ಬೆಂಗಳೂರಿನಲ್ಲಿ ಅಪಘಾತಕ್ಕಿಡಾದ ಹೊಚ್ಚ ಹೊಸ ಜೀಪ್ ಕಂಪಾಸ್

Written By:

ಮೊನ್ನೆಯಷ್ಟೇ ಬಿಡುಗಡೆಗೊಂಡಿದ್ದ ಮೇಡ್ ಇನ್ ಇಂಡಿಯಾ ಖ್ಯಾತಿಯ ಜೀಪ್ ಕಂಪಾಸ್ ಹೊಸ ಮಾದರಿಯು ಮೊದಲ ಬಾರಿಗೆ ಅಪಘಾತಕ್ಕಿಡಾಗಿದ್ದು, ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ವರದಿ ಇಲ್ಲಿದೆ.

To Follow DriveSpark On Facebook, Click The Like Button
ಬೆಂಗಳೂರಿನಲ್ಲಿ ಅಪಘಾತಕ್ಕಿಡಾದ ಹೊಚ್ಚ ಹೊಸ ಜೀಪ್ ಕಂಪಾಸ್

ಅತಿ ವೇಗದಲ್ಲಿದ್ದ ಹೊಸ ಮಾದರಿಯ ಜೀಪ್ ಕಂಪಾಸ್ ಎಸ್‌ಯುವಿ ಒಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳಿಂದಾಗಿ ಚಾಲಕ ಪ್ರಾಣಾಪಾಯಗಳಿಂದ ಪಾರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಅಪಘಾತಕ್ಕಿಡಾದ ಹೊಚ್ಚ ಹೊಸ ಜೀಪ್ ಕಂಪಾಸ್

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಜೀಪ್ ಕಂಪಾಸ್ ಆವೃತ್ತಿಯ ಲಿಮಿಟೆಡ್(ಒ) ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿದೆ.

ಬೆಂಗಳೂರಿನಲ್ಲಿ ಅಪಘಾತಕ್ಕಿಡಾದ ಹೊಚ್ಚ ಹೊಸ ಜೀಪ್ ಕಂಪಾಸ್

ಇನ್ನು ಹೊಸ ಕಾರಿನ ಮೇಲೆ ತಾತ್ಕಲಿಕ ನೋಂದಣಿ ಸಂಖ್ಯೆಗಳನ್ನು ಹಾಕಲಾಗಿದ್ದು, ಖರೀದಿ ಮಾಡಿ ಕೇವಲ 2 ದಿನಗಳಾಗಿತ್ತು ಎನ್ನಲಾಗಿದೆ. ಆದ್ರೆ ಹೊಸ ಕಾರಿನ ಮಾಲೀಕ ಯಾರು ಎಂಬುವುದು ಸ್ಪಷ್ಟವಾಗಿಲ್ಲ.

ಬೆಂಗಳೂರಿನಲ್ಲಿ ಅಪಘಾತಕ್ಕಿಡಾದ ಹೊಚ್ಚ ಹೊಸ ಜೀಪ್ ಕಂಪಾಸ್

ವೇಗದಲ್ಲಿದ್ದಾಗ ಎಡಕ್ಕೆ ತಿರಗಲು ಯತ್ನಿಸುವ ವೇಳೆ ಈ ಘಟನೆ ನಡೆದಿದ್ದು, ಮುಂಭಾಗ ಚಕ್ರಗಳು ಸಂಪೂರ್ಣವಾಗಿ ಎಡಕ್ಕೆ ತಿರುಗಿವೆ. ಆದ್ರೆ ಘಟನೆಯಲ್ಲಿ ಯಾವುದೇ ಗಂಭೀರ ಪ್ರಮಾಣದ ಹಾನಿಗಳಾಗಿಲ್ಲ.

ಇದಕ್ಕೆ ಕಾರಣ ಜೀಪ್ ಕಂಪಾಸ್ ಹೊಸ ಕಾರಿನಲ್ಲಿ ಎಬಿಎಸ್ ಮತ್ತು ಇಎಸ್‌ಪಿ ತಂತ್ರಜ್ಞಾನ ಸೇರಿದಂತೆ ಆವ್ ವೀಲ್ಹ್ ಡ್ರೈವಿಂಗ್ ವ್ಯವಸ್ಥೆಯಿದ್ದು, ಅಪಘಾತದ ತೀವ್ರತೆಯನ್ನು ತಗ್ಗಿಸುವಲ್ಲಿ ಇವುಗಳ ಪಾತ್ರ ದೊಡ್ಡದು ಎಂದು ಹೇಳಬಹುದು.

Tata Tiago XTA AMT Launched In India | In Kannada - DriveSpark ಕನ್ನಡ
ಬೆಂಗಳೂರಿನಲ್ಲಿ ಅಪಘಾತಕ್ಕಿಡಾದ ಹೊಚ್ಚ ಹೊಸ ಜೀಪ್ ಕಂಪಾಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಪ್ರಮುಖ ಕಾರು ಮಾದರಿಗಳಲ್ಲೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ನಿನ್ನೇ ತಡರಾತ್ರಿ ನಡೆದ ಜೀಪ್ ಕಂಪಾಸ್ ಅಪಘಾತದ ತೀವ್ರತೆಯನ್ನು ತಡೆಯಲು ಹೊಸ ತಂತ್ರಜ್ಞಾನಗಳು ಸಹಕಾರಿ ಎಂದು ಹೇಳಬಹುದು.

Read more on ಜೀಪ್ jeep
English summary
Read in Kannada about Jeep Compass Crashes In Bangalore.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark