ಹ್ಯುಂಡೈ ಗ್ರಾಹಕರಿಗೆ ಆಫರ್- ಬೆಂಗಳೂರಿನಲ್ಲೂ ನಡೆಯಲಿದೆ ಉಚಿತ ಕಾರು ಚೆಕ್ ಅಪ್ ಶಿಬಿರ..!

Written By:

ಗ್ರಾಹಕರಿಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಭಾರತದಲ್ಲಿ 2ನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿರುವ ಹ್ಯುಂಡೈ, ಇದೀಗ ತನ್ನ ಗ್ರಾಹಕರಿಗೆ ಅನುಕೂಲಕರವಾಗುವ ಉದ್ದೇಶದಿಂದ ದೇಶದ ಪ್ರಮುಖ ನಗರಗಳಲ್ಲಿ ಉಚಿತ ಕಾರು ಚೆಕ್ ಅಪ್ ಶಿಬಿರ ಹಮ್ಮಿಕೊಂಡಿದೆ.

ದೇಶಾದ್ಯಂತ ಮಾನ್ಸೂನ್ ಆರಂಭವಾಗಿದ್ದು, ಈ ಹಿನ್ನೆಲೆ ತನ್ನ ಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 1,265 ಉಚಿತ ಕಾರು ಚೆಕ್ ಅಪ್ ಶಿಬಿರಗಳನ್ನು ತೆರೆಯುತ್ತಿದೆ.

ಜುಲೈ 12 ಅಂದರೇ ಇಂದಿನಿಂದಲೇ ಉಚಿತ ಕಾರು ಚೆಕ್ ಶಿಬಿರ ಆರಂಭವಾಗಿದ್ದು, ಜುಲೈ 21ರ ವರೆಗೆ ಈ ಶಿಬಿರ ನಡೆಯಲಿದೆ ಎಂದು ಹ್ಯುಂಡೈ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಉಚಿತ ಕಾರು ಚೆಕ್ ಶಿಬಿರದಲ್ಲಿ ನುರಿತ ಆಟೋಮೊಬೈಲ್ ತಜ್ಞರು ಕೂಡಾ ಭಾಗಿಯಾಗಲಿದ್ದು, ಹ್ಯುಂಡೈ ಕಾರುಗಳ ಉತ್ತಮ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ನೀಡಲಿದ್ದಾರೆ.

ಇದರ ಜೊತೆ ಉಚಿತ ಶಿಬಿರದಲ್ಲಿ ಕಾರು ಚೆಕ್ ಅಪ್ ಮಾತ್ರವಲ್ಲದೇ ಹ್ಯುಂಡೈ ಉತ್ಪಾದಿತ ಬಿಡಿಭಾಗಗಳ ಅಳವಡಿಕೆ ಮತ್ತು ಲೆಬರ್ ಚಾರ್ಜ್‌ಗಳ ಮೇಲೆ ಶೇ.30ರಷ್ಟು ರಿಯಾಯ್ತಿ ಕೂಡಾ ದೊರೆಯಲಿದೆ.

ಇದಕ್ಕಾಗಿ ಬೃಹತ್ ಯೋಜನೆ ರೂಪಿಸಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ದೇಶಾದ್ಯಂತ 293 ನಗರಗಳಲ್ಲಿ 1,265 ವರ್ಕ್‌ಶಾಪ್‌ಗಳು ತೆರೆದಿದ್ದು, ಹ್ಯುಂಡೈ ಕಾರುಗಳ ಯಾವುದೇ ರೀತಿಯ ಸಮಸ್ಯೆಗಳನ್ನು ಇಲ್ಲಿ ಬಗೆಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಒಂದು ವೇಳೆ ನೀವು ಕೂಡಾ ಹ್ಯುಂಡೈ ಗ್ರಾಹಕರಾಗಿದ್ದಲ್ಲಿ ಉಚಿತ ಕಾರು ಚೆಕ್ ಶಿಬಿರದಲ್ಲಿ ಭಾಗಿಯಾಗಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಹ್ಯುಂಡೈ ಡೀಲರ್ಸ್ ಬಳಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಉಚಿತ ಶಿಬಿರದಲ್ಲಿ ಭಾಗಿಯಾಗಬಹುದಾಗಿದೆ.

English summary
Read in Kannada about Hyundai India Announces 'Free Car Care Clinic' Service Camp.
Story first published: Wednesday, July 12, 2017, 16:29 [IST]
Please Wait while comments are loading...

Latest Photos