ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ಬೆಲೆಯನ್ನು ಘೋಷಿಸಿದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್(Jaguar F-Pace SVR) ಪರ್ಫಾಮೆನ್ಸ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.51 ಕೋಟಿಯಾಗಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಇದರ ಜೊತೆಗೆ ಜಾಗ್ವಾರ್ ಕಂಪನಿಯು ಈ ಹೊಸ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ದೇಶದಲ್ಲಿ ವಿತರಣೆಯನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಭಾರತದಲ್ಲಿ ಇತ್ತೀಚೆಗೆ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧಿಕೃತವಾಗಿ ಹೊಸ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿತ್ತು. ಜಾಗ್ವಾರ್ ಎಫ್-ಪೇಸ್ ಎಸ್‍ಯುವಿಯ ಪರ್ಫಾಮೆನ್ಸ್ ಎಸ್‍ಯುವಿಯು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮಾದರಿಯಾಗಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಮೊದಲಿಗೆ 2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್‍ಯುವಿಯು ಇತರ ಜಾಗ್ವಾರ್ ಮಾದರಿಗಳಂತೆ ಐಷಾರಾಮಿ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ಮುಂಭಾಗ ಮುಂಭಾಗದ ಬಂಪರ್ ಅನ್ನು ಅಗ್ರೇಸಿವ್ ಲುಕ್ ಆಗಿ ಕಾಣುವ ರೀತಿಯ ವಿನ್ಯಾಸಗೊಳಿಸಲಾಗಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಇದರ ಏರ್ ಇನ್ ಟೆಕ್ ಗಳು ದೊಡ್ಡದಾಗಿದೆ. ಇದು ಇದು ಬ್ರೇಕ್‌ಗಳನ್ನು ಕೂಲ್ ಆಗಿ ಇರಸಲು ಸಹಾಯ ಮಾಡುತ್ತದೆ. 2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಹೊಸ ಎಲ್ಇಡಿ ಹೆಡ್‌ಲೈಟ್‌ಗಳೊಂದಿಗೆ ಪಿಕ್ಸೆಲ್ ಎಲ್ಇಡಿ ತಂತ್ರಜ್ಞಾನವನ್ನು ಆಯ್ಕೆಯಾಗಿ ನೀಡಲಾಗಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಇನ್ನು ಈ ಪರ್ಫಾಮೆನ್ಸ್ ಎಸ್‍ಯುವಿಯು ನಯವಾದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ. ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು ಏರೋ ಪ್ಯಾಕೇಜ್ ಅನ್ನು ಸಹ ಹೊಂದಿದೆ, ಇದು ಬ್ರ್ಯಾಂಡ್‌ನ ಮೋಟಾರ್‌ಸ್ಪೋರ್ಟ್ ವಿಭಾಗದಿಂದ ಪ್ರೇರಿತವಾಗಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಈ ಹೊಸ ಜಾಗ್ವಾರ್ ಪರ್ಫಾಮೆನ್ಸ್ ಎಸ್‍ಯುವಿ 22 ಇಂಚಿನ ಹೊಸ ಡ್ಯುಯಲ್-ಟೋನ್ ಗ್ಲೋಸ್ ನಾರ್ವಿಕ್ ಬ್ಲ್ಯಾಕ್ ವ್ಹೀಲ್ ಗಳನ್ನು ಹೊಂದಿವೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಹೊಸ ವ್ಜೀಲ್ ಗಳೊಂದಿಗೆ ಅಗ್ರೇಸಿವ್ ಆಗಿ ಕಾಣುವ ಫ್ರಂಟ್ ಎಂಡ್ ಹೊಂದಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯಲ್ಲಿ ಬ್ರ್ಯಾಂಡ್‌ನ 5.0-ಲೀಟರ್ ಸೂಪರ್‌ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 543 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು 20 ಎನ್ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ ಕೇವಲ 0.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿ 286 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯಲ್ಲಿ ಡೈನಾಮಿಕ್, ಇಕೋ, ರೈನ್ ಮತ್ತು ಐಸ್-ಸ್ನೊ ಎಂಬ ಡ್ರೈವ್ ಮೋಡ್ ಗಳನ್ನು ಹೊಂದಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಇನ್ನು ಈ ಎಸ್‍ಯುವಿಯಲ್ಲಿ ವೆಹಿಕಲ್ ಹೋಲ್ಡ್" ಸಿಸ್ಟಂ ಸಹ ಹೊಂದಿದೆ, ಇದು ಹಿಲ್-ಹೋಲ್ಡ್ ಸಿಸ್ಟಂಗಿಂತ ಹೆಚ್ಚು ಸುಗಮವಾಗಿದೆ ಎಂದು ಹೇಳಲಾಗುತ್ತದೆ. 2021ರ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಮತ್ತು 11.4- ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಪಿವಿ ಪ್ರೊ ಇನ್ಫೋಟೈನ್‌ಮೆಂಟ್, ಸಾಫ್ಟ್‌ವೇರ್-ಓವರ್-ಏರ್ ಸಾಮರ್ಥ್ಯ ಮತ್ತು ಡ್ರೈವಿಂಗ್ ಅಸಿಸ್ಟ್ ಫೀಚರ್ ಗಳನ್ನು ಹೊಂದಿರಲಿದೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಜಾಗ್ವಾರ್ ಕಂಪನಿಯು ಐ-ಪೇಸ್ ಬ್ಲ್ಯಾಕ್(ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ವಿದೇಶಗಳಲ್ಲಿ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಲಾಯಿತು. ಎಸ್‌ಇ ಮತ್ತು ಹೆಚ್‌ಎಸ್‌ಇ ರೂಪಾಂತರಗಳಿರುವ ಐ-ಪೇಸ್ ಸರಣಿಯಲ್ಲಿ ಜಾಗ್ವಾರ್ ಹೊಸ ಬ್ಲ್ಯಾಕ್ ಎಡಿಷನ್ ಅನ್ನು ಪಡೆದುಕೊಂಡಿದೆ. ಈ ಹೊಸ ಜಾಗ್ವಾರ್ ಐ-ಪೇಸ್ ಬ್ಲ್ಯಾಕ್ ಎಡಿಷನ್ ಕಾರಿನಲ್ಲಿ ಬ್ಲ್ಯಾಕ್ ಪ್ಯಾಕೇಜ್ ಗ್ರಿಲ್, ಮಿರರ್ ಕ್ಯಾಪ್ಸ್, ವಿಂಡೋ ಸರೌಂಡ್ ಮತ್ತು ಹಿಂಭಾಗದ ಬ್ಯಾಡ್ಜ್‌ಗಳನ್ನು ಸೇರಿವೆ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಇನ್ನು ಈ ಹೊಸ ಮಾದರಿಯಲ್ಲಿ 5-ಸ್ಪೋಕ್ ವ್ಹೀಲ್ ಗಳು ಸಹ ಬ್ಲ್ಯಾಕ್ ಬಣ್ಣದಲ್ಲಿದೆ. ಇನ್ನು ಒಳಭಾಗದಲ್ಲಿ ಎಬೊನಿ ಲೆದರ್ ಸ್ಪೋರ್ಟ್ಸ್ ಸೀಟುಗಳು ಮತ್ತು ಹೊಂದಾಣಿಕೆಯ ಹೆಡ್‌ಲೈನರ್ ಇವೆ. ಕ್ಯಾಬಿನ್ ಟ್ರಿಮ್ ಬ್ಲ್ಯಾಕ್ ಬಣ್ಣದಲ್ಲಿ ಒಳಗೊಂಡಿದೆ. ಈ ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ ಪನರೋಮಿಕ್ ಸನ್‌ರೂಫ್ ಒಳಗೊಂಡಿದೆ ಇನ್ನು ಈ ಕಾರಿನ ಒಳಭಾಗವು ಕೂಡ ಬ್ಲ್ಯಾಕ್ ಬಣ್ಣದಲ್ಲಿದೆ. ಐ-ಪೇಸ್ ಬ್ಲ್ಯಾಕ್ ಎಡಿಷನ್ ಮಾದರಿಯ ವಿನ್ಯಾಸದಲ್ಲಿ ಬ್ಲ್ಯಾಕ್ ಅಂಶಗಳನ್ನು ನೀಡಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಹೊಸ F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆಯನ್ನು ಆರಂಭಿಸಿದ Jaguar

ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಎಸ್‍ಯುವಿಯು ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿದೆ. ಈ ಪರ್ಫಾಮೆನ್ಸ್ ಎಸ್‌ಯುವಿಯ ಪವರ್ ಕೂಡ ಹೆಚ್ಚಾಗಿದೆ. ಇನ್ನು ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್3 ಎಂ ಮತ್ತು ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಎಸ್‍ಯುವಿಗಳುಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New jaguar f pace svr suv deliveries commence price announced details
Story first published: Monday, October 4, 2021, 18:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X