ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

Written By:

ವಾಣಿಜ್ಯ ಸೆಡಾನ್ ವಿಭಾಗದಲ್ಲಿ ಮಾರುಕಟ್ಟೆಯ ಪಾಲನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಸಿಎನ್‌ಜಿ ಪ್ರೈಮ್ ಎಕ್ಸ್‌ಸೆಂಟ್ ಕಾರನ್ನು ಹ್ಯುಂಡೈ ಬಿಡುಗಡೆಗೊಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

ದೇಶದ ಎರಡನೆಯ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಪ್ರಖ್ಯಾತ ಮಾದರಿಯಾದ ಎಕ್ಸ್‌ಸೆಂಟ್ ಕಾರಿನಲ್ಲಿ ಸಿಎನ್‌ಜಿ ಅಳವಡಿಸಿ ಬಿಡುಗಡೆಗೊಳಿಸಿದೆ. ಕಾರ್ಖಾನೆಯಲ್ಲಿ ಹೊಂದಿಸಲ್ಪಟ್ಟಿರುವ ಸಿಎನ್‌ಜಿ ಪ್ರೈಮ್ ಹ್ಯುಂಡೈ ಎಕ್ಸ್‌ಸೆಂಟ್ ಕಾರು ಟಿ ಮತ್ತು ಟಿ + ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.

ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

ವಾಣಿಜ್ಯ ವಿಭಾಗ ಸೆಡಾನ್ ಕಾರುಗಳಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಸೆಡಾನ್ ಕಾರಿನಲ್ಲಿ ಸಿಎನ್‌ಜಿ ಅಳವಡಿಸುವ ಮೂಲಕ ಹೊಸ ಪ್ರಯತ್ನಕ್ಕೆ ಹ್ಯುಂಡೈ ಸಂಸ್ಥೆಯು ಕೈಹಾಕಿದೆ.

ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಎಕ್ಸ್‌ಸೆಂಟ್ ಸಿಎನ್‌ಜಿ ಪ್ರೈಮ್ ಕಾರು 100,000 ಕಿ.ಮೀ ಅಥವಾ 3 ವರ್ಷಗಳ ಅತ್ಯುತ್ತಮ ವಾರೆಂಟಿಯನ್ನು ಪಡೆದು ಅನಾವರಣಗೊಂಡಿದ್ದು, ವಿಶೇಷವಾಗಿ ಟ್ಯೂನ್ ಮಾಡಿರುವ ಸಿಎನ್‌ಜಿ ಎಂಜಿನ್ ಈ ಕಾರು ಹೊಂದಿದೆ.

ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

ಕಾರ್ಖಾನೆಯಲ್ಲಿ ಹೊಂದಿಸಲ್ಪಟ್ಟಿರುವ ಸಿಎನ್‌ಜಿ ಎಂಜಿನ್ ಪಡೆದಿರುವ ಈ ಕಾರಿನಲ್ಲಿ ಹೆಚ್ಚುವರಿ ವೆಚ್ಚವಿಲ್ಲದೇ ಎಸ್ಎಲ್ಎಫ್-ಸ್ಪೀಡ್ ಲಿಮಿಟಿಂಗ್ ಫಂಕ್ಷನ್ ಆಯ್ಕೆಯನ್ನು ನೀಡಲಾಗಿದೆ.

ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

ಇದಲ್ಲದೆ, ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್ ಕಾರಿನ ನೋಂದಣಿ ಪ್ರಕ್ರಿಯೆಯನ್ನು ಮತ್ತು ಹಣಕಾಸು ಸೌಲಭ್ಯವನ್ನು ಕಡಿಮೆಗೊಳಿಸುವ ಮತ್ತು ಆಯ್ದ ಪ್ರದೇಶಗಳಲ್ಲಿ ನೋಂದಣಿ ತೆರಿಗೆ ಪ್ರಯೋಜನವನ್ನು ನೀಡುವ ಕೆಲಸವನ್ನು ಕಂಪನಿ ಮಾಡಲಿದೆ.

ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

ಅತಿ ಕಡಿಮೆ ವೆಚ್ಚದಲ್ಲಿ ವಾಣಿಜ್ಯ ವಿಭಾಗದ ವಾಹನವನ್ನು ಚಾಲನೆ ಮಾಡಲು ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಮಾಲೀಕತ್ವ ಪ್ರಕ್ರಿಯೆಯನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಂಡ ಪ್ರಯೋಜನವಾಗಿ ಈ ಕಾರು ಅನಾವರಣಗೊಂಡಿದೆ.

ಫ್ಯಾಕ್ಟರಿ ಅಳವಡಿಕೆಯ ಸಿಎನ್‌ಜಿ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದ ಹ್ಯುಂಡೈ

ಈ ಹೊಸ ಹ್ಯುಂಡೈ ಎಕ್ಸ್‌ಸೆಂಟ್ ಸಿಎನ್‌ಜಿ ಕಾರು ಪರ್ಯಾಯವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಿದ್ದು, 1.2 ಲೀಟರ್ ಪೆಟ್ರೋಲ್ ಇಂಜಿನ್ 114 ಎನ್ಎಂ ತಿರುಗುಬಲದಲ್ಲಿ 82ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ ಮತ್ತು 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

English summary
Hyundai Xcent Prime CNG launched in India. The country's second largest car maker introduced the factory-fitted CNG in Hyundai Xcent Prime making it the first among commercial segment sedans.
Story first published: Monday, September 11, 2017, 17:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark