ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

Recommended Video - Watch Now!
Bangalore Traffic Police Rides With Illegal Number Plate - DriveSpark

ಸ್ಯಾಂಡಲ್‌ವುಡ್ ನಟ ನಟಿಯರು ಇತ್ತೀಚೆಗೆ ಸೂಪರ್ ಕಾರುಗಳ ಖರೀದಿಯಲ್ಲಿ ಇತರೆ ಚಿತ್ರರಂಗದವರಿಗಿಂತ ಒಂದು ಹೆಜ್ಜೆ ಮುಂದಿಡುತ್ತಿದ್ದಾರೆ. ಖ್ಯಾತ ನಟ ನಟಿಯರೆಲ್ಲಾ ಲಗ್ಷುರಿ ಕಾರುಗಳ ಖರೀದಿಗೆ ಮುಗಿಬಿದ್ದಿದ್ದು, ಈ ಪಟ್ಟಿಗೆ ಮತ್ತೊಬ್ಬ ಸ್ಟಾರ್ ಹೆಸರು ಸೇರ್ಪಡೆಯಾಗಿದೆ. ಯಾರಪ್ಪ ಅದು? ಅಂತೀರಾ... ಅದೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಹೌದು, ನಾಯಕಿ ಹರಿಪ್ರಿಯಾ ಇತ್ತೀಚಿಗೆ 3 ಕೋಟಿ ಬೆಲೆ ಬಾಳುವ ಜಾಗ್ವಾರ್ ಕೊಂಡು ಖುಷಿಯ ನಗೆ ಬೀರಿದ್ದರು. ಯುವ ನಟ ಚೇತನ್ ಚಂದ್ರ ಕೂಡ ಆಡಿ ಕಾರನ್ನು ಕೊಂಡು 'ತಮ್ಮ ತಾಳ್ಮೆ ಹಾಗೂ ಶ್ರಮಕ್ಕೆ ಸಿಕ್ಕ ಫಲ' ಎಂಬ ಸ್ಟೆಟಸ್ ಒಂದನ್ನು ಹಾಕಿ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿದ್ದರು.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಇದಷ್ಟೇ ಅಲ್ಲದೇ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ನಟ ಯಶ್ ಕೂಡಾ ಪತ್ನಿ, ಅಪ್ಪ, ಅಮ್ಮ ಹಾಗು ತಮಗೂ ಸೇರಿ ಬರೋಬ್ಬರಿ ಮೂರು ವಿವಿಧ ಮಾದರಿಯ ಮೆರ್ಸಿಡೆಸ್ ಬೆಂಜ್ ಕಾರುಗಳನ್ನು ಕೊಂಡಿದ್ದರು.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಈಗ ನಮ್ಮ ಸರದಿ ಎಂಬಂತೆ ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕ ನಟ ದರ್ಶನ್ ಬರೋಬ್ಬರಿ 5.70 ಕೋಟಿ ಬೆಲೆಯ ಲಂಬೋರ್ಗಿನಿ ಅವೆಂಟಡೊರ್ ಕಾರನ್ನು ಖರೀದಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬೈಕ್ ಮತ್ತು ಕಾರುಗಳೆಂದರೆ ಎಲ್ಲಿಲ್ಲದ ಕ್ರೇಜ್. ಸ್ವಲ್ಪ ದಿನಗಳ ಹಿಂದೆ ದರ್ಶನ್ ತನ್ನ ಬಳಿ ಇದ್ದ ಹಮ್ಮರ್ ಕಾರನ್ನು ಮಾರಾಟ ಮಾಡಿದ್ದು, ಇದೀಗ ಲಂಬೋರ್ಗಿನಿ ಕಾರನ್ನು ಖರೀದಿಸುವ ಮೂಲಕ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿರುವ ಕೆಲವೇ ಕೆಲವು ನಟರಲ್ಲಿ ದರ್ಶನ್ ಸಹ ಒಬ್ಬರಾಗಿದ್ದಾರೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಹೊಸ ವರ್ಷಕ್ಕಾಗಿ ಈ ಕಾರನ್ನು ಖರೀದಿಸಿದ್ದು, ಈಗಾಗಲೆ ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ರೇಂಜ್ ರೋವರ್, ಬೆಂಜ್, ಫಾರ್ಚ್ಯೂನರ್, ಮಿನಿ ಕೂಪರ್ ಸೇರಿದಂತೆ ಹಲವಾರು ಕಾರುಗಳಿವೆ. ಸದ್ಯಕ್ಕೆ ದರ್ಶನ್ ಬಹುಕೋಟಿ ವೆಚ್ಚದ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಹಬ್ಬಗಳು ಹಾಗೂ ಹುಟ್ಟುಹಬ್ಬಗಳು ಸಿನಿಮಾ ಸ್ಟಾರ್ ಗಳ ಜೀವನದಲ್ಲಿ ಸಾಕಷ್ಟು ಇಂಪಾರ್ಟೆಂಟ್ ಆಗಿರುತ್ತವೆ. ಹಬ್ಬಗಳ ದಿನ ಮತ್ತು ಬರ್ತಡೇ ದಿನ ಅವರುಗಳು ಅಭಿನಯಿಸುವ ಸಿನಿಮಾಗಳ ಮಹೂರ್ತ ಹಾಗೂ ಹಾಡುಗಳ ಬಿಡುಗಡೆ, ಹೊಸ ವಸ್ತುಗಳ ಖರೀದಿ ಹೀಗೆ ಸಾಕಷ್ಟು ಒಳ್ಳೆ ಕೆಲಸಗಳನ್ನ ಇಂತಹ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಹೊಸ ಕಾರು ಡಬಲ್ ಖುಷಿ ಕೊಟ್ಟಿದ್ದು, ಒಂದು ಕಡೆ ದರ್ಶನ್ ಅಭಿನಯದ 51ನೇ ಚಿತ್ರದ ಮಹೂರ್ತ ನೆರವೇರಿದೆ ಮತ್ತೊಂದು ಕಡೆ ದರ್ಶನ್ ಫ್ಯಾಮಿಲಿಗೆ ಸ್ಪೆಷಲ್ ಅತಿಥಿ ಸೇರಿಕೊಂಡಿದ್ದಾರೆ ಎನ್ನಬಹುದು.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಬರೋಬ್ಬರಿ 730 ಅಶ್ವಶಕ್ತಿ ಉತ್ಪಾದಿಸಬಲ್ಲ ಲಂಬೋರ್ಗಿನಿ ಅವೆಂಟಡೊರ್ ಕಾರು ಈ ಹಿಂದೆ 2017ರ ಫೆಬ್ರುವರಿಯಲ್ಲಿ ಭಾರತದಲ್ಲಿ ಭರ್ಜರಿ ಅನಾವರಣಗೊಂಡಿತ್ತು. ಇದು ಹಿಂದಿನ ಮಾದರಿಗಿಂತಲೂ ಹೆಚ್ಚುವರಿ 40-ಬಿಎಚ್‌ಪಿ ಉತ್ಪಾದಿಸುವ ಗುಣ ಹೊಂದಿದೆ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

ನೂತನ ಲಂಬೋರ್ಗಿನಿ ಅವೆಂಟಡೊರ್ ಕಾರಿನಲ್ಲಿರುವ ಅತ್ಯಂತ ಶಕ್ತಿಶಾಲಿ 6.5-ಲೀಟರ್ ವಿ12 ಸೂಪರ್ ಕಾರು ಎಂಜಿನ್ 730 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ವೇಗತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಕೇವಲ 2.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 349 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಹೀಗಾಗಿ ಸ್ವತಂತ್ರ ಶಿಫ್ಟಿಂಗ್ ರಾಡ್ ಸೆವನ್ ಸ್ಪೀಡ್ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ರವಾನೆಯಾಗಲಿದೆ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಕಾರ್ಬನ್ ಮೊನೊಕಾಕ್ ಸಂರಚನೆಯ ಲಂಬೋರ್ಗಿನಿ ಅವೆಂಟಡೊರ್ ಮಾದರಿಯು ಗರಿಷ್ಠ ವೇಗದಲ್ಲೂ ಅತ್ಯುತ್ತಮ ಸ್ಥಿರತೆಯನ್ನು ಪ್ರದಾನ ಮಾಡಲಿದ್ದು, ಕಾರಿನ ಒಟ್ಟಾರೆ ಭಾರ 1575 ಕೆ.ಜಿ ಆಗಿದೆ. ಇದು ಹಿಂದಿನ ಮಾದರಿಗೆ ಸಮಾನವಾಗಿದೆ.

Trending On DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಇನ್ನು ಕಾರಿನ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಂನಲ್ಲೂ ಪರಿಷ್ಕರಣೆ ತರಲಾಗಿದ್ದು, ಮತ್ತಷ್ಟು ತ್ವರಿತ ಗತಿಯಲ್ಲಿ ಕೆಲಸ ಮಾಡಲಿದೆ.

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಈ ಮೂಲಕ ಸ್ಟ್ರೀಟ್, ಸ್ಪೋರ್ಟ್ ಮತ್ತು ರೇಸ್ ಗಳೆಂಬ ಮೂರು ಚಾಲನಾ ವಿಧಗಳನ್ನು ನೂತನ ಲಂಬೋರ್ಗಿನಿ ಅವೆಂಟಡೊರ್ ಗಿಟ್ಟಿಸಿಕೊಂಡಿದ್ದು,ಕಾರಿನೊಳಗೆ ವಿಶ್ವ ದರ್ಜೆಯ ಟಿಎಫ್ ಟಿ ಟಚ್ ಸ್ಕ್ರೀನ್ ಜೊತೆಗೆ ಆಪಲ್ ಕಾರ್ ಪ್ಲೇ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ರಸ್ತೆ ದಾಟುತ್ತಿದ್ದ 11 ವರ್ಷದ ಬಾಲಕಿಗೆ ಕೆಟಿಎಂ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅವತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಅದೇ ಹೆದ್ದಾರಿಯಲ್ಲಿ ಬರುತ್ತಿದ್ದ ಇತರೆ ಬೈಕ್‌ರ್‌ಗಳಿಗೂ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಬೆಂಗಳೂರಿನತ್ತ ಜಾಲಿ ರೈಡ್ ಮಾಡಲು ಹೋಗುತ್ತಿದ್ದ ಬೈಕ್ ಒಂದು ಅಪಘಾತವಾದ ಹಿನ್ನೆಲೆ ಸವಾರನು ಹಿಗ್ಗಾಮುಗ್ಗ ಥಳಿತಕ್ಕೆ ಒಳಾಗಿರುವ ಘಟನೆ ನಡೆದಿದ್ದು, ಕೆಟಿಎಂ ಆರ್‌ಸಿ 390 ಡಿಕ್ಕಿ ಹೊಡೆದ ಪರಿಣಾಮ ಬುಳ್ಳಹಳ್ಳಿಯ 11 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಬೆಂಗಳೂರು ಮೂಲದ ಬೈಕ್‌ಗಳ ತಂಡವೊಂದು ಕೋಲಾರದ ಅಂತರಗಂಗೆಗೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು, ಕುಡಿಯುವ ನೀರಿಗಾಗಿ ಹೆದ್ದಾರಿ ದಾಟುತ್ತಿದ್ದ ಬಾಲಕಿಗೆ ಕೆಟಿಎಂ ಆರ್‌ಸಿ 390 ರಭಸವಾಗಿ ಗುದ್ದಿದೆ.

English summary
Read in Kannada about sandalwood actor darshan bought a lamborghini aventador car.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark