ಇಂಡಿಯನ್ ಕಾರ್ ಆಫ್ ದಿ ಇಯರ್ ವಿನ್ನರ್ - ಹ್ಯುಂಡೈ ವರ್ನಾ

ಪ್ರತಿವರ್ಷ ನೀಡಲಾಗುವ ಭಾರತದ ಅತ್ಯಂತ ಪ್ರತಿಷ್ಠಿತ ಆಟೋಮೋಟಿವ್ ಪ್ರಶಸ್ತಿಗಳಲ್ಲಿ ಒಂದಾದ 'ಇಂಡಿಯನ್ ಕಾರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಖ್ಯಾತ ವಾಹನ ತಯಾರಕ ಸಂಸ್ಥಯದ ಹ್ಯುಂಡೈನ ವರ್ನಾ ಕಾರು ತನ್ನದಾಗಿಸಿಕೊಂಡಿದೆ.

By Girish

ಪ್ರಶಸ್ತಿ ನೀಡುವ ಸದಸ್ಯರ ಮಂಡಳಿಯು, ಈ ವರ್ಷ ಹೊಸದಾಗಿ ಬಿಡುಗಡೆಯಾದ ವಾಹನಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಪ್ರಸ್ತಿಯನ್ನು ನೀಡಿದೆ. ಸಾಕಷ್ಟು ಪರೀಕ್ಷೆಗಳನ್ನು ನೆಡೆಸಿದ ಮೇಲೆ ವಿಜೇತವಾದ ಕಾರಿಗೆ 'ಇಂಡಿಯನ್ ಕಾರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಘೋಷಿಸಿರುವುದಾಗಿ ಸದಸ್ಯರ ಮಂಡಳಿಯು ತಿಳಿಸಿದೆ.

ಇಂಡಿಯನ್ ಕಾರ್ ಆಫ್ ದಿ ಇಯರ್ ವಿನ್ನರ್ - ಹ್ಯುಂಡೈ ವರ್ನಾ

ಹೋಂಡಾ ಡಬ್ಲ್ಯೂಆರ್-ವಿ, ಜೀಪ್ ಕಂಪಾಸ್, ಮಾರುತಿ ಡಿಜೈರ್, ಮಾರುತಿ ಇಗ್ನಿಸ್, ರೆನಾಲ್ಟ್ ಕ್ಯಾಚುರ್, ಸ್ಕೋಡಾ ಕೊಡಿಯಾಕ್, ಟಾಟಾ ನೆಕ್ಸನ್ ಮತ್ತು ಫೋಕ್ಸ್‌ವ್ಯಾಗನ್ ಟಿಗ್ವಾನ್ ಕಾರುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಇಂಡಿಯನ್ ಕಾರ್ ಆಫ್ ದಿ ಇಯರ್ ವಿನ್ನರ್ - ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ ಕಾರು, 118 ಪಾಯಿಂಟ್‌ಗಳನ್ನು ಗಳಿಸಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಹಾಗು ಮಾರುತಿ ಕಂಪನಿಯ ಡಿಜೈರ್ ಕಾರು 87 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

ಇಂಡಿಯನ್ ಕಾರ್ ಆಫ್ ದಿ ಇಯರ್ ವಿನ್ನರ್ - ಹ್ಯುಂಡೈ ವರ್ನಾ

ಹೊಚ್ಚ ಹೊಸ ವರ್ನಾ ಕಾರು ನವೀಕರಿಸಿದ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿದೆ. ಮುಂಭಾಗದಲ್ಲಿ, ಹೊಸ ಹೆಡ್ ಲ್ಯಾಂಪ್‌ ಮತ್ತು ಬಂಪರ್‌ಗಳೊಂದಿಗೆ ಹೊಸ ಕ್ಯಾಸ್ಕೇಡ್ ಗ್ರಿಲ್ ಪಡೆಯುತ್ತದೆ ಹಾಗು ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ಗಳು ಹೆಡ್ ಲ್ಯಾಂಪ್‌ನಲ್ಲಿ ಸಂಯೋಜಿತವಾಗಿವೆ.

ಇಂಡಿಯನ್ ಕಾರ್ ಆಫ್ ದಿ ಇಯರ್ ವಿನ್ನರ್ - ಹ್ಯುಂಡೈ ವರ್ನಾ

ಈ ಕಾರು 16 ಇಂಚಿನ ಡೈಮಂಡ್ ಕಟ್ ಮಿಶ್ರಲೋಹದ ಚಕ್ರಗಳು ಮತ್ತು ನಯಗೊಳಿಸಿದ ಎಲ್ಇಡಿ ಟೈಲ್ ದೀಪಗಳನ್ನು ಅಳವಡಿಕೆಗೊಂಡಿದೆ. ಹ್ಯುಂಡೈ ವರ್ನಾ ಕಾರು ಮಧ್ಯಮ ಗಾತ್ರದ ಸೆಡಾನ್ ಆಗಿದ್ದು, ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್ ಕಾರುಗಳೊಂದಿಗೆ ಸ್ಪರ್ದಿಸುತ್ತಿದೆ.

ಇಂಡಿಯನ್ ಕಾರ್ ಆಫ್ ದಿ ಇಯರ್ ವಿನ್ನರ್ - ಹ್ಯುಂಡೈ ವರ್ನಾ

ಐದನೇ ಪೀಳಿಗೆಯ ಈ ವರ್ನಾ ಕಾರು ಹೊಸ ಕೆ2 ಪ್ಲ್ಯಾಟ್‌ಫಾರಂ ಆಧರಿಸಿದೆ ಹಾಗು ಒಳಭಾಗದಲ್ಲಿ, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹವಾಮಾನ ನಿಯಂತ್ರಣ, ವೇಗ ನಿಯಂತ್ರಣ, ಸ್ವಯಂಚಾಲಿತ ಹೆಡ್ ಲ್ಯಾಂಪ್‌ಗಳು, ಸನ್ರೂಫ್ ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳೊಂದಿಗೆ ಹೊಸ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆಯುತ್ತದೆ.

ಇಂಡಿಯನ್ ಕಾರ್ ಆಫ್ ದಿ ಇಯರ್ ವಿನ್ನರ್ - ಹ್ಯುಂಡೈ ವರ್ನಾ

ವಾಹನದ ಎಲ್ಲಾ ರೂಪಾಂತರಗಳೂ ಸಹ ಡ್ಯುಯಲ್ ಏರ್‌ಬ್ಯಾಗ್ ಮತ್ತು ಎಬಿಎಸ್ ಆಯ್ಕೆಯನ್ನು ಪಡೆಯುತ್ತವೆ. ಯಾಂತ್ರಿಕವಾಗಿ, ಈ ಕಾರು 1.6-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೋಡಬಹುದಾಗಿದೆ ಹಾಗು ಕ್ರಮವಾಗಿ ಈ ಎಂಜಿನ್ ಆಯ್ಕೆಗಳು ರೂ.8 ಲಕ್ಷ ಮತ್ತು ರೂ.12.88 ಲಕ್ಷ ಪ್ರಾರಂಭಿಕ ಬೆಲೆ ಪಡೆದುಕೊಂಡಿವೆ.

Most Read Articles

Kannada
English summary
the all-new Hyundai Verna has been chosen as the Indian Car of the Year.
Story first published: Thursday, December 14, 2017, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X