ಮುಂದಿನ ಪೀಳಿಗೆಯ ಫ್ಯುಯೆಲ್ ಸೆಲ್ ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

Written By:

ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ, ಸಿಯೋಲ್‌ನಲ್ಲಿ ಹೈಡ್ರೋಜನ್ ಇಂಧನ ಬಳಸಿ ಚಲಿಸುವ ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದೆ.

ಮುಂದಿನ ಪೀಳಿಗೆಯ ಫ್ಯುಯೆಲ್ ಸೆಲ್ ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಜಿನಿವಾ ಮೋಟಾರ್ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಎಫ್ಇ ಇಂಧನ ಕೋಶದ ಕಾನ್ಸೆಪ್ಟ್ ಆಧರಿಸಿ ಈ ಕಾರನ್ನು ಉತ್ಪಾದನೆ ಮಾಡಲು ಹ್ಯುಂಡೈ ಮುಂದಾಗಿದ್ದು, ಎಫ್‌ಸಿಇವಿ ಹೊಂದಿರುವ ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಒಮ್ಮೆ ಚಾರ್ಜ್ ಮಾಡಿದರೆ 580 ಕಿ.ಮೀ ಚಾಲನಾ ವ್ಯಾಪ್ತಿಯನ್ನು ತಲುಪುತ್ತದೆ.

ಮುಂದಿನ ಪೀಳಿಗೆಯ ಫ್ಯುಯೆಲ್ ಸೆಲ್ ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಈ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಮೋಟಾರ್ ವಾಹನ, 400 ಏನ್‌ಎಂ ತಿರುಗುಬಲದಲ್ಲಿ 163ರಷ್ಟು ಟಾರ್ಕ್ ಎಲೆಕ್ಟ್ರಿಕ್ ಶಕ್ತಿಯನ್ನು ಉತ್ಪಾದಿಸುತ್ತದೆ ಎಂಬ ಮಾಹಿತಿಯನ್ನು ಕಂಪನಿ ತಿಳಿಸಿದೆ.

ಮುಂದಿನ ಪೀಳಿಗೆಯ ಫ್ಯುಯೆಲ್ ಸೆಲ್ ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಫ್ರಾಂಕ್‌ಫ಼ರ್ಟ್ ಮೋಟಾರು ಪ್ರದರ್ಶನದಲ್ಲಿ ಪ್ರದರ್ಶನವಾಗಿರುವ ನವೀನ ತಂತ್ರಜ್ಞಾನದ ಈ ಎಸ್‌ಯುವಿ ಕಾರು ಶೇಕಡಾ 60% ರಷ್ಟು ದಕ್ಷತೆಯ ಮಟ್ಟವನ್ನು ಹೊಂದಿದೆ ಎಂದು ಹುಂಡೈ ಹೇಳಿಕೊಂಡಿದೆ.

ಮುಂದಿನ ಪೀಳಿಗೆಯ ಫ್ಯುಯೆಲ್ ಸೆಲ್ ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹ್ಯುಂಡೈ ಸಂಸ್ಥೆಯ ಹೊಸ ವಿನ್ಯಾಸದ ಭಾಷೆಯನ್ನು ಪಡೆದುಕೊಂಡ ಎರಡನೇ ಎಸ್ಯುವಿ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಇದಾಗಿದ್ದು, ತೆಳುವಾದ ಹೆಡ್‌ಲೈಟ್‌ಗಳು, ಹಗಲಿನ ಹೊತ್ತು ಬೆಳಗುವ ಪ್ರತ್ಯೇಕ ಎಲ್ಇಡಿ ದೀಪಗಳು ಮತ್ತು ಫಾಗ್ ದೀಪಗಳನ್ನು ಪಡೆದುಕೊಂಡಿದೆ ಹಾಗು ದೊಡ್ಡದಾದ ಮಲ್ಟಿಮೀಡಿಯಾ ಪರದೆ ಪಡೆದುಕೊಂಡಿದೆ.

ಮುಂದಿನ ಪೀಳಿಗೆಯ ಫ್ಯುಯೆಲ್ ಸೆಲ್ ಹ್ಯುಂಡೈ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹ್ಯುಂಡೈನ ಐಷಾರಾಮಿ ವಾಹನದ ವಿಭಾಗ ತನ್ನ ಈ ವಿಶಿಷ್ಟ ರೀತಿಯ ವಿದ್ಯುತ್ ವಾಹನವನ್ನು ಜಾಗತಿಕ ಮಾರುಕಟ್ಟೆಗೆ 2021ರಲ್ಲಿ ಪರಿಚಯಿಸಲಿದ್ದು, ಟಕ್ಸನ್ ಫ್ಯುಯೆಲ್ ಸೆಲ್ ತಂತ್ರಜ್ಞಾನದ ಬದಲಾಗಿ ಈ ಮುಂದಿನ ಜನರೇಶನ್ ಎಫ್‌ಸಿಇವಿ ಅಳವಡಿಕೆಯಾಗಲಿದೆ.

English summary
Read in Kannada about South Korean automaker Hyundai has revealed its new electric SUV powered by a hydrogen fuel cell in Seol.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark