ಐಷಾರಾಮಿ ಕಾರುಗಳ ಮೇಲೆ ಸೆಸ್ ಹೆಚ್ಚಳ- ಬೆಲೆ ಏರಿಕೆ ಮಾಡಿದ ಇಸುಝು
ಜಿಎಸ್‌ಟಿ ಸೆಸ್‌ನ್ನು ಶೇ.2 ರಿಂದ ಶೇ.7ಕ್ಕೆ ಏರಿಕೆಯಾಗಿರುವ ಹಿನ್ನೆಲೆ ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ಬೆಲೆ ಹೆಚ್ಚಳವಾಗಿದ್ದು, ಇಸುಝು ಕೂಡಾ ತನ್ನ ಪ್ರಮುಖ ಕಾರು ಉತ್ಪನ್ನಗಳ ಬೆಲೆಯನ್ನು ಏರಿಕೆ ಹೊಸ ದರ ಪಟ್ಟಿ ಬಿಡುಗಡೆಗೊಳಿಸಿದೆ.
ದುಬಾರಿ ಮತ್ತು ಐಷಾರಾಮಿ ಕಾರುಗಳ ಮೇಲಿನ ಜಿಎಸ್‌ಟಿ ಸೆಸ್‌ನ್ನು ಶೇ.2 ರಿಂದ ಶೇ.7ಕ್ಕೆ ಏರಿಕೆಯಾಗಿರುವ ಹಿನ್ನೆಲೆ ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ಬೆಲೆ ಹೆಚ್ಚಳವಾಗಿದ್ದು, ಇಸುಝು ಕೂಡಾ ತನ್ನ ಪ್ರಮುಖ ಕಾರು ಉತ್ಪನ್ನಗಳ ಬೆಲೆಯನ್ನು ಏರಿಕೆ ಹೊಸ ದರ ಪಟ್ಟಿ ಬಿಡುಗಡೆಗೊಳಿಸಿದೆ.

ಈ ಹಿಂದೆ ಐಷಾರಾಮಿ, ಮಧ್ಯಮ ಗಾತ್ರದ ಎಸ್‌ಯುವಿ ಮತ್ತು ಸೆಡಾನ್ ಕಾರುಗಳ ಮೇಲಿನ ಜಿಎಸ್‌ಟಿ ಸೆಸ್‌ನ್ನು ಶೇ.25ಕ್ಕೆ ಏರಿಕೆ ಮಾಡಲು ಸುಗ್ರೀವಾಜ್ಞೆ ಹೊರಡಿಸಿದ್ದ ಕೇಂದ್ರ ಸಚಿವ ಸಂಪುಟ ಸಭೆಯು ಇದೀಗ ಸೆಸ್ ಪ್ರಮಾಣವನ್ನು ಹೆಚ್ಚಳ ಮಾಡಿದ್ದು, ಈ ಹಿಂದೆ ಇದ್ದ ಸೆಸ್ ಪ್ರಮಾಣವು ಶೇ.15ರಿಂದ ಶೇ.22ಕ್ಕೆ ಏರಿಕೆಯಾಗಲಿದೆ.

ಕಾರು ಮಾದರಿಗಳಿಗೆ ಅನುಗುಣವಾಗಿ ಶೇ.2ರಿಂದ ಶೇ.7ರ ವರೆಗೆ ಸೆಸ್ ಪ್ರಮಾಣವು ಏರಿಕೆಯಾಗಿದ್ದು, ಹೊಸ ಸೆಸ್ ಪ್ರಕಾರ ಇಸುಝು ಎಂಯು-ಎಕ್ಸ್ ಬೆಲೆಯು ರೂ.23.47 ಲಕ್ಷದಿಂದ ರೂ.25.43 ಲಕ್ಷಕ್ಕೆ ನಿಗದಿಯಾಗಿದೆ.

ಇನ್ನು ಆಪ್ ರೋಡಿಂಗ್ ಯುಟಿಲಿಟಿ ಆವೃತ್ತಿಯಾದ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯ ಬೆಲೆಯು ರೂ.12.11 ಲಕ್ಷದಿಂದ ರೂ.13 ಲಕ್ಷಕ್ಕೆ ಏರಿಕೆಯಾಗಿದ್ದು, ಕೆಲವು ವಿಶೇಷ ರಿಯಾಯ್ತಿ ಹಿನ್ನೆಲೆ ಆಂಧ್ರಪ್ರದೇಶದಲ್ಲಿ ಇಸುಝು ಬೆಲೆಗಳನ್ನು ಕಡಿತಗೊಳಿಸಲಾಗಿದೆ.

ಸದ್ಯ ಭಾರತದಲ್ಲಿ ಪ್ರತಿವರ್ಷ 50 ಸಾವಿರ ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಇಸುಝು, ಬೆಲೆ ಏರಿಕೆ ಮಧ್ಯೆಯು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾರಾಟ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ.

ಇದರ ಜೊತೆಗೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಬೃಹತ್ ಯೋಜನೆಯೊಂದನ್ನು ಹೊಂದಿರುವ ಇಸುಝು ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಪ್ರಯಾಣಿಕ ವಾಹನಗಳನ್ನು ಪರಿಚಯಿಸುವ ಮುಂದಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಉತ್ತಮ ಕಾರ್ಯಕ್ಷಮತೆಯುಳ್ಳ ಉತ್ಪನ್ನಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಇಸುಝುಗೆ ಸೆಸ್ ಏರಿಕೆ ಪರಿಣಾಮ ಬೀರುವುದಿಲ್ಲವಾದರೂ ಮುಂಬರುವ ದಿನಗಳಲ್ಲಿನ ಮಾರುಕಟ್ಟೆ ಏರುಪೇರು ಕಾರು ಮಾರಾಟದ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುವುದನ್ನು ಕಾಯ್ದುನೋಡಬೇಕಿದೆ.


Click it and Unblock the Notifications