ಸೆಪ್ಟೆಂಬರ್‌ನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿ ಬಿಡುಗಡೆ

Written By:

ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಸಂಸ್ಥೆಯು ಭಾರತದಲ್ಲಿ ತನ್ನ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿಯನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನೆಡೆಸಿದೆ.

To Follow DriveSpark On Facebook, Click The Like Button
ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿ ಬಿಡುಗಡೆ

ಟ್ಯಾಕ್ಸಿ ವಿಭಾಗಕ್ಕೆ 'ಪ್ರಧಾನ' ನಾಮಕರಣದ ಅಡಿಯಲ್ಲಿ ಹ್ಯುಂಡೈ ಕಂಪನಿಯು ಸಿಎನ್‌ಜಿ ಕಿಟ್ ಸ್ವತಃ ಅಳವಡಿಸಿ ಈ ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಿದೆ ಮತ್ತು ಈ ಕಾರು ಪೆಟ್ರೋಲ್ ರೂಪಾಂತರದೊಂದಿಗೆ ಮಾತ್ರ ಲಭ್ಯವಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿ ಬಿಡುಗಡೆ

ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಬಿಡುಗಡೆಗೊಂಡು ಹೆಚ್ಚು ಪ್ರಸಿದ್ದಿ ಪಡೆದಿರುವ ಈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಕಾರಿನ ಸಿಎನ್‌ಜಿ ಆವೃತಿ 1.2 ಲೀಟರ್ ಡ್ಯುಯಲ್ ಕಪ್ಪ ವಿಟಿವಿಟಿ ಇಂಜಿನ್ ಪಡೆದುಕೊಂಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿ ಬಿಡುಗಡೆ

ಪೆಟ್ರೋಲ್ ಮತ್ತು ಗ್ಯಾಸ್ ಇಂಧನಗಳನ್ನು ಬಳಸಿ ಚಲಿಸುವ ಈ ಹೊಸ ಹ್ಯುಂಡೈ ಎಕ್ಸ್‌ಸೆಂಟ್ ಕಾರಿನ ಎಂಜಿನ್ ಸಾಕಷ್ಟು ಹೊಸ ತಂತ್ರಜ್ಞಾನ ಪಡೆದಿದ್ದು, 114 ಎನ್ಎಂ ತಿರುಗುಬಲದಲ್ಲಿ 82ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿ ಬಿಡುಗಡೆ

ಎಕ್ಸ್‌ಸೆಂಟ್ ಪ್ರೈಮ್ ಸಿಎನ್‌ಜಿ ರೂಪಾಂತರದ ಬಿಡುಗಡೆಯೊಂದಿಗೆ ಹ್ಯುಂಡೈ ಸಂಸ್ಥೆಯು ಟ್ಯಾಕ್ಸಿ ವಿಭಾಗದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಸ್ವಿಫ್ಟ್ ಡಿಜೈರ್ ಮತ್ತು ಟೊಯೋಟಾ ಇಟಿಯೋಸ್ ಕಾರುಗಳಿಗೆ ಸ್ಪರ್ಧೆ ನೀಡಲು ಉತ್ಸುಕವಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿ ಬಿಡುಗಡೆ

ಎಕ್ಸ್‌ಸೆಂಟ್ ಪ್ರೈಮ್ ಸಿಎನ್‌ಜಿ ರೂಪಾಂತರದ ಬಿಡುಗಡೆಯ ಸುದ್ದಿಯನ್ನು ಹ್ಯುಂಡೈ ಮೋಟಾರ್ ಇಂಡಿಯಾದ ಎಂಡಿ ಮತ್ತು ಸಿಇಒ ಆಗಿರುವಂತಹ ವೈ.ಕೆ ಕೂ ಅವರು ದೃಢಪಡಿಸಿದ್ದು, "ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ನಮ್ಮ ಸಂಸ್ಥೆಯ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಕಾರನ್ನು ಬಿಡುಗಡೆಗೊಳಿಸಲು ನಾವು ಹೆಚ್ಚು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಸಿಎನ್‌ಜಿ ಆವೃತಿ ಬಿಡುಗಡೆ

ಪ್ರತಿ ತಿಂಗಳು ಹೆಚ್ಚು ಕಡಿಮೆ 2000 ರಿಂದ 3000 ಎಕ್ಸ್‌ಸೆಂಟ್ ಕಾರುಗಳನ್ನು ಹ್ಯುಂಡೈ ಮೋಟಾರ್ ಇಂಡಿಯಾ ಮಾರಾಟ ಮಾಡುತ್ತಿದ್ದು, ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಈ ಹೊಸ ಕಾರು ಮಹತ್ವದ ಕೊಡುಗೆ ನೀಡುವಲ್ಲಿ ಸಫಲವಾಗಲಿದೆ ಎಂಬುದು ಕಂಪನಿಯ ನಂಬಿಕೆಯಾಗಿದೆ.

English summary
Coming next month (September), Hyundai will launch the CNG variant of the Xcent compact sedan in India. The CNG unit will be factory fit and will be available with the petrol variant only.
Story first published: Monday, August 28, 2017, 16:13 [IST]
Please Wait while comments are loading...

Latest Photos