ಎಂಟು ಜನರ ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

Recommended Video - Watch Now!
Bangalore Bike Accident At Chikkaballapur Near Nandi Upachar - DriveSpark

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ವೊಂದು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಶಾಂತಿಗ್ರಾಮದ ಬಳಿ ನಡೆದಿದೆ.

ಎಂಟು ಜನರನ್ನು ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಐರಾವಾತ ಬಸ್ ಬೆಂಗಳೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತಿತ್ತು. ಈ ಸಂದರ್ಭದಲ್ಲಿ ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದು ಕಮರಿಗೆ ಉರುಳಿ ಬಿದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಎಂಟು ಜನರನ್ನು ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಚಾಲಕ ಲಕ್ಷ್ಮಣ್(38), ಕಂಡಕ್ಟರ್ ಶಿವಪ್ಪ ಛಲವಾದಿ(36), ವೈದ್ಯಕೀಯ ವಿದ್ಯಾರ್ಥಿನಿ ಡಯಾನ(20), ಬೆಂಗಳೂರು ನಿವಾಸಿ ಗಂಗಾಧರ್(58) ಸೇರಿದಂತೆ ಇಬ್ಬರು ಮಹಿಳೆಯರು ಮತ್ತು 4 ಪುರುಷರು ಮೃತಪಟ್ಟಿದ್ದು, ಇಂದು ಮುಂಜಾನೆ 3:30ರ ವೇಳೆಗೆ ಈ ದುರಂತ ಘಟಿಸಿದೆ.

ಎಂಟು ಜನರನ್ನು ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಹಾಸನ ಜಿಲ್ಲಾಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಎಸ್‍ಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದಾರೆ.

ಎಂಟು ಜನರನ್ನು ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಘಟನೆ ನಡೆದ ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿದ್ದು, ಕಮರಿಗೆ ಉರುಳಿ ಬಿದ್ದಿದ್ದ ಬಸ್ಸನ್ನು ಕ್ರೇನ್ ಮೂಲಕ ಪೊಲೀಸರು ಮೇಲಕ್ಕೆತ್ತಿಸಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಎಂಟು ಜನರನ್ನು ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಇನ್ನು ಘಟನೆಯಲ್ಲಿ ನಜ್ಜುಗುಜ್ಜಾದ ಬಸ್ ಸಂಖ್ಯೆ ಕೆಎ01, ಎಫ್8513 ಸಂಖ್ಯೆಯ ವೊಲ್ವೊ ಬಸ್ ಎನ್ನಲಾಗಿದ್ದು, ಚಾಲಕನ ನಿರ್ಲಕ್ಷ್ಯ ಮತ್ತು ಬಳಸಲು ಯೋಗ್ಯವಲ್ಲದ ಬಸ್ ಮಾದರಿ ಎಂಬ ಮಾತು ಕೇಳಿಬರುತ್ತಿದೆ.

ಎಂಟು ಜನರನ್ನು ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಅವಧಿ ಮುಗಿದ ಬಸ್ ಬಳಕೆ

ಹೌದು, ಅಪಘಾತ ಪ್ರಕರಣದಲ್ಲಿ ಮೇಲ್ನೋಟಕ್ಕೆ ಹಲವು ಅನುಮಾನಗಳು ಹುಟ್ಟುಹಾಕುತ್ತಿದ್ದು, ಪ್ರಾಥಮಿಕ ತನಿಖೆ ವೇಳೆ ಅಪಘಾತವಾದ ಐರಾವತ ಬಸ್ ಅವಧಿ ಮುಗಿದ ವಾಹನ ಎಂಬುವುದು ಸಾಬೀತಾಗಿದೆ.

ಎಂಟು ಜನರನ್ನು ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಕಳೆದ 9 ವರ್ಷಗಳ ಹಿಂದೆಯೇ ಈ ಬಸ್ ಮೀತಿ ಪೂರ್ಣಗೊಂಡಿದ್ದು, ರಸ್ತೆಗಿಳಿಯಲು ಯೋಗ್ಯವಲ್ಲದ ವಾಹನ ಇದಾಗಿದೆ. ಹೀಗಾಗಿ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಾರಿಗೆ ಸಚಿವ ಎಚ್.ಎಂ ರೇವಣ್ಣ ಅವರು ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.


ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

English summary
8 dead after a bus fell into a nearby pond in Hassan's Karekere. People are travelling by Airavat bus from Bengaluru to Dharmasthala in Dakshin Kannada district. The incident took place on Jan 13th early morning.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark