ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

Written By:

ಬ್ರಿಟಿಷ್ ವಾಹನ ತಯಾರಕ ಕಂಪೆನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸಲು ಹೊಸ ಐಷಾರಾಮಿ ಕಾರು ಬ್ರಾಂಡ್ ಖರೀದಿಸಲು ಯೋಜನೆ ರೂಪಿಸಿದೆ.

ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

ಯುಕೆ ಮೂಲದ ಬಲಿಷ್ಠ ವಾಹನ ತಯಾರಕ ಕಂಪನಿಯು ತನ್ನ ಮೂಲ ಕಂಪನಿಯಾದ ಟಾಟಾ ಮೋಟಾರ್ಸ್ ಸಂಸ್ಥೆಯ ಸಹಕಾರದೊಂದಿಗೆ ಹೊಸ ಪ್ರೀಮಿಯಂ ಐಷಾರಾಮಿ ಬ್ರಾಂಡನ್ನು ಖರೀದಿಸುವುದಕ್ಕೆ ಈಗಾಗಲೇ ಸಿದ್ಧತೆ ನೆಡೆಸಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

ಕಂಪನಿಯ ಈ ವಿಭಾಗಕ್ಕೆ ಹತ್ತಿರವಿರುವ ಮೂಲಗಳ ಪ್ರಕಾರ, ಎಲೆಕ್ಟ್ರಿ‌ಫಿಕೇಷನ್ ಮತ್ತು ಆಟಾನಮಸ್ ಡ್ರೈವಿಂಗ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಬೇಕೆಂಬ ಆಶಯವನ್ನು ಹೊಂದಿದೆ ಎನ್ನಲಾಗಿದೆ.

ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

2020ರ ನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ಆಟಾನಮಸ್ ಡ್ರೈವಿಂಗ್ ತಂತ್ರಜ್ಞಾನವು ಜೆಎಲ್ಆರ್ ಕಂಪನಿಯ ಉತ್ಪನ್ನಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನುವ ಕಾರಣಕ್ಕೆ ಈ ಯೋಜನೆಗೆ ಕಂಪನಿ ಮುಂದಾಗಿದೆ ಎನ್ನುವುದನ್ನು ನಾವು ಗಮನಿಸಬಹುದಾಗಿದೆ.

ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

2020ರಿಂದ ತನ್ನ ಜಾಗತಿಕ ಉತ್ಪನ್ನಗಳ ಪೋರ್ಟ್‌ಪೋಲಿಯೊದಲ್ಲಿ ಇರುವಂತಹ ಪ್ರತಿಯೊಂದು ವಾಹನವನ್ನು ವಿದ್ಯುನ್ಮಾನದ ರೂಪಾಂತರವನ್ನಾಗಿ ಮಾರ್ಪಾಡು ಮಾಡುವುದಾಗಿ ಕಂಪನಿಯು ಈಗಾಗಲೇ ಪ್ರಕಟಿಸಿದೆ.

ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

ಆಟಾನಮಸ್ ಡ್ರೈವಿಂಗ್ ತಂತ್ರಜ್ಞಾನದ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಲಿಫ್ಟ್ ಕಂಪನಿ ಜೊತೆಗೂಡಿ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ತನ್ನ ಜಾಗತಿಕ ಮಾರಾಟವನ್ನು ಹೆಚ್ಚಿಸಲು ರೇಂಜ್ ರೋವರ್ ವೆಲರ್, ಜಗ್ವಾರ್ ಎಫ್-ಪೇಸ್ ಮತ್ತು ಇ-ಪೇಸ್‌ನಂತಹ ವಿವಿಧ ಮಾದರಿಗಳನ್ನು ಬಿಡುಗಡೆ ಮಾಡಿತ್ತು.

ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಟಾಟಾ ಮೋಟಾರ್ಸ್ ಕಂಪನಿ ತನ್ನ ಜೆಎಲ್ಆರ್ ಕಂಪನಿಯಲ್ಲಿ ಹೂಡಿಕೆ ಮಾಡಿದೆ ಹಾಗು ಇತ್ತೀಚಿಗೆ ಚೀನಾದಲ್ಲಿ ತನ್ನ ಹೊಸ ಘಟಕವನ್ನು ಉದ್ಘಾಟಿಸಿದೆ. ಈ ಉತ್ಪಾದನಾ ಘಟಕವು 2018ರಲ್ಲಿ ಅಂದರೆ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಸ್ಲೊವಾಕಿಯಾದಲ್ಲಿ ಮತ್ತೊಂದು ಉತ್ಪಾದನಾ ಸ್ಥಾವರ ನಿರ್ಮಾಣಕ್ಕೆ ಕೈಹಾಕಿದೆ.

ಹೊಸ ಐಷಾರಾಮಿ ಬ್ರಾಂಡ್ ಖರೀದಿಸಲು ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್

ಭಾರತದಲ್ಲಿ, ಜೆಎಲ್ಆರ್ ಕಂಪನಿ ಇತ್ತೀಚೆಗೆ ರೇಂಜ್ ರೋವರ್ ಎಸ್‌ವಿ ಆಟೋಬೈಯೋಗ್ರಫಿ ಡೈನಾಮಿಕ್, ಜಾಗ್ವಾರ್ ಎಫ್-ಟೈಪ್ ಎಸ್‌ವಿಆರ್ ಮತ್ತು ಎಡಬ್ಲ್ಯೂಡಿ ಮತ್ತು ಲ್ಯಾಂಡ್ ರೋವರ್ ಡಿಸ್ಕವರಿಯಂತಹ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡಿತ್ತು. 2017ರ ಅಂತ್ಯದ ವೇಳೆಗೆ ದೇಶದಲ್ಲಿ ವೆಲಾರ್ ಎಸ್‌ಯುವಿಯನ್ನು ಕೂಡಾ ಪ್ರಾರಂಭಿಸಲಿದೆ.

English summary
British automaker Jaguar Land Rover is looking to buy a new luxury car brand to tackle the rising competition in the global automobile industry.
Story first published: Tuesday, September 26, 2017, 16:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark