ಓಲಾ ನಂತರ ಉಬರ್‌ನಿಂದಲೂ ಭಾರತದಲ್ಲಿ ಉದ್ಯೋಗ ಕಡಿತ
ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿದ್ದು, ವಾಣಿಜ್ಯ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಹೀಗಿರುವಾಗ ಆರ್ಥಿಕ ನಷ್ಟದಿಂದ ಪಾರಾಗಲು ಕಠಿಣ ಕ್ರಮಕ್ಕೆ ಮುಂದಾಗಿರುವ ಖಾಸಗಿ ಕಂಪನಿಗಳು ಉದ್ಯೋಗ ಕಡಿತ ನಿರ್ಧಾರ ಪ್ರಕಟಿಸುತ್ತಿವೆ.

ಭಾರತದಲ್ಲೂ ಕೂಡಾ ಕರೋನಾ ವೈರಸ್‌ನಿಂದಾಗಿ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟ ಶುರುವಾಗಿದ್ದು, ಮಾರ್ಚ್ ಮಧ್ಯಂತರದಲ್ಲೇ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಇನ್ನು ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಸಿದೆ. ಹೀಗಿರುವಾಗ ಕಳೆದ ಎರಡೂವರೆ ತಿಂಗಳಿನಿಂದ ಯಾವುದೇ ಆದಾಯವಿಲ್ಲದ ಲಕ್ಷಾಂತರ ಖಾಸಗಿ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಉದ್ಯೋಗ ಕಡಿತ ಮಾಡುತ್ತಿವೆ.

ಕ್ಯಾಬ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಓಲಾ ಕಂಪನಿಯು 1,400 ಉದ್ಯೋಗಿಗಳನ್ನು ತೆಗದುಹಾಕಿದ ಬೆನ್ನಲ್ಲೇ ಉಬರ್ ಕೂಡಾ ಭಾರತದಲ್ಲಿ ಸುಮಾರು 600 ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹಣಕಾಸು ವಿಭಾಗ ಸೇರಿದಂತೆ ವಿವಿಧ ಹಂತದ ಕಾರ್ಯಾಚರಣೆಯಲ್ಲಿರುವ ಉದ್ಯೋಗಿಗಳ ಸಂಖ್ಯೆಯನ್ನು ತಗ್ಗಿಸಲು ನಿರ್ಧರಿಸಿದ್ದು, ಕಂಪನಿಯು ಕಾನೂನು ಪ್ರಕಾರ ಮೂರು ತಿಂಗಳ ಮುಂಗಡ ವೇತನ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ.

ಆದರೂ ಕೂಡಾ ಸಂಕಷ್ಟದ ಸಮಯದಲ್ಲಿ ಉದ್ಯೋಗ ಕಡಿತ ಅನುಸರಿಸುತ್ತಿರುವ ಖಾಸಗಿ ಕಂಪನಿಗಳ ನಿರ್ಧಾರದಿಂದ ನಿರುದ್ಯೋಗಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಮುಂಬರುವ ದಿನಗಳು ಮತ್ತಷ್ಟು ಕಠಿಣವಾಗಿರಲಿವೆ ಎನ್ನಲಾಗುತ್ತಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಕೇಂದ್ರ ಸರ್ಕಾರವು ಒಂದು ಕಡೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗ ಕಡಿತ ಮಾಡಬೇಡಿ ಎಂಬ ಸೂಚನೆ ನೀಡಿದ್ದರೂ ಆರ್ಥಿಕ ಮುಗ್ಗಟ್ಟು ಇದೀಗ ದಿನದಿಂದಕ್ಕೆ ಹೆಚ್ಚಳವಾಗುತ್ತಿರುವುದರಿಂದ ಖಾಸಗಿ ಕಂಪನಿಗಳಿಗಳು ಭಾರೀ ಪ್ರಮಾಣದ ಆರ್ಥಿಕ ಹೊರೆ ಅನುಭವಿಸುತ್ತಿವೆ.

ಜೊತಗೆ ಟ್ಯಾಕ್ಸಿಗಳಿಂದಲೇ ಆದಾಯ ಕಂಡುಕೊಂಡಿದ್ದ ಲಕ್ಷಾಂತರ ಚಾಲಕರಿಗೂ ಕೂಡಾ ಭಾರೀ ಹೊಡೆತ ಬಿದ್ದಿದ್ದು, ಬಾಡಿಗೆಗಾಗಿ ಖರೀದಿಸಿದ ವಾಹನಗಳ ಸಾಲ ಮರುಪಾವತಿಗೂ ಇದೀಗ ಪರದಾಡುವ ಪರಿಸ್ಥಿತಿ ಎದುರಾಗಿದೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಸದ್ಯ ಪರಿಸ್ಥಿತಿಗೆ ಅನುಗುಣವಾಗಿ ಟ್ಯಾಕ್ಸಿ ಓಡಾಟಕ್ಕೂ ಅವಕಾಶ ನೀಡಲಾಗುತ್ತದೆಯಾದರೂ ನೀರಿಕ್ಷಿತ ಮಟ್ಟದ ಪ್ರಯಾಣಿಕರಿಲ್ಲದೆ ಪರದಾಟುವಂತಾಗಿದ್ದು, ವೈರಸ್ ಭೀತಿ ನಡುವೆಯೂ ಜೀವನ ನಿರ್ವಹಣೆಗಾಗಿ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡಲಾಗುತ್ತಿದೆ.


Click it and Unblock the Notifications








