ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಕ್ಸ್ಎಫ್ ಐಷಾರಾಮಿ ಸೆಡಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಜಾಗ್ವಾರ್ ಎಕ್ಸ್ಎಫ್ (Jaguar XF) ಐಷಾರಾಮಿ ಸೆಡಾನ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.71.60 ಲಕ್ಷಗಳಾಗಿದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಹೊಸ ಜಾಗ್ವಾರ್ ಎಕ್ಸ್ಎಫ್ ಸೆಡಾನ್‌ನ ಫೇಸ್‌ಲಿಫ್ಟ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಆರ್-ಡೈನಾಮಿಕ್ ಮತ್ತು ಎಸ್ ಎಂದು ಕರೆಯಲ್ಪಡುವ ಎರಡು ರೂಪಂತರಗಳಲ್ಲಿ ಲಭ್ಯವಿರಲಿದೆ. ಈ ಜಾಗ್ವಾರ್ ಎಕ್ಸ್ಎಫ್ ಸೆಡಾನ್ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಐಷಾರಾಮಿ ಸೆಡಾನ್ ಕೇವಲ 6.5 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸೆಡಾನ್ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಪೆಟ್ರೋಲ್ ಎಂಜಿನ್‌ನ ಹೊರತಾಗಿ, ಜಾಗ್ವಾರ್ ಬಿಎಸ್6 ಪ್ರೇರಿತ ಡೀಸೆಲ್ ಎಂಜಿನ್ ಅನ್ನು ಸಹ ತಂದಿದೆ, ಈ ಹಿಂದೆ ಬಿಎಸ್6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಸ್ಥಗಿತಗೊಳಿಸಲಾಗಿತ್ತು. ಈ ಡೀಸೆಲ್ ಎಂಜಿನ್ 201 ಬಿಹೆಚ್‍ಪಿ ಪವರ್ ಮತ್ತು 430 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಈ ಜಾಗ್ವಾರ್ ಎಕ್ಸ್ಎಫ್ ಡೀಸೆಲ್ ಮಾದರಿಯು ಕೇವಲ 7.6 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 235 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದರ ಡೀಸೆಲ್ ರೂಪಾಂತರವು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಪಡೆಯುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಟ್ರಾನ್ಸ್‌ಮಿಷನ್ ಕೆಲಸವನ್ನು ಜಾಗ್ವಾರ್‌ನ ಎಂಟು-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನಿರ್ವಹಿಸುತ್ತದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಟಾಟಾ ಮೋಟಾರ್ಸ್ ಒಡೆತನದ ಬ್ರಿಟಿಷ್ ಐಷಾರಾಮಿ ಕಾರು ತಯಾರಕರು 2021ರ ಜಾಗ್ವಾರ್ ಎಕ್ಸ್ಎಫ್ ಕಾರಿನಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಮಾಡಿದ್ದಾರೆ. ಈ ಬದಲಾವಣೆಗಳು ಗ್ರಿಲ್ನಲ್ಲಿ ಗಮನಾರ್ಹವಾಗಿವೆ. ಇದು ಸ್ವಲ್ಪಮಟ್ಟಿಗೆ ಗಾತ್ರವನ್ನು ಹೆಚ್ಚಿಸಿದೆ ಮತ್ತು ಇದು ಸ್ಪೋರ್ಟಿಯಾಗಿ ಕಾಣುವಂತೆ ಮಾಡಲು ಕ್ರೋಮ್ ಔಟ್‌ಲೈನ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಈ ಹೊಸ ಜಾಗ್ವಾರ್ ಎಕ್ಸ್ಎಫ್ ಕಾರಿನಲ್ಲಿ ಎಲ್ಇಡಿ ಡಿಆರ್ಎಲ್ ಗಳ ಜೊತೆಗೆ ಹೊಸ ಎಲ್ಇಡಿ ಹೆಡ್‌ಲೈಟ್ ಯುನಿಟ್ ಗಳನ್ನು ಸಹ ಪಡೆಯುತ್ತದೆ. ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹೊಸ ಗ್ರಾಫಿಕ್ ವಿನ್ಯಾಸದೊಂದಿಗೆ ಟ್ವೀಕ್ ಮಾಡಲಾಗಿದೆ ಮತ್ತು ಅದನ್ನು ನಯವಾಗಿ ಕಾಣುವಂತೆ ಮಾಡಲಾಗಿದೆ. ಬಂಪರ್‌ಗಳು ಸ್ವಲ್ಪ ನವೀಕರಿಸಲಾಗಿದೆ. ಅದು ಈಗ ದೊಡ್ಡ ಏರ್ ಇನ್ ಟೆಕ್ ಅನ್ನು ಹೊಂದಿದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಈ ಹೊಸ ಜಾಗ್ವಾರ್ ಎಕ್ಸ್ಎಫ್ ಕಾರು ಒಳಭಾಗದಲ್ಲಿ 11.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬದಲಾವಣೆಗಳಿಗೆ ಒಳಗಾಗಿದೆ ಮತ್ತು ಈಗ ಇತ್ತೀಚಿನ ಪಿವಿ ಪ್ರೊನೊಂದಿಗೆ ಲೋಡ್ ಮಾಡಲಾಗಿದೆ ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುತ್ತದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಇದರೊಂದಿಗೆ ಈ ಹೊಸ ಐಷಾರಾಮಿ ಕಾರಿನಲ್ಲಿ ಸ್ಟೀಯರಿಂಗ್ ವ್ಹೀಲ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸಹ ಪಡೆಯುತ್ತದೆ. ಇನ್ನು ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಇನ್ನು ಜಾಗ್ವಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ಬೆಲೆಯನ್ನು ಇತ್ತೀಚೆಗೆ ಘೋಷಿಸಿತ್ತು. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್) ಪರ್ಫಾಮೆನ್ಸ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.51 ಕೋಟಿಯಾಗಿದೆ.ಇದರ ಜೊತೆಗೆ ಜಾಗ್ವಾರ್ ಕಂಪನಿಯು ಈ ಹೊಸ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ದೇಶದಲ್ಲಿ ವಿತರಣೆಯನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಭಾರತದಲ್ಲಿ ಇತ್ತೀಚೆಗೆ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧಿಕೃತವಾಗಿ ಹೊಸ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿತ್ತು.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಜಾಗ್ವಾರ್ ಎಫ್-ಪೇಸ್ ಎಸ್‍ಯುವಿಯ ಪರ್ಫಾಮೆನ್ಸ್ ಎಸ್‍ಯುವಿಯು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮಾದರಿಯಾಗಿದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಕೇವಲ 0.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿ 286 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಐಷಾರಾಮಿ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಈ ಪರ್ಫಾಮೆನ್ಸ್ ಎಸ್‌ಯುವಿಯ ಪವರ್ ಕೂಡ ಹೆಚ್ಚಾಗಿದೆ. ಐಷಾರಾಮಿ ಪರ್ಫಾಮೆನ್ಸ್ ಎಸ್‍ಯುವಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ, ಇನ್ನು ಜಾಗ್ವಾರ್ ಎಫ್-ಪೇಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್3 ಎಂ ಮತ್ತು ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಎಸ್‍ಯುವಿಗಳುಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ 2021ರ Jaguar XF ಐಷಾರಾಮಿ ಕಾರು ಬಿಡುಗಡೆ

ಇನ್ನು ಜಾಗ್ವಾರ್ ಕಂಪನಿಯು ತನ್ನ ಎಕ್ಸ್ಎಫ್ ಸೆಡಾನ್ ಕಾರು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2021ರ ಜಾಗ್ವಾರ್ ಎಕ್ಸ್ಎಫ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 5 ಸೀರಿಸ್, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಆಡಿ ಎ6 ಮತ್ತು ಇತ್ತೀಚೆಗೆ ಬಿಡುಗಡೆಯಾದ ವೊಲ್ವೋ ಎಸ್90 ಸೆಡಾನ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New 2021 jaguar xf luxury sedan launched price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X