ಬರಲಿದೆ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ವಿನೂತನ ಜೀಪ್ ಕಂಪಾಸ್

Written By:

ಮೇಡ್ ಇನ್ ಇಂಡಿಯಾ ಖ್ಯಾತಿ 2017ರ ಜೀಪ್ ಕಂಪಾಸ್ ಕಾರು ಆವೃತ್ತಿಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ್ದು, ಇದೀಗ ಮಧ್ಯಮ ಗಾತ್ರದ 1.6-ಲೀಟರ್ ಡಿಸೇಲ್ ಎಂಜಿನ್ ಮಾದರಿಯನ್ನು ಪರಿಚಯಿಸಲು ಜೀಪ್ ಸಂಸ್ಥೆಯು ಸಜ್ಜುಗೊಳ್ಳುತ್ತಿದೆ.

ಬರಲಿದೆ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ವಿನೂತನ ಜೀಪ್ ಕಂಪಾಸ್

ಈಗಾಗಲೇ 1.6-ಲೀಟರ್ ಡೀಸೆಲ್ ಎಂಜಿನ್ ಕಾರು ಮಾದರಿಯ ಪರೀಕ್ಷಾ ಕಾರ್ಯಗಳನ್ನು ಕೈಗೊಂಡಿರುವ ಜೀಪ್ ಸಂಸ್ಥೆಯು ಪುಣೆ ಮತ್ತು ಮುಂಬೈ ನಡುವೆ ಸ್ಪಾರ್ಟ್ ಟೆಸ್ಟಿಂಗ್ ನಡೆಸುತ್ತಿದ್ದು, ಅಕ್ಟೋಬರ್ ಇಲ್ಲವೇ ನವೆಂಬರ್ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬರಲಿದೆ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ವಿನೂತನ ಜೀಪ್ ಕಂಪಾಸ್

ಜುಲೈ 31ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ 2017ರ ಜೀಪ್ ಕಂಪಾಸ್ ಮಾದರಿಗಳಲ್ಲಿ ಡೀಸೆಲ್ ಆವೃತ್ತಿಯು 2.0-ಲೀಟರ್ ಎಂಜಿನ್ ಹೊಂದಿತ್ತು. ಈ ಹಿನ್ನೆಲೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ 1.6-ಲೀಟರ್ ಎಂಜಿನ್ ಆಯ್ಕೆಯನ್ನು ನೀಡಲಾಗುತ್ತಿದ್ದು, ಪ್ರಸ್ತುತ ಮಾದರಿಗಿಂತ ರೂ. 60 ಸಾವಿರದಿಂದ ರೂ.70 ಸಾವಿರ ಬೆಲೆ ಇಳಿಕೆ ಮಾಡುವ ಬಗೆಗೆ ಸುಳಿವು ನೀಡಿದೆ.

Recommended Video - Watch Now!
Jeep Compass Launched In India - DriveSpark
ಬರಲಿದೆ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ವಿನೂತನ ಜೀಪ್ ಕಂಪಾಸ್

ಸದ್ಯ ಮಾರುತಿ ಸುಜುಕಿ ಎಸ್ ಕ್ರಾಸ್ ಆವೃತ್ತಿ ಕೂಡಾ 1.6-ಲೀಟರ್ ಟರ್ಬೋ ಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿದ್ದು, ಇದೇ ಉದ್ದೇಶದಿಂದ 2.0-ಲೀಟರ್ ಜೊತೆಗೆ 1.6-ಲೀಟರ್ ಡಿಸೇಲ್ ಎಂಜಿನ್ ಪರಿಚಯಿಸುವ ಮಹತ್ವದ ನಿರ್ಧಾರಕ್ಕೆ ಜೀಪ್ ಕಂಪಾಸ್ ಹಸಿರು ನಿಶಾನೆ ತೊರಿದೆ.

ಬರಲಿದೆ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ವಿನೂತನ ಜೀಪ್ ಕಂಪಾಸ್

ಇದರಿಂದ ಮಾರುತಿ ಸುಜುಕಿ ಎಸ್ ಕ್ರಾಸ್ ಸೇರಿದಂತೆ ಪ್ರಮುಖ ಕಾರು ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಗಳಿದ್ದು, 120-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಬರಲಿದೆ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ವಿನೂತನ ಜೀಪ್ ಕಂಪಾಸ್

ಜೊತೆಗೆ ಸ್ಪೋರ್ಟ್, ಲ್ಯಾಂಗಿಟ್ಯುಡ್ ಮತ್ತು ಲಿಮಿಟೆಡ್ ಎಂಬ ಮೂರು ಪ್ರಮುಖ ಆವೃತ್ತಿಗಳಲ್ಲಿ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಆವೃತ್ತಿಯು 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ಬರಲಿದೆ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯ ವಿನೂತನ ಜೀಪ್ ಕಂಪಾಸ್

ಇದಕ್ಕಾಗಿಯೇ 1.6-ಲೀಟರ್ ಎಂಜಿನ್ ಆಯ್ಕೆಯನ್ನು ಹೊರತರುತ್ತಿರುವ ಜೀಪ್ ಕಂಪಾಸ್ ಸಂಸ್ಥೆಯು ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸುವ ಮೂಲಕ ಆಟೋ , ಸ್ನೋ, ಸ್ಯಾಂಡ್ ಮತ್ತು ಮಡ್ ಮೂಡ್‌ಗಳಲ್ಲಿ ಚಾಲನೆಗೆ ಅವಕಾಶ ನೀಡಿರುವುದು ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿದೆ.

Read more on ಜೀಪ್ jeep
English summary
Read in Kannada about Jeep Compass With 1.6-Litre Diesel Engine Spotted Testing In India.
Story first published: Wednesday, September 27, 2017, 12:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark