ಹೊಸ ಬ್ರಾಂಡ್ ಅಡಿಯಲ್ಲಿ ಬಲಿಷ್ಠ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿದೆ ಜಾಗ್ವಾರ್
ಬ್ರಿಟಿಷ್ ವಾಹನ ತಯಾರಕ ಜಗ್ವಾರ್ ಲ್ಯಾಂಡ್ ರೋವರ್ 2020ರ ಹೊತ್ತಿಗೆ ತನ್ನ ಹೊಸ ರೋಡ್ ರೋವರ್ ಮೊನಿಕರ್ನ ಹೆಸರಿನ ಕುಟುಂಬದ ಹೆಸರಿನ ಅಡಿಯಲ್ಲಿ ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ.
ಬ್ರಿಟಿಷ್ ವಾಹನ ತಯಾರಕ ಜಗ್ವಾರ್ ಲ್ಯಾಂಡ್ ರೋವರ್ 2020ರ ಹೊತ್ತಿಗೆ ತನ್ನ ಹೊಸ ರೋಡ್ ರೋವರ್ ಮೊನಿಕರ್ನ ಹೆಸರಿನ ಕುಟುಂಬದ ಹೆಸರಿನ ಅಡಿಯಲ್ಲಿ ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ.

ಎಲ್ಲಾ ರೀತಿಯ ಭೂಪ್ರದೇಶದ ಸಾಮರ್ಥ್ಯಗಳನ್ನು ಮತ್ತು ಐಷಾರಾಮಿ ಒಳಾಂಗಣವನ್ನು ಪಡೆದ ರೋಡ್ ರೋವರ್ ಕುಟುಂಬದ ಮೊದಲ ಮಾದರಿಯು ಹೊಚ್ಚ ಹೊಸ ತಂತ್ರಜ್ಞಾನ ಪಡೆದ ಎಲೆಕ್ಟ್ರಿಕ್ ವಾಹನವಾಗಿರಲಿದ್ದು, ಈ ಕಾರುಗಳು ತನ್ನ ಶ್ರೇಣಿಯ ಮರ್ಸಿಡಿಸ್-ಬೆಂಜ್ ಎಸ್-ಕ್ಲಾಸ್‌ನಂತಹ ಕಾರುಗಳೊಂದಿಗೆ ಪ್ರತಿಸ್ಪರ್ಧೆ ನೆಡೆಸಲಿವೆ.

ರೋಡ್ ರೋವರ್ ಮೊನಿಕರ್ನ ಹೆಸರಿನ ಅಡಿಯಲ್ಲಿ ಪರಿಚಯಿಸುವ ಕಾರುಗಳು ಬಲಿಷ್ಠ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿರಲಿದ್ದು, ಈ ಕಾರಣದಿಂದ ಪ್ರಭಾವಶಾಲಿ ಕಾರ್ಯಕ್ಷಮತೆ ಮತ್ತು ನಿರ್ವಹಣೆಯನ್ನು ನೋಡಬಹುದಾಗಿದೆ.

ವರದಿಯ ಪ್ರಕಾರ, ಹೊಸ ರೋಡ್ ರೋವರ್ ಮಾದರಿಯ ಕಾರುಗಳು 480 ಕಿ.ಮೀ ಚಾಲನಾ ವ್ಯಾಪ್ತಿಯನ್ನು ಹೊಂದಿರಲಿದ್ದು, ಕೇವಲ ಐದು ಸೆಕೆಂಡ್‌ಗಳಲ್ಲಿ 60 ಕಿ.ಮೀ ವೇಗ ಪಡೆದುಕೊಳ್ಳಲಿವೆ.

ಹೊಸ ರೋಡ್ ರೋವರ್ ಕಾರಿನ ವಿನ್ಯಾಸ ವೆಲಾರ್‌ನಂತೆಯೇ ಇರಲಿದ್ದು, ಆನ್-ರೋಡ್ ಕಾರ್ಯಕ್ಷಮತೆ ಮತ್ತು ಆಫ್-ರೋಡ್ ಪ್ರದರ್ಶನ ಈ ಕಾರಿಗೆ ಹೋಲಿಸಿದರೆ ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮೊದಲ ರೋಡ್ ರೋವರ್ ಮಾದರಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ ಎನ್ನಬಹುದು. ಆದರೆ, 2019ರಲ್ಲಿ ನೆಡೆಯುವ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ಜಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಹೊಸ ಬ್ರಾಂಡನ್ನು ಪರಿಚಯಿಸಲಿದೆ ಮತ್ತು ಬಿಡುಗಡೆಯನ್ನು 2020ರಲ್ಲಿ ಮಾಡಲಿದೆ ಎಂಬ ಮಾಹಿತಿ ಹೊರ ಬಂದಿದೆ.

ರೋಡ್ ರೋವರ್ ಎಂಬ ಹೆಸರಿಗೆ ಇತಿಹಾಸದ ನಂಟು ಹೊಂದಿದೆ ಎನ್ನಬಹುದು. 1950ರ ದಶಕದಲ್ಲಿ ಈ ಹೆಸರನ್ನು ಕಂಪನಿ ತನ್ನ ಪ್ರಾಯೋಗಿಕ ಮಾದರಿಗೆ ಬಳಸಿದ್ದನ್ನು ನಾವು ಸ್ಮರಿಸಬಹುದಾಗಿದೆ ಹಾಗು ಜಗ್ವಾರ್ ಲ್ಯಾಂಡ್ ರೋವರ್ ಕಂಪನಿ ಈ ದಶಕದ ಅಂತ್ಯದ ವೇಳೆಗೆ ಹೊಸ ರೋವರ್ ಮಾದರಿಗಳನ್ನು ರಸ್ತೆಗೆ ಪರಿಚಯಿಸುತ್ತದೆ.

ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವನ್ನು ಹೆಚ್ಚಿಸಲು ಹೊಸ ಬ್ರಾಂಡ್ ಅಡಿಯಲ್ಲಿ ವಿದ್ಯುತ್ ಮಾದರಿಗಳನ್ನು ಜಾಗ್ವಾರ್ ಬಿಡುಗಡೆಗೊಳಿಸುತ್ತಿದ್ದು, ಪರಿಸರ ಸ್ನೇಹಿ ವಾಹನಗಳು ಕಡೆಗೆ ತನ್ನ ಗಮನವನ್ನು ಬದಲಾಯಿಸುವ ಮೂಲಕ ಜೆಎಲ್ಆರ್ ಒಂದು ದಿಟ್ಟ ಹೆಜ್ಜೆ ಇಟ್ಟಿದೆ ಎನ್ನಬಹುದು.


Click it and Unblock the Notifications








