ಹ್ಯುಂಡೈ ಸಂಸ್ಥೆಯ ಐ20 ಸ್ಪೋರ್ಟ್ಸ್ ಹೆಸರಿಗೆ ತಕ್ಕಂತ ಹೆಚ್ಚು ಸ್ಪೋರ್ಟ್ಸ್ ಅಂಶಗಳನ್ನು ಪಡೆದುಕೊಂಡಿದ್ದು, ಹೆಚ್ಚು ಕಾಸ್ಮೆಟಿಕ್ ಬದಲಾವಣೆಗಳನ್ನು ಈ ಹ್ಯಾಚ್ ಬ್ಯಾಕ್ ಪಡೆದುಕೊಂಡಿದೆ. ಆದರೆ, ಯಾವುದೇ ರೀತಿಯ ಮೆಕ್ಯಾನಿಕಲ್ ಬದಲಾವಣೆ ಈ ಕಾರಿನಲ್ಲಿ ನೀವು ಕಾಣುವುದಿಲ್ಲ.
ಐ20 ಸ್ಪೋರ್ಟ್ಸ್ ಕಾರು, ಹೊಸ ಹಗಲುವೇಳೆ ಬೆಳಗುವ ದೀಪಗಳನ್ನು ಒಳಗೊಂಡಿರುವ ಫಾಗ್ ಲ್ಯಾಂಪ್, ಕೆಂಪು ಬಣ್ಣದ ಬಂಪರ್ ಅಲಂಕಾರ, ಸೈಡ್ ಸೈಡ್‌ಸ್ಕರ್ಟ್, 16 ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ದೊಡ್ಡ ಛಾವಣಿಯ ಸ್ಪಾಯ್ಲರ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ಐ20 ಸ್ಪೋರ್ಟ್ಸ್ ಕಾರು 8 ಇಂಚಿನ ಟಚ್‌ಸ್ಕ್ರೀನ್ ಟಿವಿ ವ್ಯವಸ್ಥೆ, ಸ್ಟೀರಿಂಗ್‌ನಲ್ಲಿರುವ ಗುಂಡಿಗಳು, ಟಿಲ್ಟ್ ಮತ್ತು ಅಡ್ಜಸ್ಟ್‌ಮೆಂಟ್ ಸ್ಟೀರಿಂಗ್ ಹೊಂದಾಣಿಕೆ, ಎಂಜಿನ್ ಸ್ಟಾಪ್ ಮತ್ತು ಸ್ಟಾರ್ಟ್ ಬಟನ್ ಸೌಲಭ್ಯ ನೋಡಬಹುದಾಗಿದೆ.
ಐ20 ಸ್ಪೋರ್ಟ್ಸ್ ಆವೃತ್ತಿಯು 1.4-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 98-ಬಿಎಚ್‌ಪಿ ಮತ್ತು 113-ಬಿಎಚ್‌ಪಿ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.
ಆತ್ಯಾಕರ್ಷಕ ಹೊರ ವಿನ್ಯಾಸ ಹೊಂದಿರುವ ಹ್ಯುಂಡೈ ಐ20 ಸ್ಪೋರ್ಟ್ಸ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಳ್ಳುವುದರ ಬಗ್ಗೆ ಯಾವುದೇ ಖಾತರಿಯನ್ನು ಕಂಪನಿ ನೀಡಿಲ್ಲ. ಒಂದು ವೇಳೆ ಭಾರತದಲ್ಲಿ ಬಿಡುಗಡೆಗೊಂಡರೂ ಸಹ ಸೀಮಿತ ಆವೃತಿಯಲ್ಲಿ ಬಿಡುಗಡೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.