ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

Written By:
Recommended Video - Watch Now!
Bangalore Bike Accident At Chikkaballapur Near Nandi Upachar - DriveSpark

ರಸ್ತೆ ದಾಟುತ್ತಿದ್ದ 11 ವರ್ಷದ ಬಾಲಕಿಗೆ ಕೆಟಿಎಂ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅವತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಅದೇ ಹೆದ್ದಾರಿಯಲ್ಲಿ ಬರುತ್ತಿದ್ದ ಇತರೆ ಬೈಕ್‌ರ್‌ಗಳಿಗೂ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಬೆಂಗಳೂರಿನತ್ತ ಜಾಲಿ ರೈಡ್ ಮಾಡಲು ಹೋಗುತ್ತಿದ್ದ ಬೈಕ್ ಒಂದು ಅಪಘಾತವಾದ ಹಿನ್ನೆಲೆ ಸವಾರನು ಹಿಗ್ಗಾಮುಗ್ಗ ಥಳಿತಕ್ಕೆ ಒಳಾಗಿರುವ ಘಟನೆ ನಡೆದಿದ್ದು, ಕೆಟಿಎಂ ಆರ್‌ಸಿ 390 ಡಿಕ್ಕಿ ಹೊಡೆದ ಪರಿಣಾಮ ಬುಳ್ಳಹಳ್ಳಿಯ 11 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಬೆಂಗಳೂರು ಮೂಲದ ಬೈಕ್‌ಗಳ ತಂಡವೊಂದು ಕೋಲಾರದ ಅಂತರಗಂಗೆಗೆ ತೆರಳುವಾಗ ಈ ಅಪಘಾತ ಸಂಭವಿಸಿದ್ದು, ಕುಡಿಯುವ ನೀರಿಗಾಗಿ ಹೆದ್ದಾರಿ ದಾಟುತ್ತಿದ್ದ ಬಾಲಕಿಗೆ ಕೆಟಿಎಂ ಆರ್‌ಸಿ 390 ರಭಸವಾಗಿ ಗುದ್ದಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಘಟನೆ ಬಳಿಕ ಸಾರ್ವಜನಿಕರು ಬೈಕ್ ಸವಾರನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದು, ಅಪಘಾತ ಮಾಡಿದ ಬೈಕ್ ಸವಾರರನ ಬೆಂಬಲಕ್ಕೆ ಬಂದ ಅವರ ಸ್ನೇಹಿತರ ಮೇಲೂ ಹಲ್ಲೆ ಮಾಡಲಾಗಿದೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇನ್ನು ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿ ವೇಗವಾಗಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Trending On DriveSpark Kannada:

ಎಂಟು ಜನರ ಬಲಿ ಪಡೆಯಿತು ಅವಧಿ ಮುಗಿದ ಐರಾವತ ಬಸ್

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇದರಿಂದ ಸುಮಾರು 2 ಕಿ.ಮೀಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತಲ್ಲದೇ ಜಾಲಿ ರೈಡ್‌ಗೆ ಅಂತಾ ಬಂದಿದ್ದ ಸೂಪರ್ ಬೈಕ್‌ಗಳನ್ನು ನೆಲಕ್ಕೆ ಕೆಡವಿದ ಸ್ಥಳೀಯರು ಬಾಲಕಿ ಪ್ರಾಣ ತೆಗೆದ ಬೈಕ್‌ರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಘಟನೆ ನಡೆದು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಪೊಲೀಸರು ಸ್ಥಳೀಯರಿಂದ ಥಳಿತಕ್ಕೆ ಒಳಗಾಗಿದ್ದ ಬೈಕ್‌ರ್ ಅನ್ನು ವಶಕ್ಕೆ ಪಡೆದರಲ್ಲದೇ ಪ್ರಕರಣ ಕುರಿತು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇತ್ತ ಉದ್ರಿಕ್ತ ಸ್ಥಳೀಯರಿಂದ ಮತ್ತಿಬ್ಬರು ಬೈಕ್‌ರ್‌ಗಳ ದುಬಾರಿಯ ಬೆಲೆಯ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಮತ್ತು ಬಿಎಂಡಬ್ಲ್ಯು ಆರ್1200ಜಿಎಸ್ ಬೈಕ್‌ಗಳನ್ನು ತಡೆದು ಹಲ್ಲೆ ನಡೆಸಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಆದರೆ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೊಡಿಕೊಂಡಿರುವ ಕೆಟಿಎಂ ಮಾಲೀಕನು ಬಾಲಕಿಗೆ ಗುದ್ದಿದ್ದು ನಾನಲ್ಲ. ಇದೊಂದು 'ಹಿಟ್ ಆ್ಯಂಡ್ ರನ್' ಪ್ರಕರಣವಾಗಿದ್ದು, ಘಟನೆಯ ಸಂದರ್ಭದಲ್ಲಿ ಇದ್ದ ನನ್ನನ್ನು ಬಲಿಪಶು ಮಾಡಲಾಯ್ತು ಎಂದಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಈ ವೇಳೆ ಯಾರೊಬ್ಬರು ನನ್ನ ಮಾತನ್ನು ಕೇಳಲಿಲ್ಲ. ಬದಲಾಗಿ ಬಾಲಕಿ ಸಾವಿನಿಂದ ರೊಚ್ಚಿಗೆದ್ದಿದ್ದ ಗ್ರಾಮಸ್ಥರು ನನ್ನ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್— ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಇದಷ್ಟೇ ಅಲ್ಲದೇ ಘಟನೆಯ ಮಾರ್ಗದಲ್ಲಿ ಬಂದ ಕೆಲ ಸೂಪರ್ ಬೈಕ್ ಸವಾರರ ಮೇಲೂ ಹಲ್ಲೆ ನಡೆಸಲಾಯ್ತ ಎಂದಿದ್ದಾರೆ. ಹೀಗಾಗಿ ಈ ಘಟನೆಯು ಸಂಪೂರ್ಣ ಗೊಂದಲಮಯವಾಗಿದ್ದು ಪೂರ್ಣ ಪ್ರಮಾಣದ ತನಿಖೆ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ.

Trending On DriveSpark Kannada:

ಕಾನೂನು ಬಾಹಿರ ಬೈಕ್ ಮಾಡಿಫೈಗೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರಿಂದ ಹೊಸ ಅಸ್ತ್ರ..

ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

Read more on accident off beat
English summary
KTM RC390 Crashes Into A Child — Mob Thrashes Bikers And Destroys Bikes.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark