ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಆ್ಯಪ್ ಆಧರಿತ ಕ್ಯಾಬ್ ಸೇವೆಗಳು ಸಾಂಪ್ರದಾಯಿಕ ಆಟೋ ಸೇವೆಗಳಿಗಿಂತ ತಮ್ಮದೇ ಆದ ಪ್ರಾಮುಖ್ಯತೆ ಹೊಂದುತ್ತಿವೆ. ಆದ್ರೆ ಕ್ಯಾಬ್‌ಗಳ ಸೇವೆಗಳನ್ನೇ ನಂಬಿರುವ ಗ್ರಾಹಕರಿಗೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಕಹಿ ಘಟನೆಗಳು ಸುರಕ್ಷೆ ಬಗ್ಗೆ ಆತಂಕಕ್ಕೆ ಎಡೆ ಮಾಡಿಕೊಡುವಂತಿವೆ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಹೌದು.. ಬೆಂಗಳೂರಿನಲ್ಲಿ ಇಂದು ಮುಂಜಾನೆ ನಡೆದ ಕಹಿ ಘಟನೆಯೊಂದು ಕ್ಯಾಬ್ ಸೇವೆಗಳು ಎಷ್ಟರ ಮಟ್ಟಿಗೆ ಸುರಕ್ಷೆ ಎಂಬ ಅನುಮಾನ ಮೂಡಿಸುವಂತಿವೆ. ಯಾಕಂದ್ರೆ ಕ್ಯಾಬ್ ಪಯಣದ ವೇಳೆ ಗ್ರಾಹಕರ ಸ್ನೇಹಿಯಾಗಿ ವರ್ತಿಸಬೇಕಿದ್ದ ಉಬರ್ ಚಾಲಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಘಟನೆಯ ವಿವರ

ಜೊಬೋ ಕುರುವಿಲ್ಲಾ ಎನ್ನುವವರು ಇಂದು ಮುಂಜಾನೆ 7 ಗಂಟೆಗೆ ಬೆಂಗಳೂರು ಅಂತಾರಾಷ್ಟಿಯ ವಿಮಾನ ನಿಲ್ದಾಣದಿಂದ ಮನೆಗೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಎಂದಿನಂತೆ ಮಾರ್ಗಸೂಚಿ ಅನುಗುಣವಾಗಿ ಉಬರ್ ಕ್ಯಾಬ್ ಚಾಲಕ ನಿಗದಿತ ಪ್ರದೇಶಕ್ಕೆ ಡ್ರಾಪ್ ನೀಡಲು ಸಮ್ಮತಿ ಸೂಚಿಸಿದ್ದ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಈ ವೇಳೆ ಗ್ರಾಹಕ ಜೊಬೋ ಕುರುವಿಲ್ಲಾ ಎಂಬುವರರ ಜೊತೆ ನಗುತ್ತಲೇ ಮಾತನಾಡಿದ ಕಾರು ಚಾಲಕ ನಂತರ ಗೂಂಡಾ ವರ್ತನೆ ತೊರಿದ್ದಾನೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಾಲನೆ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಈ ವೇಳೆ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಲ್ಲದೇ ಬಂದಿರುವ ಕೆಲಸವನ್ನು ಮುಗಿಸಿಕೊಂಡು ಹೋಗು ಎನ್ನುವ ರೀತಿಯಲ್ಲಿ ಕೊಂಕು ಮಾತನಾಡಿದ್ದಾನೆ. ಇದರಿಂದ ಕ್ಯಾಬ್ ಪ್ರಯಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಗ್ರಾಹಕ ಬೇರೊಂದು ಕ್ಯಾಬ್‌ನಲ್ಲಿ ಪಯಣ ಮಾಡಿದ್ದಾರೆ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಈ ಬಗ್ಗೆ ಉಬರ್ ಇಂಡಿಯಾ ಸಂಸ್ಥೆಗೆ ದೂರು ನೀಡಿರುವ ಜೊಬೋ ಕುರುವಿಲ್ಲಾ ಅವರು ಮೊಬೈಲ್‌ನಲ್ಲಿ ಮಾತನಾಡುತ್ತಾ ಡ್ರೈವಿಂಗ್ ಮಾಡುವ ಉಬರ್ ಚಾಲಕನ ಕ್ರಮ ಸರಿಯಲ್ಲ ಎಂಬ ಬಗ್ಗೆ ತಿಳುವಳಿಕೆ ಹೇಳಿದ್ದಾರೆ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಜೊಬೋ ಕುರುವಿಲ್ಲಾ ಟ್ಪಿಟ್‌ಗೆ ಉತ್ತರಿಸಿರುವ ಉಬರ್ ಇಂಡಿಯಾ ಸಂಸ್ಥೆಯು ಘಟನೆ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಲ್ಲದೇ ದುರ್ವತನೆ ತೊರಿದ ಕ್ಯಾಬ್ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದೆ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ವಿಚಾರ

ಹೌದು.. ಈ ಘಟನೆಯಲ್ಲಿ ಮತ್ತೊಂದು ಸ್ಪೋಟಕ ವಿಚಾರ ಹೊರ ಬಂದಿದೆ. ಜೊಬೋ ಕುರುವಿಲ್ಲಾ ಎಂಬುವವರು ಬುಕ್ ಮಾಡಿದ್ದ ಕ್ಯಾಬ್‌ನಲ್ಲಿ ದುರ್ವರ್ತನೆ ತೋರಿದ ಚಾಲಕನ ಬಗ್ಗೆ ಹಲವು ಅನುಮಾನಗಳಿವೆ.

ತಪ್ಪದೇ ಓದಿ-ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಯಾಕೆಂದ್ರೆ ಕ್ಯಾಬ್ ಬುಕ್ ಮಾಡಿದ್ದ ವೇಳೆ ಉಬರ್ ಸಂಸ್ಥೆಯು ಚಾಲಕನ ಬಗ್ಗೆ ಮಾಹಿತಿ ನೀಡಿದಾಗ ಕಾರು ಚಾಲಕನ ಹೆಸರು ತಿಮ್ಮಣ್ಣ ಎಂದು ನಮೂದಿಸಲಾಗಿತ್ತು. ಆದ್ರೆ ಉಬರ್ ನೀಡಿದ್ದ ಮಾಹಿತಿ ಪ್ರಕಾರ ಕ್ಯಾಬ್‌ನಲ್ಲಿದ್ದ ಚಾಲಕ ತಿಮ್ಮಣ್ಣ ಅಲ್ಲ ಎನ್ನುವ ಮಾಹಿತಿಯನ್ನು ಜೊಬೋ ಕುರುವಿಲ್ಲಾ ಅವರು ಪತ್ತೆ ಹಚ್ಚಿದ್ದಾರೆ.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಹಾಗಾದ್ರೆ ಮತ್ತೊಬ್ಬರ ಹೆಸರಿನಲ್ಲಿ ಕ್ಯಾಬ್ ಸೇವೆಗಳನ್ನು ನೀಡುವ ಅವಕಾಶ ಬೆಂಗಳೂರಿನಲ್ಲಿ ಇದೆ ಎನ್ನುವ ಸ್ಪೋಟಕ ಮಾಹಿತಿ ಇದಾಗಿದ್ದು, ಈ ಮೂಲಕ ಕಾನೂನು ಬಾಹಿರ ಚಟುವಟಿಕೆ ಹಾಗೂ ಅಪರಾಧ ಕೃತ್ಯಗಳು ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಉಬರ್ ಚಾಲಕನ ದುರ್ವತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಕಾರಿನ ಮಾಹಿತಿ

ಜೊಬೋ ಕುರುವಿಲ್ಲಾ ಅವರು ನೀಡಿರುವ ಮಾಹಿತಿ ಪ್ರಕಾರ ಘಟನೆ ನಡೆದ ಕಾರಿನ ನಂಬರ್ ಕೆಎ36, ಬಿ 2120 ಎಂದು ನಮೂದಿಸಲಾಗಿದ್ದು, ಉಬರ್ ನೀಡಿರುವ ತಿಮ್ಮಣ್ಣ ಮಾಹಿತಿಗೂ ಕ್ಯಾಬ್ ಚಾಲನೆ ಮಾಡುತ್ತಿದ್ದ ಅನಾಮಿಕ ವ್ಯಕ್ತಿಗೂ ಏನು ಸಂಬಂಧ ಎನ್ನುವ ಬಗ್ಗೆ ತನಿಖೆ ನಂತರವಷ್ಟೇ ತಿಳಿಯಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

English summary
How Safe Is Uber India? This Driver Fraud Incident Might Give You An Insight.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark