296ಬಿಎಚ್‌ಪಿ ಉತ್ಪಾದಿತ ಪೆಟ್ರೋಲ್ ಎಂಜಿನ್ ಬಿಡುಗಡೆ ಮಾಡಿದ ಜಾಗ್ವಾರ್
ಜಾಗ್ಪಾರ್ ಉತ್ಪಾದಿತ 296 ಬಿಎಚ್‌ಪಿ ಪೆಟ್ರೋಲ್ ಎಂಜಿನ್ ಬಿಡುಗಡೆಯಾಗಿದ್ದು, ಎಕ್ಸ್‌ಇ, ಎಕ್ಸ್ಎಫ್ ಮತ್ತು ಎಫ್-ಪೇಸ್ ಕಾರು ಮಾದರಿಗಳಲ್ಲಿ ಸುಧಾರಿತ ತಂತ್ರಜ್ಞಾನ ಹೊಂದಿರುವ 296 ಬಿಎಚ್‌ಪಿ ಎಂಜಿನ್‌ನೊಂದಿಗೆ ಅಭಿವೃದ್ದಿಗೊಳ್ಳಲಿವೆ.
ಜಾಗ್ಪಾರ್ ಉತ್ಪಾದಿತ 296 ಬಿಎಚ್‌ಪಿ ಪೆಟ್ರೋಲ್ ಎಂಜಿನ್ ಬಿಡುಗಡೆಯಾಗಿದ್ದು, ಎಕ್ಸ್‌ಇ, ಎಕ್ಸ್ಎಫ್ ಮತ್ತು ಎಫ್-ಪೇಸ್ ಕಾರು ಮಾದರಿಗಳಲ್ಲಿ ಸುಧಾರಿತ ತಂತ್ರಜ್ಞಾನ ಹೊಂದಿರುವ 296 ಬಿಎಚ್‌ಪಿ ಎಂಜಿನ್‌ನೊಂದಿಗೆ ಅಭಿವೃದ್ದಿಗೊಳ್ಳಲಿವೆ.

ಇತ್ತೀಚೆಗೆ ಹೊಸ ಕಾರು ಮಾದರಿಗಳಲ್ಲಿ 2-ಲೀಟರ್ ಇನ್ಜೆನಿಯಂ ಪೆಟ್ರೋಲ್ ಎಂಜಿನ್ ಪರಿಚಯಿಸಿರುವ ಜಾಗ್ವಾರ್, ಮುಂಬರುವ ಎಕ್ಸ್‌ಇ, ಎಕ್ಸ್ಎಫ್ ಮತ್ತು ಎಫ್-ಪೇಸ್ ಕಾರುಗಳಲ್ಲಿ 296 ಬಿಎಚ್‌ಪಿ ಉತ್ಪಾದಿತ ಎಂಜಿನ್ ಅಳವಡಿಕೆ ಮಾಡಲಿದೆ.

ಇನ್ನು 2-ಲೀಟರ್ ಇನ್ಜೆನಿಯಂ ಪೆಟ್ರೋಲ್ ಎಂಜಿನ್ 296ಬಿಎಚ್‌ಪಿ ಮತ್ತು 400ಎನ್ಎಂ ಉತ್ಪಾದನಾ ಶಕ್ತಿ ಹೊಂದಿದ್ದು, ಅತಿ ಹೆಚ್ಚು ಪವರ್ ಟಾರ್ಕ್ ಬಿಡುಗಡೆ ಮಾಡುತ್ತದೆ.

ಮೊದಲ ಬಾರಿಗೆ 296 ಬಿಎಚ್‌ಪಿ ಪೆಟ್ರೋಲ್ ಎಂಜಿನ್ ಅನ್ನು ನಾಲ್ಕು ಸಿಲಿಂಡರ್ ಆವೃತ್ತಿಯಾಗಿರುವ ಎಫ್-ಟೈಪ್ ಸ್ಪೋರ್ಟ್ ಕಾರಿನಲ್ಲಿ ಅಳವಡಿಸಿರುವ ಜಾಗ್ವಾರ್, ತದನಂತರ ಎಕ್ಸ್‌ಇ , ಎಕ್ಸ್ಎಫ್ ಮತ್ತು ಎಫ್-ಪೇಸ್ ಕಾರುಗಳಲ್ಲಿ ಹೊಸ ಎಂಜಿನ್ ಪರಿಚಯಿಸಲಿದೆ.

ಈ ಹಿಂದೆ ಫೆಬ್ರುವರಿಯಲ್ಲಿ 2-ಲೀಟರ್ ಇನ್ಜೆನಿಯಂ ಪೆಟ್ರೋಲ್ ಎಂಜಿನ್ ಬಿಡುಗಡೆ ಮಾಡಿದ್ದ ಜಾಗ್ಪಾರ್, 197ಬಿಎಚ್‌ಪಿ ಹಾಗೂ 247ಬಿಎಚ್‌ಪಿ ಆವೃತ್ತಿ ಎರಡು ಹೊಸ ಬಗೆಯ ಎಂಜಿನ್ ಪರಿಚಯಿಸಿತ್ತು.

ಆದ್ರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗಣವಾಗಿ 296 ಬಿಎಚ್‌ಪಿ ಪೆಟ್ರೋಲ್ ಎಂಜಿನ್ ಬಿಡುಗಡೆ ಮಾಡಲಾಗಿದ್ದು, ಕೇವಲ 5.5 ಸೇಕೆಂಡುಗಳಲ್ಲಿ 100ಕಿ.ಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿವೆ.


Click it and Unblock the Notifications








