್ತದೆ. ಈ ಗ್ರಿಲ್ಲ ಕ್ರೋಮ್ ಸ್ಲಾಟ್‌ಗಳ ಬದಲಿಗೆ, ಜೇನುಗೂಡು ಮಾದರಿಯ ವಿನ್ಯಾಸವನ್ನು ಪಡೆಯಲಿದೆ.

ಪುನರ್ನಿರ್ಮಾಣಗೊಂಡಿರುವ ಹೆಡ್ ಲ್ಯಾಂಪ್‌ಗಳು ಮತ್ತು ಹಗಲಿನ ಹೊತ್ತು ಬೆಳಗುವ ಎಲ್ಇಡಿ ದೀಪಗಳನ್ನು ಪಡೆಯುತ್ತದೆ. ಪರಿಷ್ಕೃತಗೊಂಡ ಮುಂಭಾಗದ ಬಂಪರ್ ನವೀನ ವಿನ್ಯಾಸ ಪಡೆಯಲಿದೆ. ಈ ಬಂಪರ್ ಮಹತ್ವದ ಫಾಗ್ ದೀಪ ಒಳಗೊಂಡಿದೆ.

ಹ್ಯಾಚ್‌ಬ್ಯಾಕ್ ಹೊಸ ಗಾಢವಾದ ಮಿಶ್ರಲೋಹದ ಚಕ್ರಗಳನ್ನು ಹೊಂದುವ ಸಾಧ್ಯತೆ ಇದೆ. ಆದರೆ, ಆಯ್ಕೆಯಾಗಿ ಐ20 ವಾಹನವು ಡ್ಯುಯಲ್ ಟೋನ್ ಡೈಮಂಡ್ ಕಟ್ ಮಿಶ್ರಲೋಹ ಚಕ್ರಗಳನ್ನು ಕೂಡ ಅಳವಡಿಸಿಕೊಳ್ಳಲೂಬಹುದು.

ಕಾರಿನ ಹಿಂಭಾಗದ ಪ್ರೊಫೈಲ್ ಬಗ್ಗೆ ಐ20 ಫೇಸ್‌ಲಿಫ್ಟ್ ಪತ್ತೇದಾರಿ ಚಿತ್ರಗಳಿಂದ ಯಾವುದೇ ಮಾಹಿತಿ ದೊರಕಿಲ್ಲ ಎನ್ನಬಹುದು. ಆದರೆ, ಹಿಂಭಾಗದ ಬಂಪರ್ ಕೂಡ ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ. ಟೈಲ್ ಲೈಟ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.


Click it and Unblock the Notifications








