ಕಡಿಮೆ ಅವಧಿಯಲ್ಲಿ 10000 ಜೀಪ್ ಕಂಪಾಸ್ ಕಾರುಗಳು ಬುಕ್ ಆದ್ವು
ಅಮೇರಿಕ ದೇಶದ ಎಸ್‌ಯುವಿ ಕಾರು ತಯಾರಕ ಕಂಪೆನಿಯಾದ ಜೀಪ್ ತನ್ನ ಹೊಚ್ಚ ಹೊಸ ಕಂಪಾಸ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಭಾರತದ ಜನತೆಯ ಮನ ಗೆಲ್ಲುವಲ್ಲಿ ಸಫಲವಾಗಿದೆ.
ಅಮೇರಿಕ ದೇಶದ ಎಸ್‌ಯುವಿ ಕಾರು ತಯಾರಕ ಕಂಪೆನಿಯಾದ ಜೀಪ್ ತನ್ನ ಹೊಚ್ಚ ಹೊಸ ಕಂಪಾಸ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಭಾರತದ ಜನತೆಯ ಮನ ಗೆಲ್ಲುವಲ್ಲಿ ಸಫಲವಾಗಿದೆ.

ಕೇವಲ ಎರಡೇ ತಿಂಗಳ ಅವಧಿಯಲ್ಲಿ ಸರಿ ಸುಮಾರು 10000 ಜೀಪ್ ಕ್ಯಾಂಪಸ್ ವಾಹನಗಳು ಬುಕ್ ಆಗುವ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂನ್ 19ರಂದು ಬುಕಿಂಗ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಈ ವಾಹನವು 92,000ಕ್ಕೂ ಹೆಚ್ಚು ಗ್ರಾಹಕ ವಿಚಾರಣೆಗಳನ್ನು ಸ್ವೀಕರಿಸಿದೆ.

`ಜುಲೈ 31ರಂದು ಭಾರತದಾದ್ಯಂತ ಬಿಡುಗಡೆಯಾಗಿರುವ ಈ ಎಸ್‌ಯುವಿ ಕಾರು, ಹುಂಡೈ ಕ್ರೀಟ್ ಮತ್ತು ಮಹೀಂದ್ರಾ XUV500 ನಂತಹ ಬಲಿಷ್ಠ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

ಬೇಡಿಕೆಯನ್ನು ಪೂರೈಸಲು ಕಂಪನಿಯು ರಂಜನ್‌ಗೌನ್ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ, ಈ ಘಟಕದಲ್ಲಿ ಕಂಪಾಸ್ ಕಾರು ಮಾತ್ರವಲ್ಲದೇ ಬಲಗೈ ಡ್ರೈವ್ ಹೊಂದಿರುವ ಮಾರುಕಟ್ಟೆಗಳಿಗೆ ಕಾರುಗಳನ್ನು ರಫ್ತು ಮಾಡಲಿದೆ.

ವಾರಕ್ಕೆ 6 ದಿನಗಳಂತೆ ದಿನಕ್ಕೆ ಎರಡು ಶಿಫ್ಟ್‌ಗಳಲ್ಲಿ ಕಾರು ಕಂಪನಿ ವಾಹನ ಉತ್ಪಾದನೆ ಮಾಡುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಕಾಯುವ ಅವಧಿಗಳು ಕಡಿಮೆಯಾಗುವ ಸಾಧ್ಯತೆಯಿದೆ.

ಜೀಪ್ ಕಂಪಾಸ್ 1.4 ಟರ್ಬೊ ಪೆಟ್ರೋಲ್ ಆವೃತ್ತಿಗೆ ರೂ. 14.97 ಲಕ್ಷ ರೂಪಾಯಿ ಬೆಲೆಯಿಂದ ಪ್ರಾರಂಭವಾಗಲಿದ್ದು, ಡೀಸೆಲ್ 4ಎಕ್ಸ್4 ರೂಪಾಂತರವು ರೂ. 20.65 ಲಕ್ಷ ಬೆಲೆ ಪಡೆದುಕೊಂಡಿದೆ. ಭಾರತ ಸರ್ಕಾರದ ಹೊಸ 10% ಸೆಸ್ಸ್‌ನಿಂದಾಗಿ ಕಾರಿನ ಬೆಲೆ 1.5 ಲಕ್ಷ ಹೆಚ್ಚಿಗೆಯಾಗಿದೆ ಎನ್ನುವುದನ್ನು ಗಮನಿಸಬಹುದಾಗಿದೆ.

ಎಸ್‌ಯುವಿ ಕಾರು ಖರೀದಿಸಲು ಬಯಸುವವರಿಗೆ ಈ ಕಾರು ಹೆಚ್ಚು ಸೂಕ್ತ ಎನ್ನಬಹುದಾಗಿದ್ದು, ಮುಂಬರುವ ತಿಂಗಳುಗಳಲ್ಲಿ ಜೀಪ್ ಕಂಪಾಸ್ ಹೆಚ್ಚು ರೂಪಾಂತರಗಳನ್ನು ಪಡೆದುಕೊಳ್ಳಲಿದೆ. ಡೀಸೆಲ್ ಸ್ವಯಂಚಾಲಿತ ರೂಪಾಂತರವು ಮುಂದಿನ ವರ್ಷ ಪ್ರಾರಂಭವಾಗುತ್ತದೆ.


Click it and Unblock the Notifications