ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

Written By:
Recommended Video - Watch Now!
Andhra Pradesh State Transport Bus Crashes Into Bike Showroom - DriveSpark

ನಾವು ನೀವೆಲ್ಲಾ ಕೆಲವು ವಿಷಯಗಳನ್ನು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಆದ್ರೆ ಅದರ ಬಗ್ಗೆ ವಿಶೇಷವಾದ ಗಮನಹರಿಸುವುದಿಲ್ಲ. ಯಾರಾದರೂ ಅದರ ಶ್ರೇಷ್ಠತೆ ಬಗ್ಗೆ ಹೇಳಿದರೆ ಮಾತ್ರ ನಮಗೆ ತಿಳಿಯುವುದು. ಅಂತಹ ವಿಷಯಗಳಲ್ಲಿ ರೈಲಿನ ಹಿಂಭಾಗದಲ್ಲಿ X ಗುರುತಿನ ರಹಸ್ಯ ಕೂಡಾ ಒಂದು.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಪ್ರತಿ ದಿವಸ ಲಕ್ಷಾಂತರ ಜನ ಪ್ರಯಾಣಿಕರು ರೈಲ್ವೆ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಕೊನೆಯ ಬೋಗಿಯಲ್ಲಿ ಬರೆದಿರುವ ಎಕ್ಸ್ ಗುರುತಿನ ಅರ್ಥ ಬಹುತೇಕ ಜನಕ್ಕೆ ಗೊತ್ತಿಲ್ಲ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಒಂದು ವೇಳೆ ರೈಲಿನ ಕೊನೆಯ ಬೋಗಿಯ ಎಕ್ಸ್ ಗುರುತಿನ ಅರ್ಥವನ್ನು ತಿಳಿದುಕೊಂಡಲ್ಲಿ ಓ.. ಹೋ.. ಇದೇನಾ ಇದರ ಅರ್ಥ ಎಂದು ಬೆರಗಾಗುವಿರಿ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಇದರರ್ಥ ಈ ರೈಲಿನಲ್ಲಿ ಇದೇ ಕೊನೆಯ ಬೋಗಿ ಎಂದರ್ಥ. ಇನ್ನೊಂದೆಡೆ, ಸರಿಯಾಗಿ ಗಮನಿಸಿ ನೋಡಿದರೆ 'LV' ಎಂದು ಆ ಬೋಗಿಯ ಎಡಭಾಗದಲ್ಲಿ ಒಂದು ಸಣ್ಣ ಪದದ ಬೋರ್ಡ್ ಸಹ ಗೋಚರಿಸುತ್ತದೆ. ಅಂದರೆ ಅದು ಕೊನೆಯ ವಾಹನ ಎಂದರ್ಥ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಈ ಎಕ್ಸ್ ಗುರುತು ಅಂತಿಮ ಬೋಗಿ ಹಿಂದೆ ಹಳದಿ ಬಣ್ಣದಲ್ಲಿ ಬರೆಯಲಾಗಿರುತ್ತದೆ. ಇಷ್ಟೇ ಅಲ್ಲ ರೈಲಿನ ಅಂತಿಮ ಬೋಗಿಯಲ್ಲಿ ಕೆಂಪು ವಿದ್ಯುತ್ ದೀಪವನ್ನು ಅಳವಡಿಸಲಾಗಿರುತ್ತದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಇದು ಐದು ಸೆಕೆಂಡ್‍ನಲ್ಲಿ ಒಂದು ಬಾರಿ ಈ ದೀಪ ಹೊಳೆಯುತ್ತದೆ. ಈ ನಿಯಮದ ಪ್ರಕಾರ ವಿಶೇಷ ರೈಲು ಅಂತಿಮ ಬೋಗಿಯಲ್ಲಿ ಈ ಗುರುತು ಇರಬೇಕಾಗುತ್ತದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಮಾತ್ರವಲ್ಲ ಅಂತಿಮ ಬೋಗಿಯಲ್ಲಿ ಒಂದು ಬೋರ್ಡ್ ಇರುತ್ತದೆ. ಇದರಲ್ಲಿ ಎಲ್‍ವಿ ಬರೆದಿರುತ್ತದೆ. ಈ ಬೋರ್ಡು ಇಂಗ್ಲಿಷ್‍ನಲ್ಲಿ ಬರೆದಿರುತ್ತದೆ. ಮತ್ತು ಅದರ ಬಣ್ಣ ಕಪ್ಪು ಅಥವಾ ಬಿಳಿ ಆಗಿರುತ್ತದೆ. ಈ ಬೋರ್ಡು ಅರ್ಥ ಅಂತಿಮ ವಾಹನ ಅಥವಾ ಲಾಸ್ಟ್ ವೆಹಿಕಲ್ ಎಂದಾಗಿದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಇನ್ನು ರಾತ್ರಿ ವೇಳೆ ಬೆಳಕು ಮತ್ತು ಹಗಲು ಬೆಳಕಿಗೆ 'X' ಮಾರ್ಕ್ ಗಮನಿಸುವುದು ಸುಲಭವಾಗಿದ್ದು, ಇದೇ ಉದ್ದೇಶದಿಂದ ದೊಡ್ಡ ಅಕ್ಷರಗಳಲ್ಲಿ ಬರೆದಿರಲಾಗುತ್ತದೆ.

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಒಂದು ವೇಳೆ ರೈಲಿನ ಹಿಂಭಾಗದಲ್ಲಿ 'LV' ಅಥವಾ 'X' ಗುರುತಿನ ಬೋಗಿ ಕಾಣದಿದ್ದರೆ ಏನೋ ಅಗಿದೆ ಎಲ್ಲ ಬೋಗಿಗಳು ಬಂದಿಲ್ಲ ಎಂದಾಯಿತು. ಈ ಸ್ಥಿತಿಯಲ್ಲಿ ತುರ್ತು ಕಾರ್ಯಚರಣೆಯನ್ನು ಆರಂಭಿಸಲು ನೇರವಾಗಲಿದೆ.


ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಈ 9 ಆಕ್ಸೆಸರಿಗಳನ್ನು ಬಳಸಿ...

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ತಮ್ಮ ಪಯಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲಿಕನ ಕರ್ತವ್ಯವಾಗಿದೆ. ಹಾಗಾಗಿ ನಿಮ್ಮ ಬೇಸಿಕ್ ಕಾರಿನಲ್ಲಿ ಇಂತಹ ಸೌಲಭ್ಯಗಳನ್ನು ಆದಷ್ಟು ಬೇಗನೇ ಆಳವಡಿಸಿಕೊಳ್ಳುವುದು ಉತ್ತಮ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಈ ನಿಟ್ಟಿನಲ್ಲಿ ನಿಮ್ಮ ಪಯಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಆನಂದಮಯವಾಗಿಸಲು ನಾವಿಲ್ಲಿ ಪ್ರಮುಖ 9 ಕಾರು ಆಕ್ಸೆಸರಿಗಳನ್ನು ಬಗ್ಗೆ ಚರ್ಚಿಸುತ್ತಿದ್ದು, ಸುರಕ್ಷಿತ ಕಾರು ಪ್ರಯಾಣಕ್ಕೆ ಪ್ರತಿ ಕಾರು ಮಾಲೀಕರು ಕಡ್ಡಾಯವಾಗಿ ಈ ಕೆಳಗಿನ ಸೌಲಭ್ಯಗಳನ್ನು ಹೊಂದುವುದು ಒಳಿತು.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ರಿವರ್ಸ್ ಪಾರ್ಕಿಂಗ್

ಸೆನ್ಸಾರ್ ನೀವು ರಿವರ್ಸ್ ಗೇರ್ ಆಳವಡಿಸಿದಾಗ ಇದು ಸ್ವಯಂಚಾಲಿತವಾಗಿ ಕೆಲಸ ಆರಂಭಿಸಲಿದೆ. ಕಾರಿನ ಹಿಂಬದಿಯಲ್ಲಿರುವ ಚಿಕ್ಕ ಸೆನ್ಸಾರ್ ಗಳು ಅಲ್ಟ್ರಾಸೋನಿಕ್ ರೇಡಿಯೊ ವೇವ್ ನಲ್ಲಿ ಕಾರ್ಯ ನಿರ್ವಹಿಸಿದ್ದು, ಯಾವುದೇ ರೀತಿಯ ತಡೆ ಎದುರಾದ್ದಲ್ಲಿ ಎಚ್ಚರಿಸಲಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಆಳವಡಿಸಲಾದ ಎಲ್ ಸಿಡಿ ಪರದೆ ಮೇಲೆ ಸ್ಪಷ್ಟವಾದ ಗೋಚರತೆಯನ್ನು ನೀಡಲಿದೆ. ಬಹುತೇಕ ಎಲ್ಲ ಆಧುನಿಕ ಕಾರುಗಳಲ್ಲಿ ಇಂತಹ ಸೇವೆಗಳು ಲಭ್ಯವಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಇದು ಕಾರಿನ ಹಿಂಬದಿಯಲ್ಲಿ ಆಳವಡಿಸಲಾದ ಲೆನ್ಸ್ ಗಳ (ಟೈಲ್ ಗೇಟ್ ಅಥವಾ ಬಂಪರ್ ನಲ್ಲಿ) ಮೂಲಕ ಪ್ರತ್ಯಕ್ಷ ದರ್ಶನವನ್ನು ಸೀಟಿನಲ್ಲೇ ಕುಳಿತುಕೊಂಡು ನೋಡಬಹುದಾಗಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಗೇರ್ ಲಾಕ್ ಮತ್ತು ಹ್ಯಾಂಡ್ ಲಾಕ್

ಇತ್ತೀಚೆಗೆ ಕಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಡೋರ್ ಲಾಕ್ ಹೊರತಾಗಿಯು ಕೆಲವು ಪ್ರಕರಣಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿ ಡೋರ್ ಅನ್ ಲಾಕ್ ಮಾಡಿ ಕಾರು ಕಳ್ಳತನ ಮಾಡಲಾಗುತ್ತಿದೆ. ಹೀಗಾಗಿ ಗೇರ್ ಲಾಕ್ ಮತ್ತು ಹ್ಯಾಂಡ್ ಲಾಕ್ ಹೊಂದಿದ್ದರೆ ಇಂತಹ ಪ್ರಕರಣಗಳನ್ನು ತಡೆಯಬಹುದು.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಪ್ರತಿಫಲಿತ ಟೇಪ್

ಕಾರಿನಲ್ಲಿ ಕೆಂಪು ಬಣ್ಣದ ತ್ರಿಕೋಣಾಕೃತಿಯ ಪ್ರತಿಫಲಿಸುವ ಟೇಪ್ ಲಗತ್ತಿಸುವ ಮೂಲಕ ರಾತ್ರಿ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ. ಇದು ದೂರದಿಂದಲೇ ವಾಹನ ಪ್ರತಿಬಿಂಬಿಸುವಂತೆ ಮಾಡಲಿದ್ದು, ಹಿಂಬದಿಯ ಬರುವ ವಾಹನಗಳು ಎಚ್ಚೆತ್ತುಕೊಳ್ಳಲಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಲೈಫ್ ಹ್ಯಾಮರ್

ಲೈಫ್ ಹ್ಯಾಮರ್ ಗಳು ಎಮರ್ಜನ್ಸಿ ಹ್ಯಾಮೆರ್ ಗಳೆಂದು ಕರೆಯಲ್ಪಡುತ್ತಿದ್ದು, ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ಕಾರಿನಿಂದ ಹೊರಬರಲು ನೆರವಾಗಲಿದೆ. ಲೈಫ್ ಹ್ಯಾಮರ್ ನೆರವಿನಿಂದ ಕಾರಿನ ಗಾಜು ಒಡೆಯಲು ಅಥವಾ ಸೀಟು ಬೆಲ್ಟ್ ಮುರಿಯಲು ನೆರವಾಗಲಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಕನ್ವೆಕ್ಸ್ ಮಿರರ್

ಹೊರಗಿನ ಕನ್ವೆಕ್ಸ್ ಮಿರರ್ ಗಳು ನಿಮಗೆ ಕನ್ನಡಿಯೊಳಗೆ ನಿಮಗೆ ಸಂಕುಚಿತ ನೋಟವನ್ನು ಪ್ರದಾನ ಮಾಡಲಿದ್ದು, ಇದರಿಂದ ಹಿಂಬದಿಯ ವಿಶಾಲವಾದ ಪ್ರದೇಶವು ಕನ್ನಡಿಯಲ್ಲಿ ಸಣ್ಣದಾಗಿ ಗೋಚರಿಸಲಿದೆ. ಪರಿಣಾಮ ಬ್ಲೈಂಡ್ ಸ್ಪಾಟ್ ಸಾಧ್ಯತೆಯನ್ನು ಕಡಿಮೆ ಮಾಡಲಿದ್ದು, ಮತ್ತಷ್ಟು ದೂರದ ಪ್ರದೇಶದ ಗೋಚರತೆಯು ಲಭ್ಯವಾಗಲಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಮೊಬೈಲ್ ಹೊಲ್ಡರ್

ಕಾರು ಪ್ರಯಾಣದ ವೇಳೆ ಬಹುತೇಕ ಚಾಲಕರು ಮೊಬೈಲ್ ಬಳಕೆ ಮಾಡುವುದು ನಾವು ನೋಡಿದ್ದೇವೆ. ಆದ್ರೆ ಇಂತಹ ಅಭ್ಯಾಸಗಳು ನಿಮ್ಮ ಪ್ರಾಣಕ್ಕೆ ಕುತ್ತುತರಬಹುದು. ಹೀಗಾಗಿ ಚಾಲನೆ ವೇಳೆ ಗೂಗಲ್ ಮ್ಯಾಪ್ ಬಳಕೆ ಮಾಡಲು ಮೊಬೈಲ್ ಹೊಲ್ಡರ್ ನಿಮ್ಮ ಅನುಕೂಲಕ್ಕೆ ಬರಲಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಎಲ್ ಇಡಿ ಆಕ್ಸಿಲರಿ ಲ್ಯಾಂಪ್

ಮಾರುಕಟ್ಟೆಯಲ್ಲಿ ಹಲವು ಶ್ರೇಣಿಯ ಎಲ್‌ಇಡಿ ಆಕ್ಸಿಲರಿ ಲ್ಯಾಂಪ್ ಲಭ್ಯವಿದ್ದು, ಕಾರಿನ ನೋಟವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸುರಕ್ಷತೆಯನ್ನು ಪ್ರದಾನ ಮಾಡಲಿದೆ. ಇದು ಬೇಗನೇ ಪ್ರತಿಫಲಿಸುವುದರಿಂದ ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ನೆರವಾಗಲಿದೆ.

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಮೊಬೈಲ್ ಏರ್ ಕಂಪ್ರೆಸರ್

ದೂರದ ಪ್ರಯಾಣದಲ್ಲಿ ಆಗುವ ತೊಂದರೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ನಿಮ್ಮ ಕಾರಿನ ಪ್ರಮುಖ ಆಕ್ಸೆಸರಿಗಳಲ್ಲಿ ಮೊಬೈಲ್ ಏರ್ ಕಂಪ್ರೆಸರ್ ಕೂಡಾ ಒಂದು.


ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ರಸ್ತೆ ದಾಟುತ್ತಿದ್ದ 11 ವರ್ಷದ ಬಾಲಕಿಗೆ ಕೆಟಿಎಂ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅವತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಅಪಘಾತ ಮಾಡಿದ ಬೈಕ್ ಸವಾರ ಸೇರಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಇತರೆ ಬೈಕ್‌ರ್‌ಗಳಿಗೂ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಬೆಂಗಳೂರಿನತ್ತ ಜಾಲಿ ರೈಡ್ ಮಾಡಲು ಹೋಗುತ್ತಿದ್ದ ಬೈಕ್ ಒಂದು ಅಪಘಾತವಾದ ಹಿನ್ನೆಲೆ ಸವಾರನು ಹಿಗ್ಗಾಮುಗ್ಗ ಥಳಿತಕ್ಕೆ ಒಳಾಗಿರುವ ಘಟನೆ ನಡೆದಿದ್ದು, ಕೆಟಿಎಂ ಆರ್‌ಸಿ 390 ಡಿಕ್ಕಿ ಹೊಡೆದ ಪರಿಣಾಮ ಬುಳ್ಳಹಳ್ಳಿಯ 11 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಬೆಂಗಳೂರು ಮೂಲದ ಬೈಕ್‌ಗಳ ತಂಡವೊಂದು ಕೋಲಾರದ ಅಂತರಗಂಗೆಗೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು, ಕುಡಿಯುವ ನೀರಿಗಾಗಿ ಹೆದ್ದಾರಿ ದಾಟುತ್ತಿದ್ದ ಬಾಲಕಿಗೆ ಕೆಟಿಎಂ ಆರ್‌ಸಿ 390 ರಭಸವಾಗಿ ಗುದ್ದಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಘಟನೆ ಬಳಿಕ ಸಾರ್ವಜನಿಕರು ಬೈಕ್ ಸವಾರನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದು, ಅಪಘಾತ ಮಾಡಿದ ಬೈಕ್ ಸವಾರರನ ಬೆಂಬಲಕ್ಕೆ ಬಂದ ಅವರ ಸ್ನೇಹಿತರ ಮೇಲೂ ಹಲ್ಲೆ ಮಾಡಲಾಗಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇನ್ನು ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿ ವೇಗವಾಗಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇದರಿಂದ ಸುಮಾರು 2 ಕಿ.ಮೀಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತಲ್ಲದೇ ಜಾಲಿ ರೈಡ್‌ಗೆ ಅಂತಾ ಬಂದಿದ್ದ ಸೂಪರ್ ಬೈಕ್‌ಗಳನ್ನು ನೆಲಕ್ಕೆ ಕೆಡವಿದ ಸ್ಥಳೀಯರು ಬಾಲಕಿ ಪ್ರಾಣ ತೆಗೆದ ಬೈಕ್‌ರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಘಟನೆ ನಡೆದು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಪೊಲೀಸರು ಸ್ಥಳೀಯರಿಂದ ಥಳಿತಕ್ಕೆ ಒಳಗಾಗಿದ್ದ ಬೈಕ್‌ರ್ ಅನ್ನು ವಶಕ್ಕೆ ಪಡೆದರಲ್ಲದೇ ಪ್ರಕರಣ ಕುರಿತು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇತ್ತ ಉದ್ರಿಕ್ತ ಸ್ಥಳೀಯರಿಂದ ಮತ್ತಿಬ್ಬರು ಬೈಕ್‌ರ್‌ಗಳ ದುಬಾರಿಯ ಬೆಲೆಯ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಮತ್ತು ಬಿಎಂಡಬ್ಲ್ಯು ಆರ್1200ಜಿಎಸ್ ಬೈಕ್‌ಗಳನ್ನು ತಡೆದು ಹಲ್ಲೆ ನಡೆಸಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಆದರೆ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೊಡಿಕೊಂಡಿರುವ ಕೆಟಿಎಂ ಮಾಲೀಕನು ಬಾಲಕಿಗೆ ಗುದ್ದಿದ್ದು ನಾನಲ್ಲ. ಇದೊಂದು 'ಹಿಟ್ ಆ್ಯಂಡ್ ರನ್' ಪ್ರಕರಣವಾಗಿದ್ದು, ಘಟನೆಯ ಸಂದರ್ಭದಲ್ಲಿ ಇದ್ದ ನನ್ನನ್ನು ಬಲಿಪಶು ಮಾಡಲಾಯ್ತು ಎಂದಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಈ ವೇಳೆ ಯಾರೊಬ್ಬರು ನನ್ನ ಮಾತನ್ನು ಕೇಳಲಿಲ್ಲ. ಬದಲಾಗಿ ಬಾಲಕಿ ಸಾವಿನಿಂದ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ನನ್ನ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇದಷ್ಟೇ ಅಲ್ಲದೇ ಘಟನೆಯ ಮಾರ್ಗದಲ್ಲಿ ಬಂದ ಕೆಲ ಸೂಪರ್ ಬೈಕ್ ಸವಾರರ ಮೇಲೂ ಹಲ್ಲೆ ನಡೆಸಲಾಯ್ತ ಎಂದಿದ್ದಾರೆ. ಹೀಗಾಗಿ ಈ ಘಟನೆಯು ಸಂಪೂರ್ಣ ಗೊಂದಲಮಯವಾಗಿದ್ದು ಪೂರ್ಣ ಪ್ರಮಾಣದ ತನಿಖೆ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ.

Read more on train off beat ರೈಲು
English summary
Ever Wondered What X Indicates At the End Of Trains. Click for Details...

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more