ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಸ್‌ಗಳು
ತಮ್ಮ ಪಯಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲಿಕನ ಕರ್ತವ್ಯವಾಗಿದೆ. ಹಾಗಾಗಿ ನಿಮ್ಮ ಬೇಸಿಕ್ ಕಾರಿನಲ್ಲಿ ಇಂತಹ ಸೌಲಭ್ಯಗಳನ್ನು ಆದಷ್ಟು ಬೇಗನೇ ಆಳವಡಿಸಿಕೊಳ್ಳುವುದು ಉತ್ತಮ.
ಕಾರು ಪ್ರಯಾಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲೀಕನ ಕರ್ತವ್ಯವಾಗಿದ್ದು, ಸುಖಕರ ಪ್ರಯಾಣವನ್ನು ನಿಮ್ಮದಾಗಿಸಿಕೊಳ್ಳಲು ಪ್ರತಿಯೊಂದು ಕಾರಿನಲ್ಲೂ ಈ ಕೆಳಗಿನ ಕೆಲವು ತಾಂತ್ರಿಕ ಅಂಶಗಳನ್ನು ಕಡ್ಡಾಯವಾಗಿ ಆಳವಡಿಸಿಕೊಳ್ಳುವುದು ಉತ್ತಮ ಎನಿಸದೇ ಇರಲಾರದು.

ಕಾರು ಪ್ರಯಾಣವನ್ನು ಸುರಕ್ಷಿತ ಹಾಗೂ ಆನಂದಮಯವಾಗಿಸಲು ನಾವಿಲ್ಲಿ ಪ್ರಮುಖ 9 ಕಾರು ಆಕ್ಸೆಸರಿಸ್‌ಗಳ ಬಗ್ಗೆ ಚರ್ಚಿಸುತ್ತಿದ್ದು, ಸುರಕ್ಷಿತ ಕಾರು ಪ್ರಯಾಣಕ್ಕೆ ಪ್ರತಿ ಕಾರು ಮಾಲೀಕರು ಕಡ್ಡಾಯವಾಗಿ ಈ ಕೆಳಗಿನ ಸೌಲಭ್ಯಗಳನ್ನು ಹೊಂದುವುದು ಒಳಿತು. ಯಾಕೆಂದ್ರೆ ಈ ಕೆಳಗಿನ ತಾಂತ್ರಿಕ ಅಂಶಗಳು ನಿಮ್ಮ ಕಾರು ಪ್ರಯಾಣವನ್ನು ಸುಲಭವಾಗಿಸಲಿವೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ನೀವು ರಿವರ್ಸ್ ಗೇರ್ ಹಾಕಿದಾಗ ಇದು ಸ್ವಯಂಚಾಲಿತವಾಗಿ ಕೆಲಸ ಆರಂಭಿಸಲಿದೆ. ಕಾರಿನ ಹಿಂಬದಿಯಲ್ಲಿರುವ ಚಿಕ್ಕ ಸೆನ್ಸಾರ್ ಗಳು ಅಲ್ಟ್ರಾಸೋನಿಕ್ ರೇಡಿಯೊ ವೇವ್ ನಲ್ಲಿ ಕಾರ್ಯ ನಿರ್ವಹಿಸಿದ್ದು, ಯಾವುದೇ ರೀತಿಯ ತಡೆ ಎದುರಾದರೇ ಎಚ್ಚರಿಸಲಿದೆ.

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಆಳವಡಿಸಲಾದ ಎಲ್ ಸಿಡಿ ಪರದೆ ಮೇಲೆ ಸ್ಪಷ್ಟವಾದ ಗೋಚರತೆಯನ್ನು ನೀಡಲಿದೆ. ಬಹುತೇಕ ಎಲ್ಲಾ ಆಧುನಿಕ ಕಾರುಗಳಲ್ಲೂ ಇಂತಹ ಸೇವೆಗಳು ಲಭ್ಯವಿದೆ.

ಇದು ಕಾರಿನ ಹಿಂಬದಿಯಲ್ಲಿ ಆಳವಡಿಸಲಾದ ಲೆನ್ಸ್ ಗಳ (ಟೈಲ್ ಗೇಟ್ ಅಥವಾ ಬಂಪರ್ ನಲ್ಲಿ) ಮೂಲಕ ಪ್ರತ್ಯಕ್ಷ ದರ್ಶನವನ್ನು ಸೀಟಿನಲ್ಲೇ ಕುಳಿತುಕೊಂಡು ನೋಡಬಹುದಾಗಿದೆ.

ಗೇರ್ ಲಾಕ್
ಇತ್ತೀಚೆಗೆ ಕಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಡೋರ್ ಲಾಕ್ ಹೊರತಾಗಿಯು ಕೆಲವು ಪ್ರಕರಣಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿ ಡೋರ್ ಅನ್ ಲಾಕ್ ಮಾಡಿ ಕಾರು ಕಳ್ಳತನ ಮಾಡಲಾಗುತ್ತಿದೆ. ಹೀಗಾಗಿ ಗೇರ್ ಲಾಕ್ ಹೊಂದಿದ್ದರೆ ಇಂತಹ ಪ್ರಕರಣಗಳನ್ನು ತಡೆಯಬಹುದು.

ಪ್ರತಿಫಲಿತ ಟೇಪ್
ಕಾರಿನಲ್ಲಿ ಕೆಂಪು ಬಣ್ಣದ ತ್ರಿಕೋನಾಕೃತಿಯಲ್ಲಿ ಪ್ರತಿಫಲಿಸುವ ಟೇಪ್ ಲಗತ್ತಿಸುವ ಮೂಲಕ ರಾತ್ರಿ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ. ಇದು ದೂರದಿಂದಲೇ ವಾಹನ ಪ್ರತಿಬಿಂಬಿಸುವಂತೆ ಮಾಡಲಿದ್ದು, ಹಿಂಬದಿಯಲ್ಲಿ ಬರುವ ವಾಹನಗಳು ಎಚ್ಚೆತ್ತುಕೊಳ್ಳಲಿದೆ.
MOST READ: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!

ಲೈಫ್ ಹ್ಯಾಮರ್
ಲೈಫ್ ಹ್ಯಾಮರ್ ಗಳನ್ನು ಎಮರ್ಜನ್ಸಿ ಹ್ಯಾಮೆರ್ ಗಳೆಂದು ಕೂಡಾ ಕರೆಯಲ್ಪಡುತ್ತಿದ್ದು, ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಕಾರಿನಿಂದ ಹೊರಬರಲು ನೆರವಾಗಲಿದೆ. ಲೈಫ್ ಹ್ಯಾಮರ್ ನೆರವಿನಿಂದ ಕಾರಿನ ಗಾಜು ಒಡೆಯಲು ಅಥವಾ ಸೀಟು ಬೆಲ್ಟ್ ಮುರಿಯಲು ನೆರವಾಗಲಿದೆ.
MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಕನ್ವೆಕ್ಸ್ ಮಿರರ್
ಹೊರಗಿನ ಕನ್ವೆಕ್ಸ್ ಮಿರರ್ ಗಳು ನಿಮಗೆ ಕನ್ನಡಿಯೊಳಗೆ ನಿಮಗೆ ಸಂಕುಚಿತ ನೋಟವನ್ನು ಪ್ರದಾನ ಮಾಡಲಿದ್ದು, ಇದರಿಂದ ಹಿಂಬದಿಯ ವಿಶಾಲವಾದ ಪ್ರದೇಶವು ಕನ್ನಡಿಯಲ್ಲಿ ಸಣ್ಣದಾಗಿ ಗೋಚರಿಸಲಿದೆ. ಪರಿಣಾಮ ಬ್ಲೈಂಡ್ ಸ್ಪಾಟ್ ಸಾಧ್ಯತೆಯನ್ನು ಕಡಿಮೆ ಮಾಡಲಿದ್ದು, ಮತ್ತಷ್ಟು ದೂರದ ಪ್ರದೇಶದ ಗೋಚರತೆಯು ಲಭ್ಯವಾಗಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮೊಬೈಲ್ ಹೊಲ್ಡರ್
ಕಾರು ಪ್ರಯಾಣದ ವೇಳೆ ಬಹುತೇಕ ಚಾಲಕರು ಒಂದು ಕೈಯಲ್ಲಿ ಮೊಬೈಲ್ ಇನ್ನೊಂದು ಕೈಯಲ್ಲಿ ಕಾರಿನ ಹ್ಯಾಂಡಲ್ ಹಿಡಿದು ಚಾಲನೆ ಮಾಡುವುದನ್ನು ನಾವು ನೋಡಿದ್ದೇವೆ. ಆದ್ರೆ ಇಂತಹ ಅಭ್ಯಾಸಗಳು ನಿಮ್ಮ ಪ್ರಾಣಕ್ಕೆ ಕುತ್ತುತರಬಹುದು. ಹೀಗಾಗಿ ಚಾಲನೆ ವೇಳೆ ಗೂಗಲ್ ಮ್ಯಾಪ್ ಬಳಕೆ ಅವಶ್ಯ ಇದ್ದಲ್ಲಿ ಮೊಬೈಲ್ ಹೊಲ್ಡರ್ ನಿಮ್ಮ ಅನುಕೂಲಕ್ಕೆ ಬರಲಿದೆ.
MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಎಲ್‌ಇಡಿ ಆಕ್ಸಿಲರಿ ಲ್ಯಾಂಪ್
ಮಾರುಕಟ್ಟೆಯಲ್ಲಿ ಹಲವು ಶ್ರೇಣಿಯ ಎಲ್‌ಇಡಿ ಆಕ್ಸಿಲರಿ ಲ್ಯಾಂಪ್ ಲಭ್ಯವಿದ್ದು, ಕಾರಿನ ನೋಟವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸುರಕ್ಷತೆಯನ್ನು ಪ್ರದಾನ ಮಾಡಲಿದೆ. ಇದು ಬೇಗನೆ ಪ್ರತಿಫಲಿಸುವುದರಿಂದ ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ನೆರವಾಗಲಿದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಮೊಬೈಲ್ ಏರ್ ಕಂಪ್ರೆಸರ್
ದೂರದ ಪ್ರಯಾಣದಲ್ಲಿ ಆಗುವ ತೊಂದರೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ನಿಮ್ಮ ಕಾರಿನ ಪ್ರಮುಖ ಆಕ್ಸೆಸರಿಗಳಲ್ಲಿ ಮೊಬೈಲ್ ಏರ್ ಕಂಪ್ರೆಸರ್ ಸಾಧನವನ್ನು ಇಟ್ಟುಕೊಂಡಿರುವುದು ಒಳಿತು.


Click it and Unblock the Notifications








