ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

Posted By: Staff
Recommended Video - Watch Now!
Bangalore Traffic Police Rides With Illegal Number Plate - DriveSpark

ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವವರು ನಾನಾ ತಂತ್ರಗಳನ್ನು ಉಪಯೋಗಿಸಿ ನಿಮ್ಮನ್ನು ಮೋಸಗೊಳಿಸುವುದು ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ. ಮೋಸಗೊಳಗಾದ ಯುವಕ ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸದ್ಯ ವೈರಲ್ ಆಗಿದೆ.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಹೌದು, ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಸರಿ ಸುಮಾರು 50 ಲಕ್ಷ ವಾಹನಗಳಿವೆ. ಪ್ರತಿಯೊಂದು ವಾಹನವು ಸಹ ಇಂಧನದ ಸಹಾಯವನ್ನು ಬೇಡುತ್ತದೆ. ಈ ವಾಹನಗಳಿಗೆ ಇಂಧನ ತುಂಬಿಸಲು ಪೆಟ್ರೋಲ್ ಬಂಕ್ ಆಶ್ರಯ ಅತ್ಯವಶ್ಯಕ.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಆದ್ರೆ, ಪೆಟ್ರೋಲ್ ಬಂಕ್‌ನಲ್ಲಿ ನೆಡೆಯುತ್ತಿರುವ ಮೋಸ ಯಾರ ಕಣ್ಣಿಗೂ ಬೀಳುತ್ತಿಲ್ಲವೇ ? ಎಂಬ ಅನುಮಾನ ನೆನ್ನೆ, ಮೊನ್ನೆಯದ್ದಲ್ಲ !! ಇಂಧನ ತುಂಬಿಸುವ ಸಮಯದಲ್ಲಿ ಮೀಟರ್ ತಿರುಗುತ್ತಿದ್ದರೂ ಸಹ ಸರಿಯಾಗಿ ಇಂಧನ ಬೀಳುತ್ತಿದೆಯೋ ಇಲ್ಲವೋ ಎಂಬ ಅನುಮಾನ ಮೂಡದೇ ಇರಲಾರದು.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ನೂರಾರು ಬಾರಿ ತನಿಖೆ ನಡೆಸಿದರೂ ಪ್ರಯೋಜನವಿಲ್ಲ ಎನ್ನುವಂತಾಗಿದೆ. ಕಣ್ಣಿಗೆ ಕಾಣಿಸುವ ಮೀಟರ್ ತೋರಿಸುವ ಪ್ರಮಾಣ ಮತ್ತು ವಾಹನದೊಳಗೆ ಬೀಳುವ ಇಂಧನದ ಪ್ರಮಾಣದಲ್ಲಿ ಬಹಳ ವ್ಯತ್ಯಾಸವಿರುವುದು ಬೆಚ್ಚಿ ಬೀಳಿಸುವ ಸಂಗತಿಯಾಗಿದೆ.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಈ ವಿಚಾರವನ್ನು ಪುಷ್ಟಿಕರಿಸುವ ಸಂಗತಿಯೊಂದು ಹೈದ್ರಾಬಾದ್‌ನಲ್ಲಿ ನೆಡೆದಿದ್ದು, ಹೈದ್ರಾಬಾದ್‌ನ ಡೇವಿಡ್ ಕುಮಾರ್ ಎಂಬುವವರು ಈ ರೀತಿಯ ಮೋಸವೊಂದನ್ನು ಬಹಿರಂಗ ಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಎಲ್ಲಾ ಕಡೆ ವೈರಲ್ ಆಗಿದೆ.

Trending On DriveSpark Kannada:

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಎಂಟು ಜನರ ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಈ ಪೋಸ್ಟ್ 3500 ಲೈಕ್‌ ಮತ್ತು 8,800 ಷೇರ್‌ಗಳೊಂದಿಗೆ ಟಾಪ್ ಟ್ರೆಂಡ್ ನಲ್ಲಿದ್ದು, ಪೆಟ್ರೋಲ್ ಮತ್ತು ಡೀಸಲ್ ಬಂಕ್‌ಗಳಲ್ಲಿ ಪ್ರತಿದಿನ ನೆಡೆಯುತ್ತಿರುವ ಹಗಲು ದರೋಡೆಗೆ ಹಿಡಿದ ಕೈಗನ್ನಡಿಯಾಗಿದೆ.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಘಟಕ ವಿವರ :

ಕಳೆದ ನವಂಬರ್ 7ರಂದು ಬೆಳಿಗ್ಗೆ ಡೇವಿಡ್ ಕುಮಾರ್ ಅವರು 'ಯೂಸೂಫ್ ಗೂಡ'ದಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ತನ್ನ ದ್ವಿಚಕ್ರ ವಾಹನದ ಪೆಟ್ರೋಲ್ ತುಂಬಿಸಲು ಹೋಗಿದ್ದು, 'ಫುಲ್ ಟ್ಯಾಂಕ್' ಮಾಡಲು ಹೇಳಿದ್ದಾರೆ.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ನಮಗೆಲ್ಲರಿಗೂ ತಿಳಿದಿರುವಂತೆ ಹೊಂಡಾ ಯೂನಿಕಾರ್ನ್ 2013 ಮಾಡೆಲ್ ಪೆಟ್ರೋಲ್ ಟ್ಯಾಂಕ್ ಕೆಪಾಸಿಟಿ ಕೇವಲ 13 ಲೀಟರ್ ಮಾತ್ರ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಬಂಕ್ ಸಿಬ್ಬಂದಿ ವಾಹನಕ್ಕೆ ತುಂಬಿದ ಪೆಟ್ರೋಲ್ ಪ್ರಮಾಣ ಬರೋಬ್ಬರಿ 16.95 ಲೀಟರ್ !!

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಆಶ್ಚರ್ಯ ಎನ್ನಿಸಿದರೂ ಇದು ಸತ್ಯ ಸಂಗತಿಯಾಗಿದೆ. ಮೀಟರ್ 16.95 ಲೀಟರ್ ತೋರಿಸುತ್ತಿರುವುದನ್ನು ಕಂಡು ಆಘಾತಗೊಂಡ ಡೇವಿಡ್ ತಕ್ಷಣ ತಮ್ಮ ಮೊಬೈಲ್ ತೆಗೆದು ಮೀಟರ್ ರೀಡಿಂಗ್ ಮತ್ತು ರಸೀತಿಯನ್ನು ಪಡೆದುಕೊಂಡು ಫೋಟೊ ಸಮೇತ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಪ್ರತೀ ಲೀಟರ್‌ಗೆ ಕೇವಲ 800 ಮಿ.ಲೀ ಮಾತ್ರವೇ ತುಂಬುತ್ತಿದ್ದು, ಉಳಿದ 200 ಮಿ.ಲೀ ರಷ್ಟು ಇಂದನವನ್ನು ಕದಿಯುತ್ತಿತ್ತು ಎನ್ನಲಾಗಿದೆ. ಒಟ್ಟಾರೆ ಮೊತ್ತದಲ್ಲಿ ತನಗೆ ಮೋಸ ಮಾಡಿದ 250 ರೂಪಾಯಿಗಳನ್ನು ಹಿಂದಿರುಗಿಸುವ ಅಗತ್ಯವಿಲ್ಲವೆಂದೂ, ಬದಲಿಗೆ ಇನ್ನು ಮುಂದೆ ಇಂತಹ ಮೋಸ ನಡೆಯದಂತೆ ಕ್ರಮ ಜರುಗಿಸಬೇಕೆಂದು ಡೇವಿಡ್ ಕುಮಾರ್ ಅವರು ಬೇಡಿಕೆ ಇಟ್ಟಿದ್ದಾರೆ.

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಹಾಗು, ಮುಂಬರುವ ದಿನಗಳಲ್ಲಿ ಎಲ್ಲರೂ ಸಹ ಪೆಟ್ರೋಲ್ ಬಂಕ್‌ಗೆ ಹೋಗುವಾಗ ಬಾಟಲ್ ತೆಗೆದುಕೊಂಡು ಹೋಗುವುದು ಉತ್ತಮವೆಂದು ಸೂಚಿಸಿದ್ದಾರೆ.

Trending on Kannada Drivespark :

ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

ಬೆಂಗಳೂರಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಕಾರಿನ ಹಿಂದೆ ಓಡಿದರು!!

English summary
A Young Man Revealed the Cheating On Hyderbad Petrol Bunks.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark