ದೇಶದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೃಹತ್ ಯೋಜನೆ ರೂಪಿಸಿರುವ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಸಂಸ್ಥೆಯು ದೇಶದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆಗೊಳಿಸಿದೆ.

By Praveen

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೃಹತ್ ಯೋಜನೆ ರೂಪಿಸಿರುವ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಸಂಸ್ಥೆಯು ದೇಶದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆಗೊಳಿಸಿದೆ.

ದೇಶದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆ

ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ವಾಹನಗಳು ತಮ್ಮ ಮಿತಿಗಳನ್ನು ತಲುಪುವ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು 'ಭವಿಷ್ಯದ ಸಾರಿಗೆ' ಎಂದು ಹೇಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾದ ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಪ್ರಕ್ರಿಯೆ ಕೂಡಾ ಜೋರಾಗಿದೆ.

ದೇಶದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆ

ಸದ್ಯ ನಾಗ್ಪುರ್‌ನಲ್ಲಿ ಬೃಹತ್ ಗಾತ್ರದ ಚಾರ್ಜಿಂಗ್ ಸ್ಟೆಷನ್ ಒಂದನ್ನು ಆರಂಭಿಸಿರುವ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಸಂಸ್ಥೆಯು ಓಲಾ ಪಾಲುದಾರಿಕೆಯೊಂದಿಗೆ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.

ದೇಶದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆ

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚಿನ ಜನಕ್ಕೆ ಪ್ರೋತ್ಸಾಹ ತುಂಬುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಹೊಸ ನಿಯಮಾವಳಿಗಳನ್ನು ರೂಪಿಸುತ್ತಿದ್ದೇವೆ ಎಂದು ಮಾಹಿತಿ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಹಿರಿಯ ಅಧಿಕಾರಿಗಳು, ಸದ್ಯದಲ್ಲೇ ಮತ್ತಷ್ಟು ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುವ ಸುಳಿವು ನೀಡಿದ್ದಾರೆ.

ದೇಶದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆ

ಇನ್ನು 2030ರ ಹೊತ್ತಿಗೆ ಭಾರತೀಯ ರಸ್ತೆಗಳು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಂದ ಕೂಡಿರಲಿದ್ದು, ಭವಿಷ್ಯದ ಯೋಜನೆಗಾಗಿ ಇಂಡಿಯನ್ ಆಯಿಲ್ ಕಾರ್ಪೋರೆಷನ್ ಸಂಸ್ಥೆಯು ಕೈಗೊಂಡಿರುವ ಕ್ರಮ ಪ್ರಮುಖವಾಗಿದೆ ಎನ್ನಬಹುದು.

ದೇಶದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆ

ಆಯ್ದ ಪ್ರದೇಶಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದಾದ ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಸದ್ಯದಲ್ಲೇ ಪ್ರಾರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಕೂಡಾ ಮಾಡಲಾಗಿದೆ.

ದೇಶದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೆಷನ್ ಲೋಕಾರ್ಪಣೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪರಿಸರಕ್ಕೆ ಪೂರಕವಾಗಿ ಎಲ್ಲಾ ಕಾರು ಉತ್ಪಾದಕರು ಎಲೆಕ್ಟ್ರಿಕ್ ಕಾರು ಮಾದರಿಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಆಯಿಲ್ ಕಾರ್ಪೋರೆಷನ್ ಸಂಸ್ಥೆಯು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡುವ ಯೋಜನೆಯು ಗಮನಾರ್ಹವಾಗಿದೆ.

Trending on Kannada DriveSpark:

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

Article Published On: Tuesday, November 21, 2017, 11:29 [IST]
English summary
Read in Kannada about India's First Electric Vehicle Charging Station Launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+