ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ.!!

Written By:

ದೇಶಿಯ ಮಾರುಕಟ್ಟೆಯ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಇಂಡಿಯಾವು ತನ್ನ ಜನಪ್ರಿಯ ಸಾಂಟಾ ಫೆ ಪ್ರೀಮಿಯಂ ಎಸ್‌ಯುವಿ ಮಾರಾಟವನ್ನು ನಿಲುಗಡೆಗೊಳಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ

ಮಾರಾಟದಲ್ಲಿ ಹಿನ್ನಡೆ ಮತ್ತು ಹೆಚ್ಚಿದ ಪ್ರತಿಸ್ಪರ್ಧೆ ಹಿನ್ನೆಲೆ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ತನ್ನ ಏಳು ಸೀಟುಗಳ ಸೌಲಭ್ಯವುಳ್ಳ ಸಾಂಟಾ ಫೆ ಪ್ರೀಮಿಯಂ ಎಸ್‌ಯುವಿಯನ್ನು ಹಿಂಪಡೆದಿದ್ದು, ಇದರೊಂದಿಗೆ ದೇಶದಲ್ಲಿರುವ ಹ್ಯುಂಡೈ ಎಸ್‌ಯುವಿಗಳ ಸಂಖ್ಯೆ 2ಕ್ಕೆ ಇಳಿಕೆಯಾಗಿದೆ.

ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ

ಸದ್ಯ ಮಾರುಕಟ್ಟೆಯಲ್ಲಿ ಕ್ರೆಟಾ ಮತ್ತು ಟಕ್ಸನ್ ಹೆಚ್ಚು ಬೇಡಿಕೆಯಲ್ಲಿದ್ದು, ಕಾರಣಾಂತರಗಳಿಂದ ಸಾಂಟಾ ಫೆ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ನೆಲಕಚ್ಚಿತ್ತು. ಈ ಹಿನ್ನೆಲೆ ಮಹತ್ವದ ನಿರ್ಧಾರ ಪ್ರಕಟಿಸಿದ ಹ್ಯುಂಡೈ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಸಾಂಟಾ ಫೆ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ.

Recommended Video - Watch Now!
2017 Hyundai Verna Launched In India - DriveSpark
ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ

ಸಾಂಟಾ ಫೆ ಹಿಂಪಡೆಯಲು ಮತ್ತೊಂದು ಪ್ರಮುಖ ಕಾರಣ ಎಂದರೆ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ನಾಲ್ಕು ತಿಂಗಳು (ಎಪ್ರಿಲ್-ಜುಲೈ) ಅವಧಿಯಲ್ಲಿ ಕೇವಲ 45 ಸಾಂಟಾ ಫೆ ಯುನಿಟ್‌ಗಳು ಮಾರಾಟಗೊಂಡಿದ್ದು, ಇದೇ ಕಾರಣಕ್ಕೆ ಕಾರು ಮಾರಾಟ ಹಿಂಪಡೆಯುವ ನಿರ್ಧಾರ ಪ್ರಕಟಿಸಿದೆ.

ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ

2010ನೇ ಸಾಲಿನಲ್ಲಿ ದೇಶದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಸಾಂಟಾ ಫೆ 2014ರಲ್ಲಿ ನವೀಕೃತ ಆವೃತ್ತಿ ಬಿಡುಗಡೆಯಾಗಿತ್ತು. ಇದರ ಟಾಪ್ ಎಂಡ್ ಮಾದರಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 31.07 ಲಕ್ಷ ರೂ.ಗಳಷ್ಟು ಬೆಲೆ ಹೊಂದಿತ್ತು.

ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ

ಇನ್ನು ಸಾಂಟಾ ಫೆ ಕಾರಿನಲ್ಲಿದ್ದ 2.2 ಲೀಟರ್ ಡೀಸೆಲ್ ಎಂಜಿನ್ 436-ಎನ್ಎಂ ತಿರುಗುಬಲದಲ್ಲಿ 197-ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿತ್ತು. ಹಾಗೆಯೇ ಆರು ಸ್ಪೀಡ್ ಆಟೋಮ್ಯಾಟಿಕ್ ಜೊತೆಗೆ ಆಲ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆದುಕೊಂಡಿತ್ತು.

ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ

ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಸಾಂಟಾ ಫೆ ಆವೃತ್ತಿಯು ಟೊಯೊಟಾ ಫಾರ್ಚ್ಯುನರ್, ಫೋರ್ಡ್ ಎಂಡೀವರ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗುವ ಮೂಲಕ ಎಸ್‌ಯುವಿ ಪ್ರಿಯರಿಗೆ ನೆಚ್ಚಿನ ಮಾದರಿಯಾಗಿತ್ತು. ಆದ್ರೆ ಮಾರುಕಟ್ಟೆಯಲ್ಲಿನ ಸ್ಪರ್ಧೆಗೆ ಅನುಗುಣವಾಗಿ ಸಾಂಟಾ ಫೆ ಹಿಂಪಡೆಯಲಾಗುತ್ತಿದೆ.

ಮಾರಾಟದಲ್ಲಿ ಹಿನ್ನಡೆ- ಸಾಂಟಾ ಫೆ ಮಾರಾಟಕ್ಕೆ ಬ್ರೇಕ್ ಹಾಕಿದ ಹ್ಯುಂಡೈ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2010ರಿಂದ ಸುಮಾರು ಐದು ವರ್ಷಗಳ ಕಾಲ ಎಸ್‌ಯುವಿ ವಿಭಾಗದಲ್ಲಿ ತನ್ನದೇ ಆದ ಬೇಡಿಕೆ ಹೊಂದಿದ್ದ ಸಾಂಟಾ ಫೆ ಇತ್ತೀಚೆಗೆ ಬಿಡುಗಡೆಯದ ಕೆಲವು ಎಸ್‌ಯುವಿಗಳಿಂದ ತೀವ್ರತರವಾದ ಹಿನ್ನೆಡೆ ಅನುಭವಿಸಿತ್ತು. ಇದೇ ಕಾರಣಕ್ಕೆ ಮಹತ್ವದ ನಿರ್ಧಾರ ಪ್ರಕಟಿಸಿರುವ ಹ್ಯುಂಡೈ ಸಂಸ್ಥೆಯು ಸಾಂಟಾ ಫೆ ಗುಡ್ ಬೈ ಹೇಳಿದೆ.

English summary
Read in Kannada about Hyundai Santa Fe Discontinued In India.
Story first published: Wednesday, September 20, 2017, 13:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark