ಭಾರತಕ್ಕೆ ಬಂದೆ ಬಿಡ್ತು ಮೊದಲ ಲಂಬೋರ್ಗಿನಿ ಹ್ಯುರಕನ್ ಪರ್ಫಾರ್ಮಂಟ್ ಸೂಪರ್ ಕಾರು !!
ಇತ್ತೀಚಿಗೆ ಜಿನಿವಾ ಮೋಟಾರ್ ಪ್ರದರ್ಶನದಲ್ಲಿ ಅನಾವರಣಗೊಂಡಿದ್ದ ಹ್ಯುರಕನ್ ರೂಪಾಂತರದ ಅಪ್ಡೇಟೆಡ್ ಮಾದರಿಯಾದ ಲಂಬೋರ್ಗಿನಿ ಹ್ಯುರಕನ್ ಪರ್ಫಾರ್ಮಂಟ್ ಸೂಪರ್ ಕಾರು ಈಗ ಭಾರತಕ್ಕೆ ಕಾಲಿರಿಸಿದೆ.
ಇತ್ತೀಚಿಗೆ ಜಿನಿವಾ ಮೋಟಾರ್ ಪ್ರದರ್ಶನದಲ್ಲಿ ಅನಾವರಣಗೊಂಡಿದ್ದ ಹ್ಯುರಕನ್ ರೂಪಾಂತರದ ಅಪ್ಡೇಟೆಡ್ ಮಾದರಿಯಾದ ಲಂಬೋರ್ಗಿನಿ ಹ್ಯುರಕನ್ ಪರ್ಫಾರ್ಮಂಟ್ ಸೂಪರ್ ಕಾರು ಈಗ ಭಾರತಕ್ಕೆ ಕಾಲಿರಿಸಿದೆ.

ಜರ್ಮನಿಯಲ್ಲಿನ ನರ್ಬರಿಂಗ್ ಟ್ರ್ಯಾಕ್‌ನಲ್ಲಿ ಹೊಸ ದಾಖಲೆಯನ್ನು ಮಾಡಿದಾಗಿನಿಂದಲೂ ಹೆಚ್ಚು ಸುದ್ದಿಯಲ್ಲಿದ್ದ ಲಂಬೋರ್ಗಿನಿ ಹ್ಯುರಕನ್ ಪರ್ಫಾರ್ಮಂಟ್ ಸೂಪರ್ ಐಷಾರಾಮಿ ಕಾರು ಭಾರತಕ್ಕೆ ಪ್ರವೇಶ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಭಾರತದ ರಸ್ತೆಗಳ ಮೇಲೆ ಕಾಣಸಿಗಲಿರುವುದು ಖಚಿತವಾಗಿದೆ.

ಲಂಬೋರ್ಗಿನಿ ಹ್ಯುರಕನ್ ಪರ್ಫಾರ್ಮಂಟ್ ಸೂಪರ್ ಕಾರು ಬಲಿಷ್ಠ 5.2-ಲೀಟರ್ ವಿ10 ಎಂಜಿನ್ ಹೊಂದಿದ್ದು, 600 ಎನ್ಎಂ ತಿರುಗುಬಲದಲ್ಲಿ 640 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.

ಈ ಸೂಪರ್ ಕಾರು ಕೇವಲ 2.9 ಸೆಕೆಂಡುಗಳಲ್ಲಿ 100 ವೇಗ ತಲುಪುವಷ್ಟು ಬಲಿಷ್ಠವಾಗಿದೆ ಹಾಗು ಕೇವಲ 8.9 ಸೆಕೆಂಡುಗಳಲ್ಲಿ 200 ಕಿ.ಮೀ ವೇಗ ತಲುಪಲಿದೆ ಮತ್ತು 325 ಕಿ.ಮೀ ಗರಿಷ್ಠ ವೇಗ ಮಿತಿ ಹೊಂದಿದೆ.

ಎಲೆಕ್ಟ್ರೋಮೆಕಾನಿಕಲ್ ಪವರ್ ಸ್ಟೀರಿಂಗ್ ಮತ್ತು ಇಎಸ್‌ಸಿ, ಸುಧಾರಿತ ಏರ್ ಇನ್ಟೇಕ್ಸ್, ಮರುವಿನ್ಯಾಸಗೊಂಡ ಸಸ್ಪೆನ್‌ಷನ್, ಹೊಸ ಟೈಟಾನಿಯಂ ವಾಲ್ವುಗಳು ಕಾರಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ.

ಕಾರಿನ ಒಳಾಂಗಣದಲ್ಲಿ ಹೊಸ ಡಿಜಿಟಲ್ ಕಾಕ್ಪಿಟ್, ಸ್ಟ್ರಾದ, ಸ್ಪೋರ್ಟ್ ಮತ್ತು ಕೋರ್ಸ ಹೆಸರಿನ ಆಯ್ದ ಡ್ರೈವಿಂಗ್ ವಿಧಾನಗಳು, ಆಪಲ್ ಕಾರ್‌ಪ್ಲೇ ಆಯ್ಕೆ ಪಡೆದ ಸ್ಮಾರ್ಟ್‌ಫೋನ್ ಸಂಪರ್ಕ ಆಯ್ಕೆಯನ್ನು ಈ ಕಾರು ಒಳಗೊಂಡಿದೆ. ಕೊಂಡುಕೊಳ್ಳುವವರ ಆದ್ಯತೆಗಳ ಪ್ರಕಾರ ಪ್ರತಿ ಲಂಬೋರ್ಗಿನಿ ಹ್ಯುರಕನ್ ಪರ್ಫಾರ್ಮಂಟ್ ಕಾರನ್ನೂ ಸಹ ಕಸ್ಟಮೈಸ್ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಲಂಬೋರ್ಗಿನಿ ಹ್ಯುರಕನ್ ಪರ್ಫಾರ್ಮಂಟ್ ಸೂಪರ್ ಕಾರಿನ ಬೆಲೆಯೂ ಕ್ರಮವಾಗಿ, $ 274,390, € 195,040, £ 173,271 ಮತ್ತು ¥ 31,638,800 ದರದಲ್ಲಿ ಲಭ್ಯವಿದೆ. ಇನ್ನು, ಭಾರತದಲ್ಲಿ ಈ ಕಾರಿನ ಬೆಲೆ ರೂ 5 ಕೋಟಿ ಇರಲಿದೆ ಎಂದು ವರದಿಯಾಗಿದೆ.


Click it and Unblock the Notifications








