ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ ಕಾರು

ಹ್ಯುಂಡೈ ಇಂಡಿಯಾ ಸಂಸ್ಥೆಯು ಹೊಸ ಪೀಳಿಗೆಯ ವೆರ್ನಾ ಕಾರನ್ನು ಭಾರತದಲ್ಲಿ ಹಬ್ಬದ ಋತುವಿನ ಮುಂಚೆಯೇ ಪ್ರಾರಂಭಿಸಿತ್ತು. ಬಿಡುಗಡೆಗೊಂಡ ಎರಡು ತಿಂಗಳೊಳಗಾಗಿ ಈ ಸೆಡಾನ್ ಕಾರು ಅತ್ಯುತ್ತಮ ಆರಂಭವನ್ನು ಹೊಂದಿದೆ.

By Girish

ಹ್ಯುಂಡೈ ಇಂಡಿಯಾ ಸಂಸ್ಥೆಯು ಹೊಸ ಪೀಳಿಗೆಯ ವೆರ್ನಾ ಕಾರನ್ನು ಭಾರತದಲ್ಲಿ ಹಬ್ಬದ ಋತುವಿನ ಮುಂಚೆಯೇ ಪ್ರಾರಂಭಿಸಿತ್ತು. ಬಿಡುಗಡೆಗೊಂಡ ಎರಡು ತಿಂಗಳೊಳಗಾಗಿ ಈ ಸೆಡಾನ್ ಕಾರು ಅತ್ಯುತ್ತಮ ಆರಂಭವನ್ನು ಹೊಂದಿದೆ.

ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ಇಟಿ ಆಟೋ ಪ್ರಕಾರ, ಪ್ರಸಿದ್ಧ ಕೊರಿಯನ್ ಕಾರು ತಯಾರಕ ಕಂಪನಿಯು ಅಕ್ಟೋಬರ್ 2017ರಲ್ಲಿ ಪ್ರಯಾಣಿಕ ವಾಹನ ವಿಭಾಗದಲ್ಲಿ 5,000 ಹೊಸ ವೆರ್ನಾ ಕಾರುಗಳನ್ನು ಮಾರಾಟ ಮಾಡಿದೆ ಎಂದು ತಿಳಿಸಿದೆ. ವೆರ್ನ ಕಾರಿನ ಸಮೀಪದ ಪ್ರತಿಸ್ಪರ್ಧಿಗಳಾದ ಹೊಂಡಾ ಸಿಟಿ ಮತ್ತು ಮಾರುತಿ ಸಿಯಾಜ್ ಕ್ರಮವಾಗಿ 4,366 ಮತ್ತು 4,107 ಕಾರುಗಳನ್ನು ಮಾರಾಟ ಮಾರಾಟವಾಗಿವೆ.

ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ಹೊಂಡಾ ಸಿಟಿ ಮತ್ತು ಮಾರುತಿ ಸಿಯಾಜ್ ಕಾರುಗಳಿಗಿಂತ ಹ್ಯುಂಡೈ ವರ್ನಾ ಕಾರು ಹೆಚ್ಚು ಜನರನ್ನು ತಲುಪಿರುವುದಕ್ಕೆ ಕಾರಣ ಏನು ? ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಖ್ಯಾತಿಯನ್ನು ಈ ಸೆಡಾನ್ ಕಾರು ಏಕೆ ಗಳಿಸಿಕೊಂಡಿದೆ ? ತಿಳಿದುಕೊಳ್ಳೋಣ ಬನ್ನಿ.

Recommended Video

Mahindra KUV100 NXT Launched In India - DriveSpark
ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ಹೊಸ ವೆರ್ನಾ 1.6-ಲೀಟರ್ ನಾಲ್ಕು ಸಿಲಿಂಡರ್ ಇಂಜಿನ್ ಪೆಟ್ರೋಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಹೋಂಡಾ ಸಿಟಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ ಆದರೆ 1.5-ಲೀಟರ್ ಘಟಕಗಳು ಶಕ್ತಿಯನ್ನು ಹೊಂದಿದ್ದು, ಮಾರುತಿ ಸಿಯಾಜ್ 1.4 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ.

ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್ ಪೆಟ್ರೋಲ್ ಮಾದರಿಗಾಗಿ ಮಾತ್ರ ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಆದರೆ, ಹ್ಯುಂಡೈ ವರ್ನಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳೆರಡರಲ್ಲೂ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ಎಲ್ಲಾ ಮೂರು ಸೆಡಾನ್ ಕಾರುಗಳೂ ಸಹ ಸ್ಟ್ಯಾಂಡರ್ಡ್ ವಿಶೇಷತೆಯಾಗಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳನ್ನು ಪಡೆದುಕೊಂಡಿವೆ. ಆದರೆ, ಹೊಸ ವರ್ನಾ ಮತ್ತು ಸಿಟಿ ಕಾರುಗಳು ಮಾತ್ರ ಆರು ಏರ್ ಬ್ಯಾಗ್‌ಗಳನ್ನು ಪಡೆದುಕೊಳ್ಳಲಿವೆ.

ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ರಿವರ್ಸ್ ಪಾರ್ಕಿಂಗ್ ಸಹಾಯ, ಹ್ಯುಂಡೈ ವರ್ನಾ ಮತ್ತು ಮಾರುತಿ ಸಿಯಾಜ್ ಕಾರುಗಳು ರಿವರ್ಸ್ ಪಾರ್ಕಿಂಗ್ ಸಂವೇದಕ ಮತ್ತು ಕ್ಯಾಮರಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಆದಾಗ್ಯೂ, ಹೊಂಡಾ ಸಿಟಿ ಕಾರು ಕೇವಲ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೌಲಭ್ಯದಲ್ಲಿ ಮಾತ್ರ ಲಭ್ಯವಿದೆ.

ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ಹೊಸದಾಗಿ ಬಿಡುಗಡೆಯಾದ ವರ್ನಾ ಕಾರು ಹ್ಯಾಂಡ್ಸ್ ಫ್ರೀ ಬೂಟ್ ಲಿಡ್, ಪ್ರೊಜೆಕ್ಟರ್ ಫಾಗ್ ದೀಪಗಳು, ಕೋಲ್ಡ್ ಸೀಟ್‌ಗಳು ಮತ್ತು ಆಟೋ ಎಸಿ ಜೊತೆ ಇಕೊ ಹೊದಿಕೆಯಂತಹ ಹಲವು ಮೊದಲ-ಇನ್-ಸೆಗ್ಮೆಂಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಸಿಯಾಜ್ ಮತ್ತು ಸಿಟಿ ಕಾರುಗಳನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಪಡೆದ ವರ್ನಾ

ಈ ಮೇಲಿನ ಎಲ್ಲಾ ವೈಶಿಷ್ಟ್ಯಗಳನ್ನು ಪಡೆದ್ದುಕೊಂಡಿರುವ ಹ್ಯುಂಡೈ ಹೊಚ್ಚ ಹೊಸ ವರ್ನಾ ಕಾರು ಹೆಚ್ಚು ಜನರನ್ನು ಆಕರ್ಷಿಸಿದ್ದು, ಅಲ್ಲದೆ, ಹೊಸ ವರ್ನಾ ಕಾರಿನ ಬೆಲೆ ಹತ್ತಿರದ ಪ್ರತಿಸ್ಪರ್ಧಿಯಾದ ಹೋಂಡಾ ಸಿಟಿಯ ಅಗ್ರ ರೂಪಾಂತರಕ್ಕೆ ಹೋಲಿಸಿದರೆ ಸುಮಾರು 1 ಲಕ್ಷ ರುಪಾಯಿ ಕಡಿಮೆ ಇದೆ. ಹೊಸ ವರ್ನಾ ಕಾರು ಭಾರತದ ಮಾರುಕಟ್ಟೆಯ ಸೆಡಾನ್ ವಿಭಾಗದಲ್ಲಿ ನಾಯಕನಾಗಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ.

Most Read Articles

Kannada
English summary
The Korean carmaker revealed that they sold over 5,000 units of the new Verna in October 2017 in the passenger vehicle segment. The Verna's closest rivals, the Honda City and the Maruti Ciaz managed to sell 4,366 and 4,107 units respectively.
Story first published: Saturday, November 4, 2017, 14:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X